ಹಾರಕಬಾವಿ ಗ್ರಾಪಂ : ಜನಪ್ರತಿನಿಧಿಗಳಲ್ಲದವರ ಅಂಧಃ ದರ್ಭಾರ್ , PDO ರಿಂದ ಕಿರುಕುಳ – ಕ್ರಮಕ್ಕೆ ಸದಸ್ಯ ಒತ್ತಾಯ..

ಹಾರಕಬಾವಿ ಗ್ರಾಪಂ : ಜನಪ್ರತಿನಿಧಿಗಳಲ್ಲದವರ ಅಂಧಃ ದರ್ಭಾರ್ , PDO ರಿಂದ ಕಿರುಕುಳ – ಕ್ರಮಕ್ಕೆ ಸದಸ್ಯ ಒತ್ತಾಯ..

ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಹಾರಕಬಾವಿ ಗ್ರಾಮ ಪಂಚಾಯ್ತಿ ಅಧಿಕಾರಿ (PDO)ವೀರಣ್ಣರವರು , ಕೆಲ ವರ್ಷಗಳಿಂದ ತಮ್ಮನ್ನು ಶೋಷಣೆಗೊಳಪಡಿಸುತ್ತಿದ್ದು. ನಿರಂತರವಾಗಿ ಅವಮಾನ ಅಪಮಾನ ಅನುಚಿತ ವರ್ತನೆ ಮೂಲಕ , ವಿವಿದ ರೀತಿಗಳಲ್ಲಿ ಕಿರುಕುಳ ನೀಡುತ್ತಿದ್ದಾರೆಂದು. ಗ್ರಾಪಂ ಸದಸ್ಯರು ಹಾಗೂ ನಿವೃತ್ತ ಉಪ ಪ್ರಾಚಾರ್ಯರಾದ , ಹಾರಕಬಾವಿಯ ಡಾ” ಸಿ.ಮಹಲಿಂಗಪ್ಪರವರು ಗಂಭೀೆವಾಗಿ ಆರೋಪಿಸಿದ್ದಾರೆ. ಸಂಬಂಧಿಸಿದಂತೆ ಅವರು ಸಂಬಂಧಿಸಿದ ತಾಲೂಕು , ಜಿಲ್ಲಾ ಮಟ್ಟದ ವಿವಿದ ಇಲಾಖಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು. ಕೆಲ ಅಧಿಕಾರಿಗಳನ್ನು ಹಲವು ತಿಂಗಳುಗಳ ಹಿಂದೆಯೇ , ಖುದ್ದು ಭೇಟಿಯಾಗಿ ತಮಗಾಗುತ್ತಿರುವ ಶೋಷಣೆ ಕಿರುಕುಳ ಕುರಿತು ದೂರು ನೀಡಿದ್ದೇನೆಯಾದರು. ಈವರೆಗೂ ಯಾವುದೇ ಸ್ಪಂಧನೆ ದೊರಕಿಲ್ಲ ಹಾಗೂ ಯಾವುದೇ ರೀತಿಯಲ್ಲಿ ವಿಚಾರಣೆ ನಡೆಸದೇ , ತಮ್ಮ ದೂರಿಗೆ ಬಿಡಿಗಾಸಿನ ಕಿಮ್ಮತ್ತು ನೀಡದೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆಂದು ಆವರು ಆರೋಪಿಸಿದ್ದಾರೆ. ತಾವು ಗ್ರ‍ಾಮ ಪಂಚಾಯ್ತಿ ಸದಸ್ಯರಾದಾಗಿನಿಂದಲೂ , ಈವರೆಗೂ ಕೆಲ ಮೇಲ್ವರ್ಗದ ಸದಸ್ಯರೊಡಗೂಡಿ. ಗ್ರಾ ಪಂ PDO ರವರು , ತಮ್ಮನ್ನು ಶೋಷಣೆಗೊಳಪಡಿಸುತ್ತಿದ್ದಾರೆ. ಮತ್ತು ಸಾರ್ವಜನಿಕವಾಗಿ ತಮ್ಮನ್ನು ಅನವಶ್ಯಕವಾಗಿ ನಿಂಧಿಸುವ ಮೂಲಕ , ತಮ್ಮೊಂದಿಗೆ ಅನುಚಿತವಾಗಿ ವರ್ತಿಸುವ ಮೂಲಕ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು , ಸದಸ್ಯರಾದ ಡಾ” ಸಿ ಮಹಲಿಂಗಪ್ಪರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಸ್ಯರಲ್ಲದವರು ಹಾಗೂ ಹಾಲಿ ಸದಸ್ಯರ ಬದಲಾಗಿ ಅವರ ಗಂಡಂದಿರನ್ನು , ಸಭೆಗಳಲ್ಲಿ ಕಾರ್ಯಕ್ರಮದ ವೇದಿಕೆಯ ಮೇಲೆ ಕರೆದು ಸತ್ಕರಿಸಲಾಗುತ್ತಿದೆ. ಮಹಿಳಾ ಸದಸ್ಯರು ಗೆದ್ದು ಫೋಟೋ ತೆಗೆಸಿಕೊಂಡವರು , ಈವರೆಗೂ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿಲ್ಲ. ಬದಲಿಗೆ ಅವರ ಗಂಡಂದಿರು ಅವರ ಮಕ್ಕಳು , ತಾವೇ ಸದಸ್ಯರೆಂಬಂತೆ ಸದಸ್ಯರ ಬದಲಿಗೆ ಹಾಜರಾಗುತ್ತಿದ್ದಾರೆ. ಅವರದೇ ಗ್ರಾಪಂ ನಲ್ಲಿ ಧರ್ಭಾರ್ ನಡೆಯುತ್ತಿದೆ , ಅವರಿಗೆ PDO ವೀರಣ್ಣರವರು ಸಂಪೂರ್ಣ ಸಹಕರಿಸುತ್ತಿದ್ದಾರೆ. ಈ ಮೂಲಕ ಸರ್ಕಾರದ ಸೇವೆಯಲ್ಲಿದ್ದುಕೊಂಡು , ಸರ್ಕಾರದ ಸಂಬಳದಲ್ಲಿ ಜೀವಿಸುತ್ತಿರುವ PDO ರವರು. ನಿಯಗಳನ್ನು ಗಾಳಿ ತೂರಿ ಅಧಿಕಾರ ದುರುಪಯೋಗ ಮಾಡುತ್ತಿರುವ , ತಮ್ಮ ಹೆಂಗಸರ ಹೆಸರಲ್ಲಿ ಸರ್ಭಾರ್ ದರ್ಫ ಮೆರೆಯುತ್ತಿರುವ ಕೆಲ ಸದಸ್ಯರ ಸೇವೆ ಮಾಡುತ್ತಿದ್ದು. ಅಕ್ರಮ ಕೋರರ ಭಂಡ ಭ್ರಷ್ಟ ಸದಸ್ಯರಿಗೆ ಎಲ್ಲಾ ಭಗೆಯಲ್ಲಿ ಸಹಕರಿಸುತ್ತಿದ್ದು, ಅವರ ಸೇವಕರಂತೆ ಅವರ ಬಕೇಟ್ ಹಿಡಿಯುತ್ತಿದ್ದಾರೆಂದು ಡಾ” ಮಹಲಿಂಗಪ್ಪರವರು ದೂರಿದ್ದಾರೆ. ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ರೀತಿಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ , ಬದಲಿಗೆ ಕೆಲ ಸದಸ್ಯರ ಗಂಡಂದಿರ ಅವರ ಮನೆಯ ಗಂಡಸರ ಆಳ್ವಿಕೆಯ ಕೇಂದ್ರವಾಗಿದೆ. ಅವರು ಮಾಡಿರುವ ಅಲಿಖಿತ ಕಾನೂನು ಜಾರಿಯಲ್ಲಿರುತ್ತದೆ ವಿನಃ , ಸರ್ಕಾರದ ಯಾವುದೇ ನಿಯಮಗಳು ಅಲ್ಲಿ ಜಾರಿಯಲ್ಲಿರಲ್ಲ. ಹಾರಕಬಾವಿಯಲ್ಲಿ ಜನಪ್ರತಿನಿಧಿಗಳಿಗೆ ಮನ್ನಣೆ ಇಲ್ಲ , ಜನಪ್ರತಿನಿಧಿಗಳಲ್ಲದವರದ್ದೇ ಅಂದಃ ದರ್ಭಾರ್ ಅಗಿದೆ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ. *ಅಧಿಕಾರಿಗಳ ಶಾಸಕರ ಉಪಸ್ಥಿತಿಯಲ್ಲಿ ನಿಯಮ ಉಲ್ಲಂಘನೆ- ಮೌನ ಸಮ್ಮತಿ.!?*- ಗ್ರಾಮ ಪಂಚಾಯ್ತಿಯ ಸಭೆ ಸಮಾರಂಭಗಳಲ್ಲಿ , ಸರ್ಕಾರಿ ಕಾರ್ಯಕ್ರಮಗಳ ಸಂದರ್ಭದಲ್ಲಿ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ , ಜನಪ್ರತಿನಿಧಿಗಳಲ್ಲದವರದ್ದೇ ದರ್ಭಾರಾಗಿರುತ್ತದೆ. ಅವರದೇ ಪಾರುಪತ್ಯವಾಗಿರುತ್ತದೆ ಅವರೇ ಶಾಸಕರೊಂದಿಗಿದ್ದು , ಮಹಿಳಾ ಗ್ರಾಮ ಪಂಚಾಯ್ತಿ ಸದಸ್ಯರ ಬದಲಿಗೆ ಅವರ ಮನೆಯ ಗಂಡಸರು ಹಾಜರಾಗಿರುತ್ತಾರೆ. ಜನಪ್ರತಿನಿಧಿಗಳಾಗಿರುವ ಹಾಗೂ ಉಪ ಪ್ರಾಚಾರ್ಯರು ಆದ ತಮ್ಮನ್ನು , ಹಾಗೂ ಇತರೆ ಸಭ್ಯಸ್ತ ಹಿರಿಯ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಧಿಕಾರಿಗಳ ಶಾಸಕರ ಸಮ್ಮುಖದಲ್ಲಿ ಜರುಗುವ ಸರ್ಕಾರಿ ಕಾರ್ಯಕ್ರಮಗಳಲ್ಲಿ , ಸಭೆಯ ವೇದಿಕೆಯ ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಪಂ ವತಿಯಿಂದ ಹಾಗೂ ಸ್ಥಳೀಯ ಆಡಳಿತದಿಂದ ಜರುಗುವ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ , ಜನಪ್ರತಿನಿಧಿಗಳಲ್ಲದವರೇ ಅಂಧಃ ದರ್ಭಾರ್ ನಡೆಸುತ್ತಿದ್ದು. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜನಪ್ರತಿನಿಧಿಗಳಲ್ಲವರಿಗೆ ಮಣೆ ಹಾಕಲಾಗುತ್ತಿದ್ದು , ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರು ಮೌನ ಸಮ್ಮತಿ ನೀಡುತ್ತಿರುವಂತಿದೆ. ಅವರ ಉಪಸ್ಥಿತಿಯಲ್ಲಿ ಈ ರೀತಿ ವೇದಿಕೆಯ ನಿಯಮಗಳನ್ನು , ರಾಜಾ ರೋಷವಾಗಿ ಉಲ್ಲಂಘಿಸುವುದಕ್ಕೆ ಗ್ರಾಪಂ ಅಧಿಕಾರಿಗಳಿಗೆ ಅನುವುಮಾಡಿಕೊಡುತ್ತಿರುವುದು ಖಂಡನೀಯ ಎಂದು ಮಹಲಿಂಗಪ್ಪ ದೂರಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಪ್ರಜ್ಞಾವಂತ ರಾಜಕಾರಣಿಯಾಗಿದ್ದು ಇಂತಹ ಅನಧಿಕೃತ ಸದಸ್ಯರ ಕುರಿತು , ಜನ ಪ್ರತಿನಿಧಿಗಳಲ್ಲದವರೊಂದಿಗೆ ವೇದಿಕೆ ಹಂಚಿಕೊಳ್ಳುವುದರ ಬಗ್ಗೆ ಜಾಗ್ರತೆ ಹೊಂದಬೇಕಿದೆ ಎಂದು ಶಾಸಕರಿಗೆ ಈ ಮೂಲಕ ಸಲಹೆ ನೀಡಿದ್ದಾರೆ. ತಾವು ದಲಿತ ವರ್ಗದವರು ಹಾಗೂ ಸೌಮ್ಯ ಸ್ವಭಾವದವರೆಂಬ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ , ಇದನ್ನು ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ. *ಕಾನೂನು ಹೋರಾಟ ಮಾಧ್ಯಮಗಳ ಮೊರೆ*- ತಾಮ್ಮ ಮೇಲ‍ಾಗುತ್ತಿರುವ ಶೋಷಣೆ ಹಾಗೂ ಕಿರುಕುಳ ಕುರಿತು , ಸಂಬಂಧಿಸಿದ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಲ್ಲಿ. ಭ್ರಷ್ಟ ಹಾಗೂ ಭಂಡ ದಲಿತ ವಿರೋಧಿ PDO ವೀರಣ್ಣ , ಹಾಗೂ ಹೆಂಗಸರ ಹೆಸರಲ್ಲಿ ಗಂಡಸರು ಮಾಡುತ್ತಿರುವ. ಜನಪ್ರತಿನಿಧಿಗಳಲ್ಲದವರ ಅಧಿಕಾರ ದುರುಪಯೋಗದ , ಮೂರ್ಖರ ಅಂಧಃ ದರ್ಭಾರ್ ಕುರಿತು ಸೂಕ್ತ ಸಾಕ್ಷ್ಯಾಧಾರಗಳ ಸಮೇತ ರಾಜ್ಯಾಪಾಲರಿಗೆ ದೂರಲಾಗುವುದು. ನ್ಯಾಯಾಲಯದ ಮೊರೆ ಹೋಗಲಾಗುವುದು , ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಗಳ ರಾಜ್ಯಮಟ್ಟದ ನಿರ್ಧೇಶಕರನ್ನು ತಾವು ಖುದ್ದು ಭೇಟಿ ನೀಡಿ. ಗ್ರಾಮ ಪಂಚಾಯ್ತಿ ಯಲ್ಲಿ ಜರುಗುತ್ತಿರುವ ಅಂಧಃ ದರ್ಭಾರ್ ಬಗ್ಗೆ , ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುವುದು. ಹಾರಕಬಾವಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಾಗಿರುವ ಭ್ರಷ್ಟಾಚಾರ , ಹಾಗೂ ದಲಿತರ ಮೇಲಾಗುತ್ತಿರುವ ನಿರಂತರ ಶೋಷಣೆ. ಗ್ರಾಮ ಪಂಚಾಯ್ತಿ ಕೆಲ ಮಹಿಳಾ ಸದಸ್ಯರ ಬದಲಿಗೆ , ಅವರ ಮನೆಯ ಗಂಡಸರು ಮಾಡುತ್ತಿರುವ ಅಧಿಕಾರ ದುರುಪಯೋಗ ಹಾಗೂ ಅಂಧಃ ದಬ್ಬಾಳಿಕೆ ಕಿರುಕುಳ ಗಳ ಕುರಿತು. ಮತ್ತು ಸಭ್ಯಸ್ತರಿಗೆ ಸುಶಿಕ್ಷಿತ ಸದಸ್ಯರಿಗೆ , ಅವರು ನೀಡುತ್ತಿರುವ ಕಿರುಕುಳ ಬಗ್ಗೆ. ಸಾಕ್ಷ್ಯಾಧಾರಗಳ ಸಮೇತ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದ್ದು , ಶೀಘ್ರದಲ್ಲಿ ಎಲ್ಲಾ ಮಾಧ್ಯಮಗಳ ಪತ್ರಿಕೆಗಳ ಕೇಂದ್ರ ಕಚೇರಿಗಳಿಗೆ ಖುದ್ದು ತೆರಳಿ ದೂರು ನೀಡಲಾಗುವುದು ಎಂದು ಸದಸ್ಯರಾದ ಡಾ” ಮಹಲಿಂಗಪ್ಪರವರು ತಿಳಿಸಿದ್ದಾರೆ.

✍️ ವಂದೆೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *