ಶ್ರೀ ರಾಘವೇಂದ್ರ ಸ್ವಾಮಿಗಳವರ 35 4ನೇ ಆರಾಧನಾ ಮಹೋತ್ಸವ…

ಗಂಗಾವತಿ. ಉಡುಪಿ ಪೇಜಾವರ ಅದೂ ಕ್ಷಮಠದ ಜಯನಗರದಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ವಿಜಯ ಧ್ವಜ ಸಂಸ್ಕೃತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ಆರಾಧನಾ ಮಹೋತ್ಸವ ಮದ್ಯಾರಾ ಧನೆ ಆಗಸ್ಟ್ 11ರಂದು ಆಯೋಜಿಸಲಾಗಿದೆ ಎಂದು ಆಚಾರ್ ಕಲ್ಮಂಗಿ. ವಾದಿಂದ್ರ ಆಚಾರ್ ವಿಜೇಂದ್ರ ಆಚಾರ್, ಶ್ರೀಧರ್ ಆಚಾರ್ ವಾಗೀಶ್ ಆಚಾರ್ ಹೇಳಿದರು. ಅವರು ಬುಧವಾರದಂದು ದೇವಸ್ಥಾನದ ಆವರಣದಲ್ಲಿ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿ. ಪ್ರತಿವರ್ಷದಂತೆ ಈ ವರ್ಷವೂ ಸಹ ಜಯನಗರದಲ್ಲಿರುವ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಕಲಿಯುಗದ ಕಾಮಧೇನು ಕಲ್ಪವೃಕ್ಷ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳವರ 354 ನೆ ಆರಾಧನ ಮಹೋತ್ಸವವನ್ನು ಮದ್ದ್ಯಾ ರಾಧನೆ ಆಗಸ್ಟ್ 11 ಸೋಮವಾರದಂದು ಆಯೋಜಿಸಲಾಗಿದ್ದು ಎಂದಿನಂತೆ ಸುಪ್ರಭಾತ ನಿರ್ಬಲ್ಯ ವಿಸರ್ಜನೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ವಿವಿಧ ಬಜನಾ ಮಂಡಳಿಗಳಿಂದ ಭಜನೆ ಮೂಲಕ ಮಹಾರಥೋತ್ಸವ. ಹಾಗೂ ಅಲಂಕಾರ ಬ್ರಾಹ್ಮಣರ ಸೇವೆ ಸಕಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಗುವುದೆಂದು ಹೇಳಿದರು.. ಆರಾಧನಾ ಮಹೋತ್ಸವದ ಪ್ರಯುಕ್ತ ದಿನಾಂಕ ಆರು ಎಂಟು 2025 ರಿಂದ 9 8 2018 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ವಿದ್ವಾನ್ ಕೆ ಪವನ ಆಚಾರ ಆಧ್ಯಾಪಕರು ಅವರಿಂದ ಉಪನ್ಯಾಸ ಜರುಗಳಿದ್ದು ದಿನಾಂಕ 9 ರಂದು ಶನಿವಾರ ಹುಣ್ಣಿಮೆಯ ಪ್ರಯುಕ್ತ ಋಗ್ವೇದಿ ಹಾಗೂ ಯಜುರ್ವೇದಿಗಳಿಗೆ. ಸಾಮೂಹಿಕ ಉಪಕರ್ಮ ಹಾಗೂ ನೂತನ ಉಪಕರ್ಮ ಬೆಳಗ್ಗೆ 6:00 ಯಿಂದ ಜರುಗಲಿದ್ದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು
