ಲೋಕಾರ್ಪಣೆಗೊಂಡ ಮೂರು ಕವನ ಸಂಕಲನಗಳು.

ಲೋಕಾರ್ಪಣೆಗೊಂಡ ಮೂರು ಕವನ ಸಂಕಲನಗಳು.

ಬಳ್ಳಾರಿ / ಕಂಪ್ಲಿ : ಹೊಸಪೇಟೆಯ ವಿಜಯನಗರ ಜಿಲ್ಲಾ ಸತ್ರ ನ್ಯಾಯಾಲಯ ಸಂಕೀರ್ಣದಲ್ಲಿ ಕಂಪ್ಲಿ-ಕೋಟೆಯ ವಕೀಲ, ಲೇಖಕ ಜಿ.ಪ್ರಕಾಶ್ ಅವರ ಮೂರು ಕವನ ಸಂಕಲನಗಳು ಲೋಕಾರ್ಪಣೆಗೊಂಡವು.ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಇವರು ‘ಬದುಕಿನ ಅನಂತದಲಿ’ (ಸಾಮಾಜಿಕ ಕವನ ಸಂಕಲನ), ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ‘ಜೀವಝೇಂಕಾರ’ (ಪ್ರೇಮಗೀತೆ ಸಂಕಲನ), ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ರೂಪಾ ಇವರು ‘ಕಾವ್ಯಕಂಪನ’ (ಆಧುನಿಕ ವಚನ ಸಂಕಲನ) ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಹೊಸಪೇಟೆ ನ್ಯಾಯಾಲಯದಲ್ಲಿ ಐದು ದಶಕ ವಕೀಲ ವೃತ್ತಿ ಸಲ್ಲಿಸಿದ್ದರಿಂದ ವಕೀಲ ಜಿ.ಪ್ರಕಾಶರನ್ನು ಸನ್ಮಾನಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ, ಅಪರ ಸಿವಿಲ್ ನ್ಯಾಯಾಧೀಶೆ ಜಿ.ಚೈತ್ರಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ, ಉಪಾಧ್ಯಕ್ಷ ಎಚ್.ಎಸ್.ದಿವಾಕರ, ಪದಾಧಿಕಾರಿಗಳಾದ ಕೃಷ್ಣದೇವರಾಯಲು, ಎ.ಎನ್.ಭರತ, ಮಂಜುಶ್ರೀ ಸೇರಿ ಸಂಘದ ಸದಸ್ಯರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *