ಶ್ರೀ ಗಣಪತಿ ಪ್ರತಿಷ್ಠಾಪನ ಪ್ರಯುಕ್ತ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ…

ಶ್ರೀ ಗಣಪತಿ ಪ್ರತಿಷ್ಠಾಪನ ಪ್ರಯುಕ್ತ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ .ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಜ್ಞವಲ್ಕ ಮಂದಿರದಲ್ಲಿ 49ನೆಯ ಶ್ರೀ ಮಹಾಗಣಪತಿ ಪ್ರತಿಷ್ಠಾಪರ ಮಹೋತ್ಸವದ ಅಂಗವಾಗಿ ಶನಿವಾರದ ದಿನದಂದು. ಶ್ರೀ ಆಂಜನೇಯ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ. ಮತ್ತೆ ತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಮುರಳಿಧರ ಕುಲಕರ್ಣಿ ಮಾತನಾಡಿ ಹುಟ್ಟಿದ ಮನುಷ್ಯ ಸನ್ಮಾರ್ಗದಲ್ಲಿ ಜೀವನ ನಡೆಸಲು ಹಾಗೂ ತನ್ನ ಜನ್ಮ ಸಾರ್ಥಕತೆಯನ್ನು ಸಾರ್ಥಕವಾಗಿಸಲು ಭಗವಂತನ ನಾಮ ಸ್ಮರಣೆ ಅವಶ್ಯವಾಗಿದ್ದು ಭಕ್ತಿ ಮಾರ್ಗವನ್ನು ಅನುಸರಿಸುವುದರ ಮೂಲಕ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರವಿ ವಿರಾಪುರ್. ಪ್ರಸನ್ನ ಆಲಂಪಲ್ಲಿ. ಸತೀಶ್ ಕೊಮ್ಲಾಪುರ ಆನಂದ. ಪ್ರಕಾಶ್. ರಮಾಕಾಂತ್ ರಾವ್ . ಗುರುರಾಜ್ ಚರ್ಚನ ಗುಡ್ಡ ಸೇರಿದಂತೆ ಸೇವಾ ಸಮಿತಿಯ ಸದಸ್ಯರು ವಿಪ್ರ ಸಮಾಜ ಬಾಂಧವರು ಪಾಲ್ಗೊಂಡಿದ್ದರು..
