ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ – ಬಸವರಾಜ ಮ್ಯಾಗಳಮನಿ…

ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ – ಬಸವರಾಜ ಮ್ಯಾಗಳಮನಿ.

ಗಂಗಾವತಿ : ಜೂ-12ನಗರದ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ತಗ್ಗು ಗುಂಡಿಗಳಿಂದ ಕೂಡಿದ್ದು ಅಪಘಾತಗಳು ಸಂಭವಿಸುತ್ತಿವೆ. ನಗರದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಹುಲಿಗಿಯ ಹುಲಿಗೆಮ್ಮ ದೇವಿ ಮತ್ತು ಅಂಜನಾದ್ರಿ ದೇವಸ್ಥಾನಗಳಿಗೆ ವಿವಿಧ ಪ್ರದೇಶಗಳಿಂದ ನಗರದ ಒಳಗಡೆಯಿಂದ ವಾಹನಗಳು ಸಂಚರಿಸುತ್ತಿವೆ. ರಸ್ತೆಯಲ್ಲಿನ ಗುಂಡಿಗಳು ಸಾವಿಗಾಗಿ ಬಾಯಿ ತೆರೆದು ಕಾಯುತ್ತಿವೆ. ಗುಂಡಿಗಳಿಗೆ ಕೇವಲ ಮಣ್ಣು ಅಥವಾ ಕಳಪೆಮಟ್ಟದ ಸಿಮೆಂಟ್ ಕಲ್ಲುಗಳಿಂದ ತೇಪೆ ಹಚ್ಚಿ ತಾತ್ಕಾಲಿಕ ರಿಪೇರಿ ಮಾಡುವ ಬದಲಾಗಿ ಶಾಶ್ವತ ರಿಪೇರಿ ಮಾಡಬೇಕು.ನಗರದ ಕಿರಾಣಿ ಮತ್ತು ಇತರೆ ಅಂಗಡಿಯ ಮಾಲೀಕರು ನಗರದಲ್ಲಿ ಫುಟ್ ಬಾತ್ ಒತ್ತುವರಿ ಮಾಡಿದ್ದಾರೆ. ಇದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗಿದ್ದಲ್ಲದೆ ದ್ವಿಚಕ್ರ ವಾಹನಗಳು, ಕಾರುಗಳ ಪಾರ್ಕಿಂಗ್ ಸಮಸ್ಯೆಯಾಗಿರುತ್ತದೆ. ಸಂಚಾರ ಸುಗಮವಾಗಲು ಫುಟ್ಕಾತ್ ತೆರವುಗೊಳಿಸುವ ಕ್ರಮಕೈಗೊಳ್ಳಬೇಕು.ಡಾಕ್ಟರ್ ಚಂದ್ರಪ್ಪ ಆಸ್ಪತ್ರೆ ಹಾಗೂ ಬಸ್ ನಿಲ್ದಾಣದ ಸಮೀಪ ಇದ್ದ ಡಿವೈಡರ್ ಇರುವದನ್ನು ಕಿತ್ತು ಹಾಕಿ ಮತ್ತೆ ಹೊಸದಾಗಿ ಮಾಡುತ್ತಿರುವದು ಖಂಡನೀಯ. ಹತ್ತು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ಮಾಡಿ ಅದೇ ಸ್ಥಳಕ್ಕೆ ಮಾತ್ರ ಖರ್ಚು ಮಾಡಲಾಗುತ್ತಿದೆ. ಡಾಕ್ಟರ್ ಸೋಮರಾಜು ಆಸ್ಪತ್ರೆ ಯಿಂದ ಯಶೋಧ ಆಸ್ಪತ್ರೆಯವರೆಗೆ ಡಿವೈಡರ್ ಯಾಕಿಲ?. ಅಲ್ಲಿ ಕಾಮಗಾರಿಗೆ ದುಡ್ಡಿಲ್ಲವೇ? ಅಥವಾ ಅಲ್ಲಿ ಮಾಡಲು ಏನಾದರೂ ಸಮಸ್ಯೆ ಇದೆಯಾ? ನಗರದಲ್ಲಿ ಎಲ್ಲಿ ಡಿವೈಡರ್ ಇಲ್ಲವೋ, ಅಲ್ಲಿ ಡಿವೈಡರ್ ನಿರ್ಮಾಣ ಮಾಡಬೇಕು ಎಂದು ಬಸವರಾಜ ಮ್ಯಗಳಮನಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕನಕದಾಸ್ ಸರ್ಕಲ್ ನಲ್ಲಿರುವ ವಿದ್ಯುತ್ ಕಂಬವು ಸರ್ಕಲ್ ಮಧ್ಯದಲ್ಲಿ ಇರುವುದರಿಂದ ಟ್ರ್ಯಾಫಿಕ್ ನಿಯಮ ಪಾಲನೆ ಮಾಡಲು ಸಾಧ್ಯವಾಗದೇ ಲಾರಿ, ಟ್ಯಾಕ್ಟರ್, ಬಸ್, ಕಾರು ಇತ್ಯಾದಿ ವಾಹನಗಳು ಒಂದೇ ಬದಿಯಲ್ಲಿ ಚಲಿಸುವದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಕಾರಣ ವಿದ್ಯುತ್ ಕಂಬ ರಸ್ತೆಯ ಮಧ್ಯದಲ್ಲಿ ನಿರ್ಮಿಸಬೇಕು. ಹಾಗೂ ಸಂಚಾರಿ ಸಿಗ್ನಲ್ ಅಳವಡಿಸಬೇಕು.ಗಂಗಾವತಿ ಬ್ರಹತ್ ನಗರವಾಗಿದ್ದು ಬೇರೆ ಊರುಗಳಿಂದ ಬರುವ ಜನರಿಗೆ ಮಾರ್ಗ ತಿಳಿಯದೇ ತೊಂದರೆ ಪಡುತ್ತಿದ್ದಾರೆ. ಮಾರ್ಗ ತಿಳಿಯುವಾದಕ್ಕಾಗಿ ವಡ್ಡರ ಹಟ್ಟಿ ಯಿಂದ ತಹಶೀಲ್ದಾರ್ ಕಚೇರಿಯವರೆಗೆ ಹಾಗೂ ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿಯವರೆಗೆ ಹಾಗೂ ಎಲ್ಲಿ ಅವಶ್ಯಕತೆ ಇದೆಯೋ ನಗರದ ಒಳಗಡೆ ಇರುವ ರಸ್ತೆಗಳಲ್ಲಿ ಸ್ಥಳಗಳ ಮಾಹಿತಿಗಾಗಿ ಮಾರ್ಗದ ನಾಮಫಲಕಗಳನ್ನು ಅಳವಡಿಸಬೇಕು.ಬಹು ವರ್ಷಗಳ ಹಿಂದೆ ನಿರ್ಮಾಣಗೊಂಡು ಕೋಟ್ಯಂತರ ರೂಪಾಯಿ ಸರಕಾರಕ್ಕೆ ನಷ್ಟ ಮಾಡಿರುವ ಹಾಗೂ ಜನರ ನಿರಿಕ್ಷೆ ಮಾಡುತ್ತಿರುವ ಗಂಗಾವತಿಯ ಸಿಟಿ ಮಾರ್ಕೆಟ್ ಪ್ರಾರಂಭವಾಗಿರುವುದಿಲ್ಲ. ನಾವು ಮನವಿ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ತಾವುಗಳು ಪ್ರಾರಂಭ ಮಾಡುವ ಮಾತು ಹುಸಿಯಾಗಿದೆ. ನೀವು ಬಾಡಿಗೆಗೆ ವಿಧಿಸಿರುವ ಷರತ್ತುಗಳನ್ನು ಸಡಿಲ ಮಾಡಿ ಬಡ ವ್ಯಾಪಾರಿಗಳಿಗೆ ಅನುಕೂಲ ರೀತಿಯಲ್ಲಿ ನಿಯಮ ಮಾಡಿ. ಯಾವುದೇ ನೆಪ ಹೇಳದೇ ಶೀಘ್ರದಲ್ಲಿ ಪ್ರಾರಂಭ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಬಸವೇಶ್ವರರಿಗೆ 101 ತೆಂಗಿನಕಾಯಿ ಒಡೆದು (ಅರ್ಪಿಸಿ )ಪೂಜೆ ಸಲ್ಲಿಸುವದರ ಮೂಲಕ ನಗರಸಭೆಯ ಆಯುಕ್ತರಿಗೆ ನಾಗರಾಜ ಆರೋಗ್ಯ ಅಧಿಕಾರಿಗಳು ಇವರ ಮುಖಾಂತರ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಚಂದ್ರಶೇಖರ, ರಾಘವೇಂದ್ರ ,ಚಂದಾಪಾಷಾ , ದುರಗಪ್ಪ, ಹಾಲಪ್ಪ,ರಾಮಣ್ಣ ಮತ್ತಿತರು ಭಾಗವಹಿಸಿದರು.

Leave a Reply

Your email address will not be published. Required fields are marked *