ಶ್ರೀ ತ್ರಯಂಬಕೇಶ್ವರ ಮಹಾಮೂರ್ತಿಗೆ ಮಹಾ ರುದ್ರಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ…

ಗಂಗಾವತಿ:17 ನಗರದಲ್ಲಿರುವ ಆನೆಗೊಂದಿ ರಸ್ತೆಯಲ್ಲಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ತ್ರಯಂಬಕೇಶ್ವರ ಟ್ರಸ್ಟ್ ಹಾಗೂ ವೀರಶೈವ ಲಿಂಗಾಯತ ಸಮಾಜದಿಂದ ರುದ್ರ ಅಭಿಷೇಕ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಯಿತು. ಸನಾತನ ಹಿಂದೂ ಧರ್ಮದ ಪರಂಪರೆ ಮುಂದುವರೆಯುವುದಕ್ಕೆ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಮ್ಮ ವೀರಶೈವ ಲಿಂಗಾಯತ ಸಮಾಜ ಮತ್ತು ಪಂಚಪೀಠ ಮಠಾಧೀಶರು ನಡೆಸಿಕೊಡುವ ಹಾದಿಯಲ್ಲಿ ನಾವು ಇಂದು ಶ್ರಾವಣ ಮಾಸದ ಪ್ರಯುಕ್ತ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಮಾಜ ಹಾಗೂ ತ್ರಯಂಬಕೇಶ್ವರ ಸೇವಾ ಟ್ರಸ್ಟ್ ವತಿಯಿಂದ ಸೇರಿ ಪರಮಾತ್ಮನ ಸೇವೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಶ್ರೀ ವೀರಭದ್ರಯ್ಯಸ್ವಾಮಿ ಕಣ್ಣೂರು, ಮಾಜಿ ಕಾಡಾ ಅಧ್ಯಕ್ಷ ವಕೀಲರಾದ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಹೆಚ್.ಗಿರೀಗೌಡ, ಸಮಾಜದ ಮುಖಂಡರಾದ ಎಸ್.ಬಿ.ಹಿರೇಮಠ, ತ್ರಯಂಬಕೇಶ್ವರ ಸೇವಾ ಟ್ರಸ್ಟ್ ಸದಸ್ಯರಾದ ಗೋವಿಂದರಾಜು,ಬಳ್ಳಾರಿ ಗಿರೀಶ್, ಆದಯ್ಯಸ್ವಾಮಿ ಹಿರೇಮಠ, ವೆಂಕನಗೌಡ ಪಾಟೀಲ್, ಎಸ್.ವಿ.ಪಾಟೀಲ್ ಗುಂಡೂರು, ಸಂಗಮೇಶ ಕಣ್ಣೂರುಮಠ,ಗಂಗಾಧರ ಕೋರಿಯರ್,ಮಂಜುನಾಥ ಕೆಂಬಾವಿಮಠ, ಶರಣಯ್ಯಸ್ವಾಮಿ ಸಾಲಿಮಠ,ಶಂಕ್ರಯ್ಯಸ್ವಾಮಿ ಹಿರೇಮಠ, ಮಹಿಳೆಯರಾದ ಸಹನಾ ಹಿರೇಮಠ, ಡಾ.ಮಹಾಲಕ್ಷ್ಮಿ, ಹೆಚ್.ಎಂ.ಲಕ್ಷ್ಮಿ, ಕಸ್ತೂರಮ್ಮ ಕೆಂಬಾವಿಮಠ, ರೇಣುಕಾ ವಿಭೂತಿ, ಸೇರಿದಂತೆ ಇತರರು ಇದ್ದರು.
