“ಆನೆಗೊಂದಿಯಲ್ಲಿ ಗಜಾನನ ಸಮಿತಿಯಿಂದ ಕ್ರೀಡೆ..

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆಯಾದ ವೀರ ಕಂಪಿಲರಾಯ ಮತ್ತು ಕುಮಾರರಾಮರು ಆನೆಗೊಂದಿಯನ್ನು ಮೂಲವಾಗಿಟ್ಟುಕೊಂಡು ಆಡಳಿತವನ್ನು ನಡೆಸಿದರು.ಇಡೀ ಭಾರತ ದೇಶದಲ್ಲಿ ಯಾರೂ ಸೋಲಿಸಲಾಗದ ದೆಹಲಿ ಸುಲ್ತಾನರನ್ನು ಸೋಲಿಸಿದ್ದು ನಮ್ಮ ಹೇಮ್ಮೆಯ ಆನೆಗೊಂದಿ ಅರಸರಾದ ವೀರ ಕಂಪಿಲರಾಯ, ಮತ್ತು ಕುಮಾರರಾಮ ಆನೆಗೊಂದಿಯಲ್ಲಿ ಅರ್ಜುನ ಗಜಾನನ ಯುವಕ ಮಂಡಳಿಯಿಂದ ನಾಲ್ಕನೇ ವರ್ಷ ಗಜಾನೋತ್ಸವದ ಪ್ರಯುಕ್ತ ಹಲವಾರು ಕ್ರೀಡೆಗಳನ್ನು ಹಮ್ಮಿಕೊಂಡಿದ್ದರು. ಕಬ್ಬಡ್ಡಿ ಗುಂಡು ಎತ್ತುವ ಸ್ಪರ್ಧೆ ತೆಂಗಿನಕಾಯಿ ಹೊಡೆಯುವ ಸ್ಪರ್ಧೆ ಮೊದಲ ದಿನದಲ್ಲಿ ಆರಂಭಗೊಂಡವು ಕಬ್ಬಡ್ಡಿಯಲ್ಲಿ ಸುಮಾರ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಕಮಲಾಪುರ ಗಂಗಾವತಿ ಆನೆಗುಂದಿ ಸಂಗಾಪುರ ಬಂಡಿ ಬಸಪ್ಪ ಕ್ಯಾಂಪ್ ಬಸವನದುರ್ಗ ಮಲ್ಲಾಪುರ ರಾಂಪುರ ಸನಾಪುರ ತಂಡಗಳು ಭಾಗವಹಿಸಿದ್ದವು ಅಂತಿಮ ಫೈನಲ್ ಪಂದ್ಯದಲ್ಲಿ ಬಸವನ ದುರ್ಗಾ ಗಜಾನನ ತಂಡ ಏ ತಂಡ ರೋಮಾಂಚಕ ರೀತಿಯಲ್ಲಿ ಒಂದು ಅಂಕದಿಂದ ಆನೆಗುಂದಿ ತಂಡವನ್ನು ಸೋಲಿಸಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು. ದ್ವಿತೀಯ ಬಹುಮಾನ ಕಿಷ್ಕಿಂದಾ ತಂಡ ಆನೆಗುಂದಿ ಪಡೆದುಕೊಂಡಿತು. ಗುಂಡು ಎತ್ತುವ ಸ್ಪರ್ಧೆಯಲ್ಲಿ ನಾಗರಾಜ್ ಗಂಗಾವತಿ ಪ್ರಥಮ ಬಹುಮಾನ ಪಡೆದುಕೊಂಡನು. ತೆಂಗಿನಕಾಯಿ ಹೊಡೆಯುವ ಸ್ಪರ್ಧೆಯಲ್ಲಿ ಹಲವಾರು ಯುವಕರು ಭಾಗವಹಿಸಿದ್ದರು ಈ ಒಂದು ಪಂದ್ಯಾವಳಿಯಲ್ಲಿ ಮೊದಲ ಅಂತ್ಯದಲ್ಲಿ ಮಂಜುನಾಥ್ ಜಂಗಾರ ಬಸವನದುರ್ಗ ಮತ್ತು ಆನೆಗುಂದಿಯ ಯುವ ಪ್ರತಿಭೆ ವೆಂಕಟೇಶ್ ಮಾಂತ ಸಮಬಲ ಒಂದೇ ಏಟಿನಲ್ಲಿ 16 ಪೀಸ್ ಗಳು ಆಗಿದ್ದರಿಂದ ಮತ್ತೆ ಮಂಜುನಾಥ್ ಜಿಂಗರ್ ಮತ್ತು ವೆಂಕಟೇಶ್ ಮಾಂತ ಅವರಿಂದ ಅಂತಿಮ ಪ್ರಭಾವ ಪೈಪೋಟಿಯಲ್ಲಿ ಕೊನೆಯ ಒಂದು ಏಟಿನಲ್ಲಿ 32 ಹೋಳುಗಳನ್ನು ಮಾಡಿ ಮಂಜುನಾಥ್ ಜಂಗರ ಪ್ರಥಮ ಬಹುಮಾನ ಪಡೆದುಕೊಂಡನು. ಈ ಒಂದು ಗಂಡು ಮೆಟ್ಟಿನ ನಾಡಲ್ಲಿ ಆನೆಗುಂದಿ ಗ್ರಾಮದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಬಹುಮಾನಗಳ ಪ್ರಾಯೋಜಕರು ಕೆ ತಿಮ್ಮಪ್ಪ ನಾಯಕ ಬಾಳೆಕಾಯಿ ಮಾಜಿ ಆನೆಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅವರು ಕೊಡುಗೆಯನ್ನು ನೀಡಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಹಾಲಿ ಅಧ್ಯಕ್ಷ ಹುಲಿಗೆಮ್ಮ ಹೊನ್ನಪ್ಪ ನಾಯಕ ಕೂಡ ಭಾಗವಹಿಸಿದ್ದರು ಕೆ ಕುಮಾರ್ ಗೈಡ್ ಮತ್ತು ಸಂತೋಷ್ ಕುಮಾರ್ ಮತ್ತು ಅರ್ಜುನ ಗಜಾನನ ಅಧ್ಯಕ್ಷರು ಮತ್ತು ಊರಿನ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು.
