ಯುವಕರು ಸಾಮಾಜಿಕ ಕಾಯ೯ಗಳಲ್ಲಿ ಮುಂದಾಗಲಿ..

ಗಂಗಾವತಿ. ಯುವ ಜನಾಂದ ದೇಶದ ಆಸ್ತಿಯಾಗಿದ್ದಾರೆ. ಯುವಕರು ಮನಸ್ಸು ಮಾಡಿದರೆ ಏನಾದರೂ ಸಾಧನೆ ಮಾಡಬಲ್ಲರು. ಹಾಗಾಗಿ ಯುವಕರು ಹೆಚ್ಚು ಹೆಚ್ಚು ಸಾಮಾಜಿಕ ಕಾಯ೯ಗಳ ಕಡೆಗೆ ಗಮನ ಹರಿಸಿ, ಇತರರಿಗೆ ಮಾದರಿಯಾಗಲಿ ಎಂದು ನಗರಸಭೆ ಮಾಜಿ ಸದಸ್ಯರಾದ ನಾಗಲಿಂಗಪ್ಪ ಪತ್ತಾರ ಹೇಳಿದರು. ನಗರದ ಅಮರ್ ಭಗತ್ ಸಿಂಗ ನಗರದಲ್ಲಿ ಗಣೇಶ ಉತ್ಸವ ಅಂಗವಾಗಿ ಭಗತ್ ಸಿಂಗ್ ಯುವಕ ಮಂಡಳಿಯ ವತಿಯಿಂದ ಭಾನುವಾರ ಹಮ್ಮಿಕೊಂಡ ಪೌರ ಕಾಮಿ೯ಕರಿಗೆ, ಅಂಗನವಾಡಿ ಹಾಗೂ ಆಶಾ ಕಾಯ೯ಕತೆ೯ಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಣೇಶ ಹಬ್ಬವು ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದರ ಜೊತೆಗೆ ನಗರವನ್ನು ಸ್ವಚ್ಛ ಮಾಡಲು ಪೌರಕಾಮಿ೯ಕರಿಗೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಂಗನವಾಡಿ ಹಾಗೂ ಆಶಾ ಕಾಯ೯ಕತೆ೯ರನ್ನು ಸನ್ಮಾನ ಮಾಡುವ ಮೂಲಕ ಅವರನ್ನು ಗೌರವಿಸಿರುವುದು ಸಂತಸದ ವಿಷಯವಾಗಿದೆ. ಪ್ರತಿ ಬಾರಿಯು ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲು ಯುವಕರು ಮುಂದಾಗಬೇಕಾಗಿದೆ. ಹಬ್ಬಗಳು ಆಡಂಬರಕ್ಕೆ ಮಾತ್ರ ಸಿಮೀತವಾಗದೆ ಇತರರಿಗೂ ಕೂಡ ಮಾದರಿಯಾಗಿರಬೇಕು. ಅದಕ್ಕಾಗಿ ಯುವಕರು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕೆಲಸಗಳನ್ನು ಹಾಗೂ ಕಾಯ೯ಕ್ರಮಗಳನ್ನು ಹಮ್ಮಿಕೊಂಡು ಸಾಮಾಜ ಸುಧಾರಣೆಗೆ ಮುಂದಾಗಬೇಕಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯ ನೀಲಕಂಠ ಕಟ್ಟಿಮನಿ ಮಾತನಾಡಿ, ಸಮಾಜದಲ್ಲಿ ಎಲ್ಲಾ ವಗ೯ದ ಜನರನ್ನು ನಾವುಗಳು ಕಾಣಬಹುದಾಗಿದೆ. ಆಥಿ೯ಕ ಅಷ್ಟೇ ಅಲ್ಲದೆ ಆರೋಗ್ಯ ವಿಚಾರದಲ್ಲೂ ಹಿಂದುಳಿದ ವ್ಯಕ್ತಿಗಳಿಗೆ ಸಹಾಯ ಮಾಡುವಂತ ಕೆಲಸ ಆಗಬೇಕು. ಅನಾರೋಗ್ಯದಲ್ಲಿ ಇರುವ ವ್ಯಕ್ತಿಗಳ ಸಂಕಷ್ಟಕ್ಕೆ ಕೈ ಜೊಡಿಸುವ ಕೆಲಸ ಆಗಬೇಕು. ಇನ್ನೂ ಗಣೇಶ ಉತ್ಸವದಲ್ಲಿ ನಾನಾ ಸ್ಪಧೆ೯ಗಳನ್ನು ಹಮ್ಮಿಕೊಂಡು ಅವರಿಗೆ ಬಹುಮಾನ ಮಾಡುವ ಮೂಲಕ ಪ್ರೋತ್ಸಾಹಿಸಿದ್ದು ಸಂತಸ ವಿಷಯವಾಗಿದೆ ಎಂದು ಹೇಳಿದರು. ನಂತರ ಪೌರಕಾಮಿ೯ಕರಿಗೆ ಹಾಗೂ ಆಶಾ ಕಾಯ೯ಕತೆ೯ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಹಾಗೂ ನಾನಾ ಸ್ಪಧೆ೯ಗಳಲ್ಲಿ ಭಾಗವಹಿಸಿದ ಯುವಕ, ಯುವತಿಯರಿಗೆ ಬಹುಮಾನ ನೀಡಿ, ಗೌರವಿಸಲಾಯಿತು. ಪ್ರಮುಖರಾದ ಶಿವಕುಮಾರ, ಶಿವಣ್ಣ ಗದ್ದಿ, ತ್ಯಾವರಪ್ಪ, ಶರಣಪ್ಪ, ಮಾರುತಿ, ಸಂಗಯ್ಯಸ್ವಾಮಿ, ಶರಣಪ್ಪ, ಕುಮಾರ, ಮಡಿವಾಳಪ್ಪ, ಮಂಜುನಾಥ, ರಾಮು, ವೆಂಕಟೇಶ್, ಸಂಗಮೇಶ, ಆನಂದ ಹಾಗೂ ಇತರರಿದ್ದರು. ———

ಗಂಗಾವತಿ ನಗರದ ಅಮರ ಭಗತ್ ಸಿಂಗ್ ನಗರದಲ್ಲಿ ಗಣೇಶ ಉತ್ಸವ ಕಾಯ೯ಕ್ರಮದಲ್ಲಿ ಅಂಗನವಾಡಿ, ಆಶಾ ಕಾಯ೯ಕತೆ೯ಯರಿಗೆ ಭಾನುವಾರ ಸನ್ಮಾನ ಮಾಡಲಾಯಿತು.
