ಸಹಕಾರ ಭಾರತಿ ಘಟಕದ ಪದಗ್ರಹಣ ಕಾರ್ಯಕ್ರಮ

ಸಹಕಾರ ಭಾರತಿ ಘಟಕದ ಪದಗ್ರಹಣ ಕಾರ್ಯಕ್ರಮ:

ಗಂಗಾವತಿ: ದಿನಾಂಕ 14-06-25 ರಂದು ಗಂಗಾವತಿ ನಗರದ ಶ್ರೀ ಚನ್ನಬಸವ ಸ್ವಾಮಿ ಸಭಾ ಭವನದಲ್ಲಿ ಬೆಳಿಗ್ಗೆ 10 ಘಂಟೆಗೆ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಾ ಸಹಕಾರ ಭಾರತಿ ಘಟಕದ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಸಂರಕ್ಷಕರಾದ ರಮೇಶ್ ವೈದ್ಯಜೀ, ರಾಜ್ಯ ಘಟಕ ಅಧ್ಯಕ್ಷರಾದ ಪ್ರಭುದೇವ್ ಮಾಗನೂರ್, ರಾಜ್ಯ ಕಾರ್ಯದರ್ಶಿಗಳಾದ ನರಸಿಂಹ ಕಾಮತ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ, ಆರ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ರಮೇಶ, ಕಾರ್ಯದರ್ಶಿಗಳಾದ ನಾಗರಾಜ ಅಕ್ಕಿ ಮುಖ್ಯ ಅಥಿತಿಗಳಾಗಿದ್ದು, ಸಹಕಾರಿ ಕ್ಷೇತ್ರದ ಪ್ರತಿಯೊಬ್ಬರೂ ತಪ್ಪದೇ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಪ್ಪಳ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಆನಂದ ಅಕ್ಕಿ ಹಾಗೂ ತಾಲೂಕಾ ಅಧ್ಯಕ್ಷರಾದ ಶರಬೇಂದ್ರ ಅಂಗಡಿಯವರು ಮಾದ್ಯಮಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಸಿದ್ದು ಮಸ್ಕಿ, ಚನ್ನವೀರನಗೌಡ ಕೋರಿ, ವಾಸುದೇವ ನವಲಿ, ಅರ್ಜುನ್ ರಾಯ್ಕರ್, ಬದ್ರಿನಾರಾಯಣ, ಅನಿಲ್ ಬಾಗಮಾರ, ಗುರುರಾಜ್, ರಾಮಪ್ರಸಾದ್ ಕೊಡಗಲಿ, ಮಂಜು ಮಸ್ಕಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *