ವೀರ ಗಂಡುಗಲಿ ಕುಮಾರರಾಮನ ಜಯಂತಿ ನಿಮಿತ್ಯ ಕನ್ನಡದ ಕಡುಗಲಿ ವೀರ ಕಂಪಿಲರಾಯನ ಸರ್ಕಲ್ ಉದ್ಘಾಟನೆ…

ಕಾರಟಗಿ : ವಿಜಯನಗರ : ಜಿಲ್ಲೆ ಕಮಲಾಪುರ ಶ್ರೀ ರಾಮನಗರದಲ್ಲಿ “ವಿಜಯ ವಿಠ್ಠಲ ದೇವಸ್ಥಾನದ ತಿರುವಿನಲ್ಲಿ ವಿಜಯನಗರ ಸಾಮ್ರಾಜ್ಯದ ಮೂಲ ಹಂಪೆಯ ಸಂಸ್ಥಾಪನಾಚಾರ್ಯ ಕರ್ನಾಟಕ ರತ್ನ ಸಿಂಹಾಸನಾಧಿಶ್ವರ ಕನ್ನಡದ ಕಡುಗಲಿ ವೀರ ಕಂಪಿಲರಾಯನ ಸರ್ಕಲ್ ಉದ್ಘಾಟನೆ ಮಾಡಲಾಯಿತು”,ಪರನಾರಿ ಸಹೋದರ ಶ್ರೀ ಗಂಡುಗಲಿ ಕುಮಾರರಾಮನ ಜಯಂತಿಯ ನಿಮಿತ್ಯಶ್ರೀ ರಾಮನಗರ ಗ್ರಾಮದಲ್ಲಿ ಕಂಪ್ಲಿ ಹೆದ್ದಾರಿಯ ಶ್ರೀ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ತಿರುವಿಗೆ ಮೂಲ ಹಂಪೆಯ ಸಂಸ್ಥಾಪನಾಚಾರ್ಯ ದೆಹಲಿ ಸುಲ್ತಾನರನ್ನು ಬಗ್ಗುಬಡಿದ ರಾಜವೀರ ಕಂಪಲಿರಾಯ ವೃತ್ತವೆಂದು ನಾಮಕರಣ ಮಾಡಿ ಸಿಹಿ ವಿತರಿಸಲಾಯಿತು, ಶ್ರೀ ಕೃಷ್ಣದೇವರಾಯ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಹಂಪಿ ಗೈಡ್ ಎಚ್ ಹುಲುಗಪ್ಪ ಹುಲಿ ಉದ್ಘಾಟನೆ ಮಾಡಿದರು ಪ್ರತಿಷ್ಠಾನದ ಪದಾಧಿಕಾರಿಗಳು ಗುರುನಾಥ್ ಕಮಲಾಪುರ,ವಿ ವಿರುಪಾಕ್ಷ, ಎಸ್ ದೇವರಾಜ್, ರಾಜಣ್ಣ ಶ್ರೀ ರಾಮನಗರದ ನಿವಾಸಿಗಳಾದಶ್ರೀ ಗಂಗಾ ಮೇಘ ನಾಯ್ಕ್ ಶಿವ ನಾಯಕ್ ಹನುಮ ನಾಯ್ಕ್ ರಘು ನಾಯಕ್ ಎನ್ ಅಜ್ಜಯ್ಯ ಇನ್ನಿತರರುಇದ್ದರು.