ಜನರನ್ನು ಆಕರ್ಷಿಸಿದ ಫಲಪುಷ್ಪ್ಪ ಪ್ರದರ್ಶನ : ರಂಗೋಲಿಯಲ್ಲಿ ಮೂಡಿ ಬಂದ ಮಹನೀಯರ ಚಿತ್ರ : ಸೇವಂತಿಗಿಯಲ್ಲಿ ಗಂಡುಗಲಿ ಕುಮಾರರಾಮನ ಕೋಟೆ..

ಬಳ್ಳಾರಿ / ಕಂಪ್ಲಿ : ಕಂಪಲಿ ನಾಡಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಮುಖ್ಯ ಆಕರ್ಷಣೆಯಾಗಿರುವುದು ಕಂಡು ಬಂತು. ಕಂಪ್ಲಿ ಉತ್ಸವ ಹಿನ್ನಲೆ ಇಲ್ಲಿನ ಸಕ್ಕರೆ ಕಾರ್ಖಾನೆಯ ಮುಖ್ಯ ವೇದಿಕೆಯ ಎದುರುಗಡೆಯ ಆವರಣದಲ್ಲಿ ತೋಟಗಾರಿಕೆ, ಕೃಷಿ, ಆರೋಗ್ಯ ಸೇರಿದಂತೆ ನಾನಾ ಇಲಾಖೆಯ ವಸ್ತು ಪ್ರದರ್ಶನ ನಡೆಯಿತು. ಸೇವಂತಿಗಿ ಹೂವುಗಳಿಂದ ಗಂಡುಗಲಿ ಕುಮಾರರಾಮನ ಕೋಟೆ ಸ್ಥಾಪಿಸುವ ಜೊತೆಗೆ ಐತಿಹಾಸಿಕ ಸೋಮಪ್ಪ ಮೂರ್ತಿಯನ್ನು ನಿರ್ಮಿಸಲಾಗಿದೆ. ಸಿರಿಧಾನ್ಯಗಳಿಂದ ನಾನಾ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಬುಧವಾರ ಸಂಜೆ ತುಂಗಭದ್ರಾ ಆರತಿ ಪ್ರಯುಕ್ತ ವಿಜೃಂಭಣೆಯಿAದ ಭವ್ಯ ಮೆರವಣಿಗೆ ನಡೆದಿತ್ತು. ಗುರುವಾರದ ಉತ್ಸವದ ನಿಮಿತ್ಯ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿದೆ. ಇಲ್ಲಿನ ಪ್ರದರ್ಶನದಲ್ಲಿ ನೀರಿನ ಜಲಪಾತ ಹರಿಸುವಂತಹ ನಿಟ್ಟಿನಲ್ಲಿ ಕಲಾಕೃತಿಯೊಂದಿಗೆ ಬಿಂಬಿಸಲಾಗಿದೆ.

ಅರಳಿ ಎಲೆಯಲ್ಲಿ ನಾನಾ ಕಲಾಕೃತಿಗಳು ಮೂಡಿವೆ. ತರಕಾರಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಒಡಮೂಡಿದ್ದಾರೆ. ಪುಷ್ಪದಲ್ಲಿ ಅಲಂಕಾರಗೊAಡ ಚಿಟ್ಟೆ ಚಿತ್ರಪಟವಾಗಿದೆ. ಹೀಗೆ ನಾನಾ ತರದಲ್ಲಿ ಫಲಪುಷ್ಟಗಳ ಪ್ರದರ್ಶನ ನಡೆಯಿತು. ಉತ್ಸವಕ್ಕೆ ಹರಿದ ಬಂದ ಸಾಕಷ್ಟು ಜನರು, ವೀಕ್ಷಕರು ಫಲಪುಷ್ಟ ಪ್ರದರ್ಶನ ಹಾಗೂ ಸಿರಿಧಾನ್ಯ, ಆರೋಗ್ಯ ಸೇರಿದಂತೆ ಇತರೆ ಇಲಾಖೆಯ ಪ್ರದರ್ಶನವನ್ನು ಕಣ್ತುಂಬಿಕೊAಡರು. ಇಲ್ಲಿನ ವಸ್ತು ಪ್ರದರ್ಶನಕ್ಕೆ ಶಾಸಕ ಜೆ.ಎನ್.ಗಣೇಶ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.

ವರದಿ : ಜಿಲಾನಸಾಬ್ ಬಡಿಗೇರ್
