ತಾಯಿ ಭುವನೇಶ್ವರಿ ಜ್ಯೋತಿ ಸ್ವಾಗತಿಸಿದ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ..

ಬಳ್ಳಾರಿ / ಕಂಪ್ಲಿ: ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹಂಪಿಯಿಂದ ಕಂಪ್ಲಿಗೆ ಆಗಮಿಸಿದ ಭುವನೇಶ್ವರಿ ತಾಯಿಯ ಜ್ಯೋತಿಯನ್ನು ಅದ್ಧೂರಿಯಾಗಿ ಶುಭ ಶುಕ್ರವಾರದಂದು ಸ್ವಾಗತಿಸುವ ಮೂಲಕ ಬರ ಮಾಡಿಕೊಳ್ಳಲಾಯಿತು.ಕನ್ನಡ ರಾಜ್ಯೋತ್ಸವ ಹಿನ್ನಲೆ ಒಂದು ದಿನದ ಮುಂಚಿತವಾಗಿ ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷ ದೇವಸ್ಥಾನದ ಸನ್ನಿದಾನದಲ್ಲಿರುವ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಕನ್ನಡಾಂಬೆಯ ಜ್ಯೋತಿಯಾತ್ರೆಯು ಬುಕ್ಕಸಾಗರ, ರಾಮಸಾಗರ ಮೂಲಕ ಕಂಪ್ಲಿಗೆ ಸಂಜೆ ಒತ್ತಿಗೆ ಆಗಮಿಸಿದ ಹಿನ್ನಲೆ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಕಂಪ್ಲಿ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ನೇತೃತ್ವದಲ್ಲಿ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿ, ನಂತರ ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಕೊಟ್ಟಾಲ್ ರಸ್ತೆ ಮೂಲಕ ಸಂಚರಿಸಿ, ಎಪಿಎಂಸಿ ಬಳಿಯಲ್ಲಿ ಬೀಳ್ಕೊಡುವ ಮೂಲಕ ಕುರುಗೋಡು ಕಡೆಗೆ ತೆರಳಲು ಅನುವು ಮಾಡಿಕೊಟ್ಟರು.ನಂತರ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ಮಾತನಾಡಿ, ಸತತ 20ವರ್ಷದಿಂದ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಹಂಪಿಯಿಂದ ತಾಯಿ ಭುವನೇಶ್ವರಿಯ ದಿವ್ಯ ಜ್ಯೋತಿಯಾತ್ರೆ ಬರಮಾಡಿಕೊಂಡು, ನಂತರ ಕುರುಗೋಡು ಮೂಲಕ ಬಳ್ಳಾರಿಗೆ ತೆರಳಿ, ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆಯೇ ಹಂಪಿಯಿಂದ ಆಗಮಿಸಿದ ಜ್ಯೋತಿಯನ್ನು ಕಂಪ್ಲಿಯಲ್ಲಿ ಸ್ವಾಗತಿಸಿ, ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಬೀಳ್ಕೊಡಲಾಯಿತು. ನಾಡಿನಲ್ಲಿ ಕಾಲ ಕಾಲಕ್ಕೆ ಸಮೃದ್ಧ ಮಳೆ, ಬೆಳೆಯಾಗಲೆಂದು ಹಾಗೂ ನೆಲ, ಜಲ, ಭಾಷೆ ರಕ್ಷಣೆಗೆ ನಾವೆಲ್ಲರೂ ಕಂಕಣ ಬದ್ಧರಾಗಿದ್ದೇವೆ ಎಂಬ ಒಗ್ಗಟ್ಟಿನ ಸಂದೇಶವನ್ನು ಸಾರುವಂತದ್ದಾಗಿದೆ. ನ.1ರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಸಂಚಾಲಕ ಶ್ರೀಧರ್ ಶೆಟ್ಟಿ ಬೆಳಗಲ್, ತಾಲೂಕು ಸಂಘಟನಾ ಕಾರ್ಯದರ್ಶಿ ಗಣೇಶ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಪಿ.ಶಂಭುಲಿಂಗ, ಕಾರ್ಯದರ್ಶಿ ಮಂಜುನಾಥ, ತಾಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷ ಎಂ.ಎಸ್.ಮುನ್ನಾ, ತಾಲೂಕು ಯುವ ಘಟಕ ಅಧ್ಯಕ್ಷ ರಾಘವೇಂದ್ರ, ನಗರ ಯುವ ಘಟಕ ಅಧ್ಯಕ್ಷ ಎಂ.ರಂಜೀತ್, ಕುರುಗೋಡು ನಗರ ಘಟಕ ಅಧ್ಯಕ್ಷ ಕೆ. ಶಿವಕುಮಾರ್, ನಗರ ವಿದ್ಯಾರ್ಥಿ ಘಟಕ ಅಧ್ಯಕ್ಷ ಮಂಜುನಾಥ, ನಗರ ಘಟಕದ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ, ಪದಾಧಿಕಾರಿಗಳಾದ ಎನ್.ಎಂ.ಪತ್ರಯ್ಯಸ್ವಾಮಿ, ಹರೀಶ, ಪವನ್ ಬೆಳಗಲ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
