ತಂದೆಗೆ ಪ್ರಶಸ್ತಿ ಅರ್ಪಿಸಿದ ಪಿಐ ಪ್ರಕಾಶ ಎಲ್. ಮಾಳೆ… 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ – ಏ.2ರಂದು ಬೆಂಗಳೂರುನಲ್ಲಿ ಪದಕ ಸ್ವೀಕಾರ..

ತಂದೆಗೆ ಪ್ರಶಸ್ತಿ ಅರ್ಪಿಸಿದ ಪಿಐ ಪ್ರಕಾಶ ಎಲ್. ಮಾಳೆ… 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ – ಏ.2ರಂದು ಬೆಂಗಳೂರುನಲ್ಲಿ ಪದಕ ಸ್ವೀಕಾರ..

ಗಂಗಾವತಿ: ಗಂಗಾವತಿ ನಗರದ ನಗರ ಠಾಣೆಯ ಪಿಐ ಪ್ರಕಾಶ ಎಲ್. ಮಾಳಿ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ. ಈ ಪ್ರಶಸ್ತಿಯನ್ನು ಏಪ್ರಿಲ್ 2ರಂದು ಬೆಂಗಳೂರುನಲ್ಲಿ ನಡೆಯುವ ಸಮಾರಂಭದಲ್ಲಿ ಸ್ವೀಕರಿಸಲಿದ್ದಾರೆ.ಯಲಬುರ್ಗಾ ತಾಲೂಕಿನ ಹುಣಸಿಹಾಳ್ ಗ್ರಾಮ ಮೂಲದ ಪ್ರಕಾಶ ಎಲ್. ಮಾಳಿ ಅವರು ಕೃಷಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2007ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರಿ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.ಅವರು ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದು, ನಂತರ ಸಿಪಿಐ ಆಗಿ ಬಡ್ತಿ ಹೊಂದಿ ಕೊಪ್ಪಳ ಮಹಿಳಾ ಠಾಣೆ, ರಾಜ್ಯ ಗುಪ್ತ ವಾರ್ತೆ ವಿಭಾಗ ಮತ್ತು ಹಟ್ಟಿ ಪೊಲೀಸ್ ಠಾಣೆಗಳಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಗಂಗಾವತಿ ನಗರ ಠಾಣೆಯಲ್ಲಿ ಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಪ್ರಕರಣಗಳನ್ನು ಕಾಲಮಿತಿಯೊಳಗೆ ಪತ್ತೆ ಹಚ್ಚಿರುವುದು ಅವರ ವಿಶೇಷ ಸಾಧನೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಪಿಐ ಪ್ರಕಾಶ ಎಲ್. ಮಾಳಿ ಅವರು, “ಈ ಗೌರವವನ್ನು ನನ್ನ ತಂದೆಗೆ ಅರ್ಪಿಸುತ್ತಿದ್ದೇನೆ” ಎಂದು ಭಾವುಕರಾಗಿ ತಿಳಿಸಿದ್ದಾರೆ.ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಸಾಮಾಜಿಕ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಗಂಗಾವತಿ ನಗರ ಠಾಣೆಗೆ ಭೇಟಿ ನೀಡಿ ಪಿಐ ಪ್ರಕಾಶ ಎಲ್. ಮಾಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.ಫೋಟೋ ಕ್ಯಾಪ್ಷನ್:ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವ ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ ಎಲ್. ಮಾಳಿ ಅವರನ್ನು ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸುತ್ತಿರುವುದು.

Leave a Reply

Your email address will not be published. Required fields are marked *