ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ವತಿಯಿಂದ ಹೊಸ ಎಚ್‌ಆ‌ರ್ ನೀತಿಗೆ ವಿರೋಧ ಸಂಘದ ಜಿಲ್ಲಾ ಪದಾಧಿಕಾರಿಗಳು ನೀತಿ ಹಿಂತೆಗೆದುಕೊಳ್ಳುವಂತೆ ಒತ್ತಾಯ

ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ವತಿಯಿಂದ ಹೊಸ ಎಚ್‌ಆ‌ರ್ ನೀತಿಗೆ ವಿರೋಧ ಸಂಘದ ಜಿಲ್ಲಾ ಪದಾಧಿಕಾರಿಗಳು ನೀತಿ ಹಿಂತೆಗೆದುಕೊಳ್ಳುವಂತೆ ಒತ್ತಾಯ

ಬಳ್ಳಾರಿ :ಶ್ರೀಮತಿ ಶಾರದಾ ಮಳೆಬೆನ್ನೂರ್ ರವರ ಜ್ಞಾಪಕಾರ್ಥ FPAINDIA ಸಭಾ ಭವನದಲ್ಲಿ ಆರೋಗ್ಯ ಇಲಾಖೆಯಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆಯ ನೂತನ ಮಾನವ ಸಂಪನ್ಮೂಲ (ಎಚ್‌ಆರ್) ನೀತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ KSHCOEA-BMS ಸಂಘದ ಜಿಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ನೂತನ ನೀತಿಯ ಸಂಬಂಧ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆ ನಡೆಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕದಲ್ಲಿ ಸುಮಾರು 30 ಸಾವಿರ ಸಿಬ್ಬಂದಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಸಿಬ್ಬಂದಿಗೆ ಕಡ್ಡಾಯ ವರ್ಗಾವಣೆ, ಮರು ನೇಮಕಾತಿ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನೇಮಕಾತಿ, ವರ್ಗಾವಣೆ, ನಿಯೋಜನೆ ಕುರಿತು ಮಾನವ ಸಂಪನ್ಮೂಲ ನೀತಿಯನ್ನು ವಿರೋಧಿಸುತ್ತದೆ ಇದರಿಂದ ರಾಜ್ಯದ ನೌಕರರು ಹಾಗೂ ಅವರ ಕುಟುಂಬಗಳಿಗೆ ಮಾರಕವಾಗಿದೆ ಎಂದರು.ದಶಕಗಳ ಕಾಲ ಕೆಲಸ ಮಾಡಿದರೂ ಸೇವಾ ಭದ್ರತೆ ನೀಡಿಲ್ಲ. ಹೊಸ ನೀತಿಯು ಖಾಯಂ ನೌಕರಿ ಬದಲು ಖಾಯಂ ಮನೆಗೆ ಎನ್ನುವ ಹಾಗಿದೆ. ಮುಂಬರುವ ದಿನಗಳಲ್ಲಿ ಇದರ ವಿರುದ್ಧ ಒಂದಾಗಿ ಎಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು. ಸ್ವಯಂ ಪ್ರೇರಣೆಯಿಂದ ಸಂಘದ ಸದಸ್ಯತ್ವ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕು ಎಂದು ಹೇಳಿದ್ದಾರೆ.ಶೀಘ್ರದಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆ ಆಯೋಜಿಸಿ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕೈಗೊಂಡ ನಿರ್ಣಯಗಳನ್ನು ಪ್ರತಿಯೊಬ್ಬರಿಗೂ ತಿಳಿಸಲಾಗುವುದು. ನೌಕರರ ಜಿಲ್ಲಾ ಮಟ್ಟದ ಸಮಾವೇಶವೂ ನಡೆಸಲಾಗುವುದು. ನೂತನ ಎಚ್‌ಆರ್ ಪಾಲಿಸಿ ವಿರೋಧಿಸಿ ಯಾವುದೇ ಸಂದರ್ಭದಲ್ಲಿ ನೌಕರರು ಮುಷ್ಕರಕ್ಕೆ ಕರೆ ಸೂಚನೆಯ ಕ್ರಮದ ಎಚ್ಚರಿಕೆಗೆ ಜಗ್ಗದೆ ಸಂಘದ ನಿರ್ಣಯಕ್ಕೆ ಸಂಘದ ನಿರ್ಣಯಗಳಿಗೆ ಬದ್ಧರಾಗಿ ನಡೆಯಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ KSHCOEA-BMS ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *