ಹಗರಿ ಗಜಾಪುರ : ತಂಬಾಕು ಖರೀದಿ ಮಾಡದಿದ್ದಲ್ಲಿ ಪ್ರತಿಭಟನೆ ರೈತ ಸಂಘದ ಮುಖಂಡ ಭರ್ಮಣ್ಣ ಎಚ್ಚರಿಕೆ…

ವಿಜಯನಗರ ಜಿಲ್ಲೆ ಕೊಟ್ಟೂರು : ವಿ ಟಿ ಎಸ್ ತಂಬಾಕು ಕಂಪನಿಯು , ರೈತರ ತಂಬಾಕನ್ನು ನಿಗಧಿತ ಬೆಂಬಲ ಬೆಲೆಗೆ ಸಮರ್ಪಕವಾಗಿ ಖರೀದಿ ಮಾಡದಿದ್ದಲ್ಲಿ. ಕಂಪನಿಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು , ಹಾಗೂ ಕಾನೂನು ಸಮರ ನಡೆಸಲಾಗುವುದೆಂದು. ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ , ಕೋಡಿಹಳ್ಳಿ ಎನ್.ಭರ್ಮಣ್ಣ ಎಚ್ಚರಿಸಿದ್ದಾರೆ. ಅವರು ಹರಪನಹಳ್ಳಿ ತಾಲೂಕಿನ ಹಗರಿ ಗಜಾಪುರ ಗ್ರಾಮದ , ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಹಿಂಭಾಗದಲ್ಲಿರುವ. ವಿಟಿಎಸ್ ತಂಬಾಕು ಖರೀದಿ ಕಂಪನಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ , ಕೇಂದ್ರದಲ್ಲಿದ್ದವರನ್ನುದ್ಧೇಶಿಸಿ ಮಾತನಾಡಿ ಎಚ್ಚರಿಸಿದ್ದಾರೆ. ವಿ ಟಿ ಎಸ್ ತಂಬಾಕು ಕಂಪನಿ ರೈತರಿಗೆ ಅನ್ಯಾಯ ಮಾಡುತ್ತದ್ದು , ತಂಬಾಕನ್ನು ರೈತರಿಗೆ ಮೇ ತಿಂಗಳಲ್ಲಿ ತಂಬಾಕನ್ನು ಭೇಲು ಮಾಡಲು ಹೇಳಿದೆ. ಆದರೆ ಜುಲೈ ತಿಂಗಳಲ್ಲಿ ಖರೀದಿ ಮಾಡಲು ಮುಂದಾಗಿದ್ದಾರೆ , ಅದಲ್ಲದೆ ಕೆಲ ದಿನಗಳ ನಂತರ ಬೇಲೂ ಮಾಡಿದ ತಂಬಾಕು ಸಹಜವಾಗಿ ಕಪ್ಪಾಗಿರುತ್ತದೆ. ಹೀಗಾಗಿ ರೈತರಿಗೆ ಈ ತಂಬಾಕನ್ನು ತೆಗೆದುಕೊಳ್ಳದೆ , ರೇತರನ್ನು ವಾಪಸ್ ಕಳಿಹಿಸಿರುತ್ತಾರೆ. ಇದು ಖಂಡನೀಯವಾದದ್ದು , ಕಂಪನಿಯವರು ಪ್ರತಿ ರೈತರ ತಂಬಾಕನ್ನು ಖರೀದಿ ಮಾಡಬೇಕು. ಸರಿಯಾದ ಸಮಯಕ್ಕೆ ರೈತರ ತಂಬಾಕು ಖರೀದಿ ಮಾಡದಿದ್ದರೆ , ಸಂಬಂದಪಟ್ಟ ಇಲಾಖೆ ಕಛೇರಿ ಮುಂಭಾಗದಲ್ಲಿ ಧರಣಿ ಮಾಡಲಾಗುವುದು. ಮತ್ತು ಕಂಪನಿಯ ವಿರುದ್ಧ , ಹಂತ ಹಂತವಾಗಿ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದರು. ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು , ತಾಲೂಕಿನ ವಿವಿದೆಡೆಯ ರೈತರು ಉಪಸ್ಥಿತರಿದ್ದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*