ಪೊಲೀಸ್ ಆಯುಕ್ತರಾದ ದಯಾನಂದ ಐ.ಪಿ.ಎಸ್ ಅಮಾನತ್ತು ಮಾಡಿರುವುದನ್ನು ವಾಪಸ್ಸು ಪಡೆಯುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜ ಆಗ್ರಹ…

ಪೊಲೀಸ್ ಆಯುಕ್ತರಾದ ದಯಾನಂದ ಐ.ಪಿ.ಎಸ್ ಅಮಾನತ್ತು ಮಾಡಿರುವುದನ್ನು ವಾಪಸ್ಸು ಪಡೆಯುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜ ಆಗ್ರಹ

ಗಂಗಾವತಿ: 10/6/2024 ರಂದು ಪೊಲೀಸ್ ಆಯುಕ್ತರಾದ ದಯಾನಂದ ಐ.ಪಿ.ಎಸ್ ಇವರಿಗೆ ಅಮಾನತ್ತು ಮಾಡಿರುವುದನ್ನು ವಾಪಸ್ಸು ಪಡೆಯುವಂತೆ ಗಂಗಾವತಿ ತಾಲೂಕ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ಕೊಪ್ಪಳ ಜಿಲ್ಲೆ ವಿನಂತಿಸಿಕೊಳ್ಳುವುದೇನೆಂದರೆ ಆರ್.ಸಿ.ಬಿ. ಚಾಂಪಿಯನ್ಸ್‌ಗಳ ವಿಜಯೋತ್ಸವದ ಸಂಭ್ರಮ ಕಾರ್ಯಕ್ರಮದ ನಿಮಿತ್ಯ ರಾಜ್ಯ ಸರ್ಕಾರದ 11 ಜನರ ಬಲಿ ತೆಗೆದುಕೊಂಡು ಕರಾಳ ದಿನ ಆಚರಿಸಿದ್ದ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಡಾ ಜಿ ಪರಮೇಶ್ವರ್ ಗೃಹ ಮಂತ್ರಿ ಇವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ ನಾಯಕ ಆಗ್ರಹಿಸಿದರು.ಈ ದುರಂತಕ್ಕೆ ನೇರ ಹೊಣೆಯಾದ ರಾಜ್ಯ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಮಾಣಿಕ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಗೊಳಿಸಿರುವುದು ಸಮಂಜಸವಲ್ಲ. ದಕ್ಷ ಅಧಿಕಾರಿಗಳನ್ನು ಮುಗಿಸುವ ಷಡ್ಯಂತ್ರ ನಡೆದಿದೆ. ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ದಡ್ಡತನ ಹಾಗೂ ಅಸಡ್ಡೆಯಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಿತ್ತು. ಆದರೆ ವಾಲ್ಮೀಕಿ ನಾಯಕ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಆಯುಕ್ತರಾದ ದಯಾನಂದ ಇವರಿಗೆ ಅಮಾನತ್ತಿನ ಶಿಕ್ಷೆ ಕೊಡುವುದು ಯಾವ ನ್ಯಾಯ..?ಇತ್ತೀಚಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನಿಗಮದ 187 ಕೋಟಿ ಹಣ ಲೂಟಿ ಮಾಡಿರುವುದು ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಸಾವಿರಾರು ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸುವುದು ಮತ್ತು ಬುಡಕಟ್ಟು ಸಚಿವಾಲಯಕ್ಕೆ ಸಚಿವರು ಇಲ್ಲದಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯ ಸರಕಾರದ ಸೇಡಿನ ರಾಜಕಾರಣದ ಭಾಗವಾಗಿದೆ. ವಾಲ್ಮೀಕಿ ಜನಾಂಗದ ಸಚಿವರುಗಳಿಗೆ, ಶಾಸಕರುಗಳಿಗೆ ಸಮಾಜದ ಬಗ್ಗೆ ಸ್ವಲ್ಪವೂ ಕಾಳಜಿ ಇದ್ದರೆ ಇಂತಹ ಅನಾಹುತಗಳು ಆಗಲು ಬಿಡುತ್ತಿರಲಿಲ್ಲ. ಈ ದರಿದ್ರ ರಾಜಕಾರಣದಿಂದ ತಮ್ಮ ಸ್ವಾಭಿಮಾನ ನೈತಿಕತೆಯು ಕಳೆದು ಕೊಂಡಿದ್ದಾರೆ. ಸರಕಾರ ವಾಲ್ಮೀಕಿ ಸಮಾಜವನ್ನು ಗುರಿಯಾಗಿಸಿಕೊಂಡೇ ಈ ಮುಂಚೆ ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರಿಗೆ ಎಷ್ಟೇ ಕಿರುಕುಳ ನೀಡಿದರೂ ಎಂತಹ ಸ್ಥಾನಮಾನಗಳನ್ನು ಕೊಟ್ಟಿದ್ದೀರಿ ಎಂಬುವುದು ಸಮಾಜಕ್ಕೆ ತಿಳಿದಿರುವ ವಿಷಯವಾಗಿದೆ. ದಕ್ಷ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವುದಾದರೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ ನಡೆದ 11 ಜನರ ಸಾವಿನ ದುರ್ಘಟನೆ ನಡೆದ 24 ಗಂಟೆಯಲ್ಲೇ ಗೃಹ ಸಚಿವರಾದ ಜಿ. ಪರಮೇಶ್ವರ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕಾಗಿತ್ತು. ಗುಬ್ಬಿ ಮೇಲೆ ಮಾತ್ರ ಬ್ರಹ್ಮಾಸ್ತ್ರ ಪ್ರಯೋಗ ಯಾಕೆ? ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಇಲಾಖೆ ಹಾಗೂ ಯೋಜನೆಗ ಳನ್ನು, ಅಧಿಕಾರಿಗಳನ್ನು ಮುಗಿಸುವ ತಂತ್ರ ಈ ರಾಜ್ಯ ಸರಕಾರ ನಡೆದುಕೊಳ್ಳುತ್ತಿ ರುವುದು ಖಂಡನೀಯ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಕೃಷ್ಣಪ್ಪ ನಾಯಕ,ಜೋಗದ ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ, ಹೊಸಮಲಿ ಮಲ್ಲೇಶಪ್ಪ ನಾಯಕ, ಹನುಮಂತಪ್ಪ ನಾಯಕ ಚೌಡ್ಕಿ,ರಮೇಶ , ಗುಡ್ಡೇಕಲ್ ಬಸಪ್ಪ ನಾಯಕ, ಮರಮನಹಳ್ಳಿ ಬಸಪ್ಪ ನಾಯಕ ಗುಡ್ಡೆಕಲ್ ಶರಣಪ್ಪ ನಾಯಕ ಯಮನೂರಪ್ಪ ನಾಯಕ, ವಿರೂಪಾಕ್ಷಗೌಡ ನಾಯಕ, ಎ.ಜೆ‌ ರಂಗನಾಥ, ಪಂಪಣ್ಣ ಅಸೆಕಟ್ಟಿಗೆ ಹನುಮೇಶ್ ನಾಯಕ,ಹನುಮೇಶ ಕೇಸರಹಟ್ಟಿ,ಪಾಂಡುರಂಗ ಮಲ್ಲಾಪೂರು,ರಾಮಣ್ಣ ನಾಯಕ,ಅರ್ಜುನ ನಾಯಕ,ಸೇರಿದಂತೆ ಹಿರಿಯ ಸಮಾಜದ ಮುಖಂಡರು ಮತ್ತು ಯುವಕರು ಪಾಲ್ಗೊಂಡಿದ್ದರು ಇತರರು ಇದ್ದರು.

Leave a Reply

Your email address will not be published. Required fields are marked *