ರೋಟರಿ ಕ್ಲಬ್ ಗಂಗಾವತಿ ರೈಸ್ ಬೌಲ್ ಪದಗ್ರಹಣ ಸಮಾರಂಭಕ್ಕೆ ಶಾಸಕ ಜನಾರ್ದನ್ ರೆಡ್ಡಿ ಚಾಲನೆ ಕ್ಯಾನ್ಸರ್ ಮುಕ್ತ ಕ್ಷೇತ್ರಕ್ಕೆ ರೈಸ್ ಬೌಲ್ ಸಂಸ್ಥೆಗೆ ಸಂಪೂರ್ಣ ಸಹಕಾರ..

ಗಂಗಾವತಿ. ನಗರದಲ್ಲಿ ಕಳೆದ ವರ್ಷ ಆರಂಭಗೊಂಡಿದ್ದ ರೋಟರಿ ಕ್ಲಬ್ ಗಂಗಾವತಿ ರೈಸ್ ಬೌಲ್ 2025 ಹಾಗೂ 26 ನೇ ಸಾಲಿನ ಪದಗ್ರಹಣ ಸಮಾರಂಭಕ್ಕೆ ಶಾಸಕ ಜನಾರ್ದನ್ ರೆಡ್ಡಿ ಜ್ಯೋತಿ ಬೆಳಗ್ಗೆ ಸೋದರ ಮೂಲಕ ಚಾಲನೆ ನೀಡಿದರು. ನಗರದ ಖಾಸಗಿ ಹೋಟೆಲಿನ ಸಭಾಂಗಣ ಒಂದರಲ್ಲಿ ಜರುಗಿದ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿದಂತೆ ಉಳಿದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುವುದರ ಮೂಲಕ ವಿವಿಧ ಅಂಗ ಸಂಸ್ಥೆಗಳನ್ನು ಹೊಂದಿದೆ. ಪ್ರಸ್ತುತ ಗಂಗಾವತಿ ರೈಸ್ ಬೌಲ್ ಮಹಿಳಾ ಪದಾಧಿಕಾರಿಗಳು ತಮಗಾಗಿ ಹಿಂದೆ ಶ್ರಮಿಸಿದ್ದಾರೆ. ಅವರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್ ರೋಗ ಮುಕ್ತ ಕ್ಷೇತ್ರವನ್ನಾಗಿಸಲು 4000 ವೆಚ್ಚದ ಲಸಿಕೆಯನ್ನು ದೊರೆತಿದ್ದು ಹತ್ತರಿಂದ ಹದಿನಾಲ್ಕು ವರ್ಷದ ಬಾಲಕಿಯರಿಗೆ ಲಸಿಕೆ ಹಾಕುವುದರಿಂದ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಭಾರತಕ್ಕೆ ತಡೆಗಟ್ಟಬಹುದು. ಈ ಒಂದು ಅಭಿಯಾನಕ್ಕೆ ತಾವು ತಮ್ಮ ಮಾತೋಶ್ರೀ ಅವರ ಸವಿ ನೆನಪಿಗಾಗಿ 25 ಲಕ್ಷ ರೂ ಭರಿಸುವುದರ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರೋಟರಿ ಸಂಸ್ಥೆಯಿಂದ ಈ ಸಮಾಜ ಸೇವೆಗೆ ಮುಂದಾಗುವಂತೆ ಪದಾಧಿಕಾರಿಗಳಿಗೆ ಕರೆ ನೀಡಿದರು. ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸುಸಜ್ಜಿತ ರಸ್ತೆ ನಿರ್ಮಾಣ ವಿದ್ಯುತ್ ದೀಪಗಳ ಅಳವಡಿಕೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರಾತಿ ಗೊಂಡಿದ್ದು ಆರು ತಿಂಗಳ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದೆಂದು ಹೇಳಿದರು. ನೂತನ ಅಧ್ಯಕ್ಷರಾಗಿ ಈ ಹಿಂದಿನ ಅಧ್ಯಕ್ಷರಾದ ಗೀತಾ ಚೌದರಿ. ಕಾರ್ಯದರ್ಶಿಯಾದ ಬಿ ಶ್ರೀದೇವಿ. ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಭಾರತ ಅ ಗಲೂರು ಸೇರಿದಂತೆ ಪದಾಧಿಕಾರಿಗಳಿಗೆ ಬೀ ಚಿನ್ನಪ್ಪ ರೆಡ್ಡಿ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ವಿ ತಿರುಪತಿ ನಾಯ್ಡು ಬಿ ಎನ್ ಹೊರಪೇಟೆ. ಹೊಸಕೆರ ಮಂಜುನಾಥ್ ರಾಜೇಶ್ ಕುರಿ ಶೆಟ್ಟರ್ ಟಿ ಆಂಜನೇಯ. ಇತರರು . ಉಪಸ್ಥಿತರಿದ್ದರು.

