ಸತತ ಮಳೆ. ಬೆಳೆ ಹಾನಿಗೆ ಪರಿಹಾರ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ.

ಗಂಗಾವತಿ.. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆದ ಪರಿಸ್ಥಿತಿ ರೈತರ ಪರಿಸ್ಥಿತಿ ನಿರ್ಮಾಣ ವಾಗಿದ್ದು ವಾಯು ಭಾರ ಕುಸಿತ ಪರಿಣಾಮವಾಗಿ ಸತತ ಮಳೆಯಿಂದಾಗಿ ಪಸಲು ಕೊಡುವ ಹಂತದಲ್ಲಿ ಭತ್ತದ ಬೆಳೆ ನಷ್ಟವಾಗಿದ್ದು ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಈಡಾದ ರೈತರಿಗೆ ಬೆಳೆ ಪರಿಹಾರ ಹಾಗೂ ಸಾಲ ಮನ್ನಾ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಗಂಗಾವತಿ ತಾಲೂಕ ಘಟಕದ ನೇತೃತ್ವದಲ್ಲಿ ಬುಧವಾರದಂದು ಶ್ರೀ ಕೃಷ್ಣದೇವರಾಯ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶ್ರೀನಿವಾಸ್ ಹೊಸಳ್ಳಿ ಮಾತನಾಡಿ ಅಕಾಲಿಕ ಸತತ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನೆಲಕುರುಳಿ ರೈತರು ಸಂಕಷ್ಟದಲ್ಲಿ ತೊಡಗಿದ್ದು ಅಲ್ಲಿ ಇಲ್ಲಿ ಸಾಲ ಮಾಡಿ ಬೆಳೆದ ಬೆಳೆ ನಷ್ಟದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಬೆಳೆ ನಷ್ಟಗೊಂಡ ಪ್ರದೇಶಕ್ಕೆ ತಹಸೀಲ್ದಾರರು ಹಾಗೂ ಅಧಿಕಾರಿ ವರ್ಗದವರು ಸರ್ವೆ ನಡೆಸಿ ತಕ್ಷಣವೇ ಪರಿಹಾರ ಕಲ್ಪಿಸಬೇಕು ಹಾಗೆ ಸಹಕಾರ ಸಂಘ ಸೇರಿದಂತೆ ಬ್ಯಾಂಕ್ ನಲ್ಲಿ ಪಡೆದುಕೊಂಡ ರೈತರ ಸಾಲಗಳನ್ನು ಮನ್ನಾ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುತ್ತಣ್ಣ. ನಿರುಪಾದಿ ಬೆಣಕಲ್ ಮಂಜುನಾಥ್ ಮ ರಿಯಪ್ಪ ವಿರುಪಣ್ಣ ಸೇ ರಿದಂತೆ ಅಪಾರ ರೈತಾಪಿ ವರ್ಗದವರು ಪಾಲ್ಗೊಂಡು ಪ್ರತಿಭಟನೆ ನಡೆಸಿದರು.

