ಶ್ರೀ ಕನ್ನಿಕಾಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ.

ಗಂಗಾವತಿ. ಹಿರೇ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತ್ರತ್ವದಲ್ಲಿ. ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಜಯಂತೋತ್ಸವದ ಪ್ರಯುಕ್ತ ಬುಧವಾರದಂದು ಅಮ್ಮನವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಿತು. ಬೆಳಿಗ್ಗೆ ಐದು ಜನ ಮಹಿಳೆಯರು ಕಳಸ ಪೂರ್ಣ ಕುಂಭದೊಂದಿಗೆ ದೇವಸ್ಥಾನದ ಆವರಣದಿಂದ ಪ್ರಮುಖ ರಾಜ ಬೀದಿಗಳ ಮೂಲಕ ತೆರಳಿ ಗಂಗೆ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಆಗಮಿಸಿತು. ಬಳಿಕ ದೇವಸ್ಥಾನದಲ್ಲಿ ಪೂರ್ಣ ಕುಂಭದೊಂದಿಗೆ ಆಗಮಿಸಿದ ಮಹಿಳೆಯರಿಗೆ ಉ ಡಿ ತುಂಬುವಿಕೆ ಸೇರಿದಂತೆ ಭಜನೆ ಅಮ್ಮನವರಿಗೆ ಅಭಿಷೇಕ ಲಲಿತ ಸಹಸ್ರ ಪಾರಾಯಣ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಅವಧೂತ ಭಟ್ಟರು ನೆರವೇರಿಸಿದರು. ಸಮಾಜದ ಅಧ್ಯಕ್ಷ. ನಾಗರಾಜ ದರೋಜಿ ಹಾಗೂ ಸತ್ಯ. ಜಿ ಆರ್ ಎಸ್ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ರುಕ್ಮಿಣಿ ಬಾಯಿ ಆಚರಣೆ ಕುರಿತು ಮಾತಾಡಿದರು.
