ಕನಕಗಿರಿ : ಸ್ವಾಮಿ ವಿವೇಕಾನಂದರ ಮತ್ತು ರಾಷ್ಟ್ರಮಾತಾ ಜೀಜಾಬಾಯಿ ಜಯಂತಿ ಆಚರಣೆ….

ಕನಕಗಿರಿ.ಜ.12- ಪಟ್ಟಣದ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಷ್ಟ್ರಮಾತಾ ಜೀಜಾಬಾಯಿ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸ್ವಾಮಿ ವಿವೇಕಾನಂದರ ಜಯಂತಿ, ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ರಾಷ್ಟ್ರಮಾತ ಜೀಜಾಬಾಯಿಯವರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವುದರ ಮೂಲಕ ಸರಳವಾಗಿ ಜಯಂತಿಯನ್ನು ಆಚರಿಸಿ, ಸಿಹಿ ವಿತರಿಸಲಾಯಿತು. ನಂತರ ರಾಷ್ಟ್ರಮಾತಾ ಜೀಜಾಬಾಯಿ ಮಹಿಳಾ ಸಂಘದ ಗೌರವ ಅಧ್ಯಕ್ಷರಾದ ಸುಮಿತ್ರ ಗಂಡ ಫಿರೋಜಿ ರಾವ್ ಮಹಿಪತಿ. ಇವರು ಮಾತನಾಡಿ ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾದರೆ ಜೀಜಾಬಾಯಿ ಶಿವಾಜಿ ಮಹಾರಾಜರ ತಾಯಿಯಾಗಿ ಮಹಿಳೆಯರಿಗೆ ಸ್ಪೂರ್ತಿ ಎಂದರು. ನಂತರ ರಾಷ್ಟ್ರಮಾತಾ ಜೀಜಾಬಾಯಿ ಮಹಿಳಾ ಸಂಘದಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಸಂಘದ ಗೌರವ ಅಧ್ಯಕ್ಷರಾದ ಸುಮಿತ್ರ ಗಂಡ ಫಿರೋಜಿರಾವ್ ಮಹಿಪತಿ, ಕಾರ್ಯದರ್ಶಿ ಲಕ್ಷ್ಮಿಬಾಯಿ ಗಂಡ ಶರಣಪ್ಪ ಮಹಿಪತಿ, ಸದಸ್ಯರಾದ ಲೀಲಾವತಿ ಗಂಡ ಪರಶುರಾಮ್, ಲಕ್ಷ್ಮೀ ಗಂಡ ಭೈರಪ್ಪ, ಹೊನ್ನಮ್ಮ ಗಂಡ ವೀರೇಶ್ ಮಹಿಪತಿ, ರಾಧಾ ಗಂಡ ವೆಂಕೋಬ್ ಮಹಿಪತಿ, ನರಸಮ್ಮ ಗಂಡ ಹನುಮಂತಪ್ಪ ವಾಲೆಕಾರ್, ಪ್ರಕಾಶ್ ಮಹಿಪತಿ, ಲಕ್ಷ್ಮಣ ಮಹಿಪತಿ, ಮೋತಿಲಾಲ್ ಹೆಬ್ಬಾರೆ ಸಂತರು, ನಾಗರಾಜ್ ಹಂಚಾಟೆ, ಬೈರೋಜಿ ವಾಲೇಕರ್, ಶಂಕರ್ ಮಹಿಪತಿ, ಇತರರು ಉಪಸ್ಥಿತರಿದ್ದರು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ 9035332032
