ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸಿದ್ದಾಪುರದಿಂದ ಶ್ರೀರಾಮನಗರ-ಮರಳಿ ಮಾರ್ಗವಾಗಿ ಗಂಗಾವತಿಗೆ ನೂತನ ಬಸ್ ಆರಂಭ : ರೆಡ್ಡಿ ಶ್ರೀನಿವಾಸ್…
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸಿದ್ದಾಪುರದಿಂದ ಶ್ರೀರಾಮನಗರ-ಮರಳಿ ಮಾರ್ಗವಾಗಿ ಗಂಗಾವತಿಗೆ ನೂತನ ಬಸ್ ಆರಂಭ : ರೆಡ್ಡಿ ಶ್ರೀನಿವಾಸ್…

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸಿದ್ದಾಪುರದಿಂದ ಶ್ರೀರಾಮನಗರ-ಮರಳಿ ಮಾರ್ಗವಾಗಿ ಗಂಗಾವತಿಗೆ ನೂತನ ಬಸ್ ಆರಂಭ : ರೆಡ್ಡಿ ಶ್ರೀನಿವಾಸ್ …
ಗಂಗವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ ಬುಧವಾರ ದಂದು ಸಿದ್ದಾಪುರ ಗ್ರಾಮದಿಂದ ಶ್ರೀರಾಮನಗರ-ಮರಳಿ-ಜಂಗಮರಕಲ್ಗುಡಿ ಮಾರ್ಗವಾಗಿ ಗಂಗಾವತಿಗೆ ನೂತನ ಬಸ್ ಮಾರ್ಗ ಸಂಚಾರಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಶ್ರೀರಾಮನಗರ ಗ್ರಾಮದಿಂದ ಅನೇಕ ವಿದ್ಯಾರ್ಥಿಗಳು ಗಂಗಾವತಿ ನಗರಕ್ಕೆ ಶಾಲಾ-ಕಾಲೇಜಿಗೆ ತೆರಳಲು ತೊಂದರೆ ಇದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಅವರ ಅನುಕೂಲಕ್ಕೆ ನೂತನ ಬಸ್ ಅನ್ನು ಆರಂಭ ಮಾಡಲಾಗಿದೆ. ಅದೇರೀತಿ ಗ್ರಾಮದ ಸಿಎನ್ ಆರ್ ಕಾಲೇಜು ಹಾಗೂ ಬೊಬ್ಬಾರಾಮಚಂದ್ರರಾವ್ ಶಾಲಾ-ಕಾಲೇಜಿಗೂ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ತಿಳಿಸಿದರು. ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರಿಂದ ಎಲ್ಲಾ ಸಾರಿಗೆ ಬಸ್ಸುಗಳು ನಿಲುಗಡೆಗೆ ಆಗ್ರಹಿಸಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೂ ಸಹ ಕೆಎಸ್ ಆರ್ ಟಿಸಿ ಬಸ್ ಕೆಲ ಸಿಬ್ಬಂದಿಗಳು ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಬಸ್ ನಿಲ್ಲಿಸದೆ ಹೋಗುತ್ತಿದ್ದಾರೆ ಎಂದು ಅಲ್ಲೇ ಇದ್ದ ಗಂಗಾವತಿ ಬಸ್ ಡಿಪೋ ಮ್ಯಾನೇಜರ್ ಅವರ ಗಮನಕ್ಕೆ ತಂದರು. ತಾಲ್ಲೂಕು ಎಕ್ಸ್‌ಪ್ರೆಸ್ ಗಳು ಹೊರತುಪಡಿಸಿ ಉಳಿದ ಎಲ್ಲಾ ಸಾರಿಗೆ ಬಸ್ಸುಗಳು ನಿಲ್ಲಬೇಕು. ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳಬೇಕಿದೆ ಎಂದರು.ಈ ವೇಳೆ ಗಂಗಾವತಿ ಬಸ್ ಡಿಪೋ ಮ್ಯಾನೇಜರ್ ರಾಜಶೇಖರ್ ಅಣ್ಣಿಗೇರಿ ಮಾತನಾಡಿ, ಶ್ರೀರಾಮನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಬಸ್ ನಿತ್ಯ ಸಂಚಾರ ಮಾಡಲಾಗುವುದು. ಇನ್ನು ಮುಂದೆ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡದ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿಯೊಂದು ಬಸ್ ನಿಲ್ಲುವಂತೆ ಪರಿಶೀಲಿಸಲು ಲೈನ್ ಅಧಿಕಾರಗಳನ್ನು ನಿಯೋಜನೆ ಮಾಡಲು ಹಾಗೂ ಪ್ರತಿ ಸಾರಿಗೆ ಬಸ್ ಗ್ರಾಮದಲ್ಲಿ ನಿಲ್ಲುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಕುರುಡಿ ಮಾತನಾಡಿದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಸರಸ್ವತಿ ಭಾವಚಿತ್ರ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷೆ ಹುಸೇನ್ ಬಿ, ಗ್ರಾಪಂ ಸದಸ್ಯರಾದ ರೆಡ್ಡಿ ವೀರರಾಜು, ರಾಮಕೃಷ್ಣ ಪಿ, ಮೆಹಬೂಬ್, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಮುಖಂಡರಾದ ಡಿಆರ್ ಪ್ರಸಾದ್, ಕೆ.ನಾಗೇಶ್ವರರಾವ್, ಹರಿಬಾಬು ಉಪ್ಪಾರ, ವೈ.ರಾಮು, ಜೆ.ಮಂಜು, ಸಾಯಿಬಾಬಾ, ಮುರಳಿಕೃಷ್ಣ, ಆಲಪಾಟಿ ಸೂರ್ಯರಾವ್, ಪೊಟ್ಲೂರಿ ವೆಂಕಟರಾವ್, ಟಿಪಿ ರಾಜು, ಚೆಲ್ಲಾ ಕಾಶಿ, ಬಂಟಿರಾಮು, ಬಡಿಗೇರ ಶಿವರಾಜ್ ಹಾಗೂ ಗ್ರಾಪಂ ಸಿಬ್ಬಂದಿಗಳಾದ ಉಷಾರಾಣಿ, ಗಿರಿಧರ, ಮಹೇಶ್, ರಮೇಶ್, ನೀಲಪ್ಪ, ಗುಲಾಬಿ, ರಾಘವೇಂದ್ರ, ಅಮಾನ್ ಸೇರಿದಂತೆ ಇತರರಿದ್ದರು.
