ಗಂಡುಗಲಿ ಕುಮಾರರಾಮನ ಶೌರ್ಯ; ಸಾಹಸ, ಅಪ್ರತಿಮ ಹೋರಾಟ ಜನಸಾಮಾನ್ಯರಲ್ಲಿ ಬೇರೂರಿವೆ :ಸೋಮನಾಥ್ ಎಸ್. ಹೆಬ್ಬಡದ….

ಗಂಡುಗಲಿ ಕುಮಾರರಾಮನ ಶೌರ್ಯ; ಸಾಹಸ, ಅಪ್ರತಿಮ ಹೋರಾಟ ಜನಸಾಮಾನ್ಯರಲ್ಲಿ ಬೇರೂರಿವೆ :ಸೋಮನಾಥ್ ಎಸ್. ಹೆಬ್ಬಡದ…

ಇಂದು ದಿನಾಂಕ 9.08.2025 ರಂದು ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿ ಪೂರ್ವ ಮಹಾವಿದ್ಯಾಲಯ ವಡ್ಡರಹಟ್ಟಿ, ಗಂಗಾವತಿ ಕಾಲೇಜಿನಲ್ಲಿ ಪರನಾರಿ ಸಹೋದರ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು. ಜಯಂತಿಯ ಅಂಗವಾಗಿ ಶ್ರೀ ಸೋಮನಾಥ. ಎಸ್. ಹೆಬ್ಬಡದ ಇವರು ಉಪನ್ಯಾಸವನ್ನು ನೀಡಿದರು. ಉಪನ್ಯಾಸದಲ್ಲಿ ಗಂಡುಗಲಿ ಕುಮಾರರಾಮನ ಇತಿಹಾಸ ಆತನ ಶೌರ್ಯ ಸಾಹಸ ಅಪ್ರತಿಮ ಹೋರಾಟ ಮನೋಭಾವ ಹಾಗೂ ಆತನ ತ್ಯಾಗ ಬಲಿದಾನದ ಬಗ್ಗೆ ವರ್ಣನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಶ್ರೀ ಅಶೋಕ್ ರಾಯ್ಕರ್ ಇವರು ಇತಿಹಾಸವನ್ನು ತಿರುಚಿ ನಮ್ಮ ದೇಶದ ಹೋರಾಟಗಾರರ ಹಾಗೂ ವೀರರ ತೇಜೋವಧೆ ಮಾಡಲಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಮೈಸೂರಿನ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ ಮೈಸೂರು ಅರಸರನ್ನು ಮರೆಮಾಚಿ ಬೇರೆ ಇನ್ನಾರೋ ಅದನ್ನು ಕಟ್ಟಿದ್ದಾರೆ ಎಂಬಂತೆ ಜನರಿಗೆ ತಿಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನುಡಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ. ಏ. ಇವರು ಉದ್ಘಾಟಕರ ಭಾಷಣವನ್ನು ನೆರವೇರಿಸಿ ನಮ್ಮ ಕಾಲೇಜಿನಲ್ಲಿ ಭಾರತೀಯ ಹೋರಾಟಗಾರರ ಜೀವನ ಚರಿತ್ರೆಯನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಮಾಡುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲೆ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಯಂಕಪ್ಪ ಕಟ್ಟಿಮನಿ, ಗಂಡುಗಲಿ ಕುಮಾರರಾಮ ವಂಶಸ್ಥರಾದ ಶ್ರೀ ರಾಜೇಶ್ ನಾಯಕ ದೊರೆಯವರು ಕುಮಾರರಾಮನ ಕುಮ್ಮಟದುರ್ಗದಲ್ಲಿ ತನ್ನ ಕೊನೆಉಸಿರು ಇರುವವರೆಗೆ ತಾಯಿ ನೆಲಕ್ಕಾಗಿ ಹೋರಾಟ ಮಾಡಿ ಅಳಿಯಂದಿರಾದ ಹರಿಹರ ಹಕ್ಕ ಬುಕ್ಕರಿಗೆ ಪ್ರೇರಣೆ ನೀಡಿದನೆಂದು ಹೇಳಿದರು, ಅಖಿಲ ಕರ್ನಾಟಕ ಅಕ್ಕ-ಬುಕ್ಕ ನಾಯಕ ವೇದಿಕೆಯ ಶ್ರೀ ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್. ಜಡೆಪ್ಪ ಮೆಟ್ರಿ ಇವರು ಭಾರತೀಯ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಂಥ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ನಮ್ಮ ದೇಶದ ಹಿರಿಮೆ ಗರಿಮೆಗಳನ್ನು ಅರಿತು ಪ್ರಜ್ಞಾವಂತರಾಗಿ ನಾಡನ್ನು ಕಟ್ಟುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು. ಕಾಲೇಜಿನ ಉಪನ್ಯಾಸಕರಾದ ಕುಮಾರಿ ಸೌಮ್ಯ ಇವರು ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಿದರು. ಶ್ರೀ ಮಹದೇವ್ ಮೋಟಿ ಇವರು ಕಾರ್ಗಿಲ್ ಯೋಧರಿಗೆ ನಮನವನ್ನು ಸಲ್ಲಿಸುವ ಕ್ರಾಂತಿ ಗೀತೆಯನ್ನು ಹಾಡಿದರು. ಗಂಗಾವತಿ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಲ್ಲಪ್ಪ ಕಲಾಲ್ ಇವರು ಸ್ವಾಗತಿಸಿದರು. ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್ .ಟಿ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಟಿ ಮಲ್ಲೆಶಪ್ಪ, ಶೇಖರ್ ಹೋಸ್ಕೇರಾ,ಭಾಗವಹಿಸಿದ್ದರು.

ಗಂಡುಗಲಿ ಕುಮಾರರಾಮನ ಶೌರ್ಯ; ಸಾಹಸ, ಅಪ್ರತಿಮ ಹೋರಾಟ ಜನಸಾಮಾನ್ಯರಲ್ಲಿ ಬೇರೂರಿವೆ :ಸೋಮನಾಥ್ ಎಸ್. ಹೆಬ್ಬಡದ…

Leave a Reply

Your email address will not be published. Required fields are marked *