ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಮೂಡಿಸುವ ಕಾರ್ಯವಾಗಬೇಕು…. ಪ್ರಭಾಕರ್ ಚಿನ್ನು ಪಾಟಿ..

ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಮೂಡಿಸುವ ಕಾರ್ಯವಾಗಬೇಕು…. ಪ್ರಭಾಕರ್ ಚಿನ್ನು ಪಾಟಿ..

ಶ್ರೀ ರಾಮನಗರ… ನಗರದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಶ್ರದ್ಧೆಯಿಂದ ಜರುಗಿತು ಸಮಿತಿಯ ಹಿರಿಯ ರಾಧಾ ಪ್ರಭಾಕರ್ ಚಿನ್ನು ಪಾಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶಸ್ವಾತಂತ್ರ್ಯ ಪಡೆದು 79 ವರ್ಷಗಳು ಪೂರ್ಣಗೊಂಡಿವೆ. ವಿವಿಧ ಕ್ಷೇತ್ರದಲ್ಲಿ ಭಾರತ ಮುನ್ನಡೆ ಸಾಗುತ್ತಿದೆ ದೇಶ ಕಾಯುವ ಯೋಧ ಹಾಗೂ ಅನ್ನ ನೀಡುವ ರೈತ ಅತ್ಯಂತ ಸ್ಮರಣೀಯರು ಎಂದು ಹೇಳಿದರು.ನಾಣಿ( ವೆಂಕಟ ಕೃಷ್ಣ) ಮಾತನಾಡಿ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ವಿವಿಧ ಭಾಷೆಹಲವು ಸಂಸ್ಕೃತಿ ಹಲವು ಧರ್ಮಗಳಿಂದ ಸಹಜೀವನ ನಡೆಸುವುದರ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಸಂವಿಧಾನ ಸಮಾವತೆ ಸ್ವಾತಂತ್ರ್ಯ ಹಾಗೂ ಭಾತೃತ್ವ ಮನೋಭಾವನೆಯನ್ನು ಒಳಗೊಂಡಿದ್ದು ಸರ್ವರಿಗೂ ಸಮಪಾಲು ಸರ್ವರಿಗೂ ಸಮಭಾಳು ಎಂಬ ತತ್ವದ ಅಡಿಯಲ್ಲಿ ವಿಶ್ವದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯೋಪಾದ್ಯ ಯನಿ ಶಾರುನ್ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

Leave a Reply

Your email address will not be published. Required fields are marked *