ದಾಸನಾಳ: ಸಾರ್ವಜನಿಕ ಭೂಮಿ ಪ್ರಭಾವವಿಗಳಿಂದ ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ: ರಸ್ತಾರೋಖೋದ ಎಚ್ಚರಿಕೆ…

ಗಂಗಾವತಿ ಜು.29 ತಾಲ್ಲೂಕಿನ ದಾಸನಾಳ ಗ್ರಾಮದ ಲ್ಲಿರುವ ಸಾರ್ವಜನಿಕ ಭೂಮಿ ಯಲ್ಲಿ ಕೆಲವರು ಅನಧಿಕೃತವಾಗಿ ಪಹಣಿ ಕಲಂನಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಂಡು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕೂಡಲೆ ಕ್ರಮ ಕೈಗೊಂಡು ತೆರವು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ತಹ ಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಬಿಜೆಪಿ ಯುವ ಮುಖಂಡ ಆರ್.ದೇವಾನಂದ ನೇತೃತ್ವದಲ್ಲಿ ನೂರಾರು ಜನ ಕಂದಾಯ ಇಲಾಖೆಗೆ ತೆರಳಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಿಗಧಿತ ಅವಧಿಯಲ್ಲಿ ಸೂಕ್ತಕ್ರಮ ಕೈ ಗೊಂಡು ಒತ್ತುವರಿ ತೆರವು ಮಾಡಬೇಕು. ಇಲ್ಲವಾದಲ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಸಿದರು.
ಬಳಿಕ ಮಾತನಾಡಿದ ಆರ್.ದೇವಾನಂದ, ಗ್ರಾಮದ ಸರ್ವೇ ನಂಬರ್ 33 ಮತ್ತು 28/02ರಲ್ಲಿರುವ ಭೂಮಿಯಲ್ಲಿ ದಾಸನಾಳ ಗ್ರಾಮ ಎಂದು ಇದೆ. ಆದರೆ ಇತ್ತೀಚೆಗೆ ಕೆಲವರು ತಮ್ಮ ಹೆಸರನ್ನು ಸೇರಿಸಿಕೊಂಡು ಬೆಲೆ ಬಾಳುವ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಸಂಚು ರೂಪಿಸಿದ್ದಾರೆ.
ಎರಡೂ ಸರ್ವೇ ನಂಬರ್ನಲ್ಲಿ ಕೊಟ್ಟಿದ್ದಾರೆ. ಒಟ್ಟು 35.07 ಎಕರೆ ಜಮೀನಿದೆ. ಈಗಾಗಲೆ ಈ ಭೂಮಿಯಲ್ಲಿ ಕೆಲ ಬಡವರು ಮನೆ ಮಾಡಿ ಕೊಂಡಿದ್ದಾರೆ. ಈ ಹಿಂದೆ ಕೆಲ ವರು ಈ ಭೂಮಿಯನ್ನು ದಾನ ಮಾಡಿದ್ದಾರೆ. ಇನ್ನು ಕೆಲವರು ಬಡವರಿಗೆ ಎಂದು ಬಿಟ್ಟು
ಆದರೆ ಈಗ ಕೆಲವರು ಈ ಭೂಮಿ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಕಬ ಳಿಸುವ ಹುನ್ನಾರ ಮಾಡುತಿ ದ್ದಾರೆ. ಕಳೆದ ನಾಲೈದು ದಶಕದಿಂದ ಅಲ್ಲಿ ವಾಸವಾಗಿ ರುವ ಜನರಗೆ ಈಗಾಗಲೆ ಪಂಚಾಯಿತಿಯಿಂದ ನಿವೇಶನಕ್ಕೆ ಸಂಬಂಧಿಸಿದಂತೆ 11 ಬಿ ಹಾಗೂ ಪಟ್ಟಾ ಪುಸ್ತಕ ನೀಡಲಾಗಿದೆ.
ಕೂಡಲೆ ಈ ಭೂಮಿಗೆ ಸಂಬಂಧಿತ ಎಲ್ಲಾ ದಾಖಲೆ ಗಳನ್ನು ಪರಿಶೀಲಿಸಿ ಪಹಣಿ ಯಲ್ಲಿರುವ ಖಾಸಗಿ ವ್ಯಕ್ತಿಗಳ ಹೆಸರು ತೆಗೆದುಹಾಬೇಕು. 1975ರಲ್ಲಿಯೇ ಗ್ರಾಮದ 84.17 ಎಕರೆ ಭೂಮಿ ಭೂ ಸ್ವಾಧಿನ ವಾಗಿದೆ. ಆದರೆ 2001ರಿಂದ ಪಹಣಿಯಲ್ಲಿ ರೈತರ ಹೆಸರು ಬರುತ್ತಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ದೇವಾನಂದ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರನಗೌಡ ಗಚ್ಚಿನಮನಿ, ರುದ್ರೇಶ ನಾಯಕ್, ಶಂಕ್ರಪ್ಪ ನಾಯಕ್, ದೇವಪ್ಪ ಉಪ್ಪಾರ, ಬಸವರಾಜಪ್ಪ ಹಂಪನಗೌಡರ್, ನಿಂಗಪ್ಪ, ಭೀಮಣ್ಣ ನಾಯಕ್, ಮುತ್ತಣ್ಣ ಪಿಂಜಾರ್, ಅಂಜನಿ ವಡಕಿ, ರುದ್ರೇಶ ಪೂಜಾರಿ, ವೀರಭದ್ರಗೌಡ ಮಾಲಿಪಾಟೀಲ್, ತಾಯಪ್ಪ ಮೇಸ್ತಿ, ಯಮನೂರ ಊರಮುಂದ್ಲು, ಹನುಮೇಶ ನಾಯಕ್,ಸೇರಿದಂತೆ ಇತರರು ಇದ್ದರು.
