ತ್ರಿವಿಧ ದಾಸೋಹಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು. ನಾನು ಕಂಡಂತೆ…. ಅನ್ವರ್ ಮಲ್ಲಾಪುರ್…

ಗಂಗಾವತಿ;> ಕೊಪ್ಪಳ ಜಿಲ್ಲೆಯಲ್ಲಿ ಪ್ರೀತಿಯ ಪೂಜ್ಯರಾದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ನನ್ನ ಶುಭ ಗಮನಗಳು
ನಿಮ್ಮ ಬಗ್ಗೆ ಹೇಳಬೇಕೆಂದರೆ ಬರಿಯಬೇಕೆಂದರೆ ನಿಮ್ಮ ಸರಿಸಮಾನನರಾದ ಮಹಾನ್ ವ್ಯಕ್ತಿಗಳು ಮಹಾಪುರುಷರಾಗಿರಬೇಕು, ನಾನೊಬ್ಬ ಸಾಮನ್ಯ ಯುವಕ ಆದ್ದರಿಂದ ನನ್ನ ಮೇಲೆ ಕ್ಷಮೆ ಇರಲಿ ಪೂಜ್ಯರೆ.  ಮಹಾನ್ ಪುರುಷರ ಬಗ್ಗೆ ಬರೆಯಲು ಅವರನ್ನು ವರ್ಣಿಸಲು ಪದಗಳು ಸಾಲದು. ಆದರೂ ನಿಮ್ಮನ್ನು ನನ್ನ  ಹೃದಯದಲ್ಲಿ ಅಡಗಿಸಿ ಕೊಳ್ಳಲು ಸಾಧ್ಯ ವಾಗಲಿಲ್ಲ ಅದು ಒಡೆದು ಬರವಣಿಗೆಯಾಗಿ ಮೂಡಿ ನಿಮ್ಮ ಮುಂದೆ ಇರುವುದು
” ತಿಕ್ಷವಾಗಿ, ನಿರಂತರಾನ್ವೇಷಕರಾಗಿ ಕಮಲದಳಗಳನ್ನು ನೆನೆಪಿಗೆ ತರುವ ಅದ್ಭುತ ತೇಜೋನ್ವಿತ  ವಿಶಾಲ ನೇತ್ರಾದ್ವಯವು, ಪೂಜ್ಯ ಭಾವವನ್ನು ಉದ್ದೀಪನಗೊಳಿಸುತ್ತವೆ   ನಿಮ್ಮ ನೇತ್ರಗಳು.”ಸಾಧು ಸಂತರು ಸನ್ಯಾಸಿಗಳು ಕೇವಲ ಆತ್ಮ ಸಾಕ್ಷಾತ್ಕಾರಕ್ಕೆ ಮಾತ್ರ ಹಂಬಲಿಸದೆ ಸಮೂಹದ ಬದುಕಿನ ಒಳಿತಿಗಾಗಿ ದುಡಿಯಬೇಕೆಂದು ಸೂಚಿಸುತ್ತಾರೆ. ತಾವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮೂಹದ ಏಳಿಗೆಗಾಗಿ ಶ್ರಮಿಸುತ್ತಿದ್ದೀರಿ. “ಉಚಿತ ವಿದ್ಯಾಭ್ಯಾಸ,ಅನ್ನದಾನ ದಾಸೋಹ,ಆರೋಗ್ಯಸೇವೆ, ನಿಮ್ಮ ಸೃಜನಶೀಲತೆ, ನಿಮ್ಮ ಸಹೃದಯ ಪ್ರೀತಿಯ ಮಾತುಗಳು ವರ್ಣಿಸಲಾಗದು.ನಿಮ್ಮ ವೈಚಾರಿಕತೆ ಭಾಷೆಯ ಜ್ಞಾನದ ಪಾಂಡಿತ್ಯ ಅಗಾಧವಾದದ್ದು ಮತ್ತು ಅಪರಿಮಿತವಾದದ್ದು ಅದು ಹೇಗೆ ಸಾಧ್ಯ ಪೂಜ್ಯರೆ? “ಶಂಕರರ  ಬುದ್ಧಿಮತ್ತೆ (ತೀಕ್ಷ್ಣಮತಿ) ಬುದ್ಧನ ವಿಶಾಲ ಹೃದಯ (ಕರುಣಾಮಯಿ ಹೃದಯ)ಈ ಎರಡು ಸೇರಿಕೊಂಡಾಗ ನಮ್ಮ ಜಗತ್ತಿಗೆ ಒಳ್ಳೆಯದಾಗುತ್ತದೆ ಎನ್ನುವುದು ಜಗತ್ತಿನ ಲಿಖಿತವಾಗಿರುತ್ತೆ. ಅಂತೆ ಆ ಎರಡು ನಿಮ್ಮಲ್ಲಿ ಕಾಣುತ್ತಿದ್ದೇನೆ.” ಪ್ರೇಮವೇ ಶಿವ, ಶಿವನನ್ನು ಪ್ರೇಮಿಸುವುದೇ ಪ್ರಾಣದ ನೇಮ ಎಂಬ ತತ್ವವನ್ನು ಪಾಲಿಸುತ್ತಿದ್ದೀರಿ. ನಿಮ್ಮಲ್ಲಿ “ಎದೆಗೆ ಕಾಂತಿಯನ್ನು ಬಗೆಗೆ ಶಾಂತಿಯನ್ನು ಕೊಡುವ ಬ್ರಹ್ಮ ವಿದ್ಯೆ  ಇರುವುದು “ಈ ಶತಮಾನದ ಶ್ರೇಷ್ಠ ಸಂತರಲ್ಲಿ ತಾವು ಒಬ್ಬರು ಅದು ಹೇಗೆ ಅಂದರೆ ನಿಮ್ಮ ಕಣ್ಣುಗಳಲ್ಲಿ ಯಾವ ಭಾವನೆ ಮತ್ತು ಅಭಿವ್ಯಕ್ತಿಯು ಇಲ್ಲ (ಅವರೇ ನಿಜವಾದ ಸಂತ) ಸಂತ ಅದವರ ಕಣ್ಣುಗಳಲ್ಲಿ ಭಾವನೆ ಮತ್ತು ಅಭಿವ್ಯಕ್ತಿಯು ಇರಬಾರದಂತೆ
“ಮಹಾಪುರುಷರ ಜನ್ಮ ಚರಿತ್ರೆ ಕಾಲದಲ್ಲಿ ಕೊನೆಗೊಂಡರು ಅವರ ಜೀವನ ಯಾತ್ರೆ ಕಾಲಕ್ಕಿಂತಲೂ ಚಿರಂಜೀವಿಯಾದದ್ದು. ಅವರ ಮಾತುಗಳು ಅವರ ವಚನ ಉಪದೇಶಗಳು ಅವರ ಜೀವನ ಉಪಖ್ಯಾನಗಳು,ಎಲ್ಲಕ್ಕಿಂತಲೂ ಅತಿಶಯವಾಗಿ ಅವರ ಚೈತನ್ಯ ಮತ್ತು ಆತ್ಮ ಶಕ್ತಿಗಳು ಜಗಜ್ಜೀವನದ ನಾಡಿಗಳನ್ನು ಪ್ರವೇಶಿಸಿ ಅದರ ರಕ್ತನಾಳಗಳಿಗೆ ಮೊರೆದು ಅದರ ಒಂದೊಂದು ಧಮನಿಯಲ್ಲಿಯೂ ಪ್ರತಿದ್ವನಿಗೈದು ರಕ್ತದಲ್ಲಿ ರಕ್ತವಾಗಿ ಮಾಂಸದಲ್ಲಿ- ಮಾಂಸವಾಗಿ ಅಸ್ತಿಯಲ್ಲಿ ಅಸ್ತಿಯಾಗಿ ಜೀವನದ ಶ್ರೇಯೋಗಮನಕ್ಕೊಂದು ಶಾಶ್ವತ ಪ್ರೇರಣಶಕ್ತಿಯಾಗಿ ಕಷ್ಟ ಸಂಕಷ್ಟಗಳಲ್ಲಿ ಒಂದು ವಜ್ರಕವಚವಾಗಿ ನಿರಾಶೆಯ ತಿಮರದಲ್ಲೊಂದು. ಆಶಾಕಿರಣವಾಗಿ ಚಿರಂತನವಾಗಿರುತ್ತದೆ ಆದ್ದರಿಂದ ಮಹಾಪುರುಷನಿಗೆ ಮರಣವಿಲ್ಲ ಆತನು ಚಿರಂಜೀವಿ ಕರ್ಮಮಯ ಜಗತ್ತಿನಲ್ಲಿ ಆತನು ಚೈತನ್ಯ ಝರ್ರ್ರಿಣಿ ಚಿರಂತರಂಗಿಣಿ” ನಿಮ್ಮಂತವರನ್ನು ಕೊಟ್ಟಂತ ದೇಶ ನನ್ನದು ಆ ಅಭಿಮಾನದಿಂದ ನನ್ನ ಹೃದಯ ಬೀಗುತ್ತಿದೆ ಮಹಾಪುರುಷರು ಆದ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಅನ್ವರ್ ಮಲ್ಲಾಪುರ ತಾ/ಗಂಗಾವತಿ.

Leave a Reply

Your email address will not be published. Required fields are marked *