ಭಗತ್ ಸಿಂಗ್ ಜಯಂತಿ ಯನ್ನು ಸರ್ಕಾರ ಆಚರಣೆ ಮಾಡಲಿ.. ಗ್ಯಾ ನೇಶ್ ಕಡಗದ ಒತ್ತಾಯ..

ಭಗತ್ ಸಿಂಗ್ ಜಯಂತಿ ಯನ್ನು ಸರ್ಕಾರ ಆಚರಣೆ ಮಾಡಲಿ.. ಗ್ಯಾ ನೇಶ್ ಕಡಗದ ಒತ್ತಾಯ..

ಸ್ವಾತಂತ್ರ್ಯ ಹೋರಾಟದ ಧೃವತಾರ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದವರು ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರ ಮನದಲ್ಲಿ ಮೂಡಲಿ ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವ ಜನರು ಸ್ಫೂರ್ತಿಯಾಗಿ ತಗೆದುಕೊಳ್ಳಬೇಕು ಎಂದು ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷ ಗ್ಯಾನೇಶ್ ಕಡಗದ ಹೇಳಿದರುಇಂದು ನಗರದ ಅಲ್ಪ ಸಂಖ್ಯಾ ತರ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಎಸ್ ಎಫ್ ಐ ಸಮಿತಿಯಿಂದ ಆಯೋಜಿಸಿದ ಶಹೀದ್ ಭಗತ್ ಸಿಂಗ್ ಅವರ 119ನೇ ಜನ್ಮ ದಿನಚಾರಣೆಯನ್ನು ಭಗತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಗೌರವ ಸಲ್ಲಿಸಿ ಮಾತನಾಡಿದರುಭಗತ್ ಸಿಂಗ್ ಅಂದರೆ ರೋಮಾಂಚನಗೊಳುವ ಒಂದು ದೊಡ್ಡ ಶಕ್ತಿ ಭಾರತದ ಸ್ವಾತಂತ್ರ್ಯ ಚಳುವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಫೂರ್ತಿಯಾಗಬೇಕಿದೆ.ಆ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರ ಆಲೋಚನೆ ಮಾಡಬೇಕು ಆದರೆ ಪ್ರಸ್ತುತ ದಿನಮಾನಗಳಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷ ನಂಜು ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನು ವಿರೋಧಿಸುವ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕಿದೆ ಎಂದರು.ಎಸ್‌ಎಫ್‌ಐ ಉಪಾಧ್ಯಕ್ಷ ಶರೀಪ್ ಮಾತನಾಡಿ ಭಗತ್ ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಷ್ಟೆ ಅಲ್ಲದೆ ಭವಿಷ್ಯದಲ್ಲಿ ಭಾರತ ಹೇಗಿರಬೇಕೆಂದು ಕನಸು ಕಂಡವರು, ಜಾತಿ ಶಾರತಮ್ಯ ನೀತಿಗಳು ಹೋಗಬೇಕು, ಧರ್ಮದ ಒಡೆದಾಳುವರು, ಸಾಮ್ರಾಜ್ಯಶಾಹಿಗಳನ್ನು ದೇಶವನ್ನು ಬಿಟ್ಟು ಓಡಿಸಬೇಕು ಎಂದು ಹೇಳುತ್ತಿದ್ದರುಅಸ್ಪೃಶ್ಯತೆಯ ಬಗ್ಗೆ ಭಗತ್ ಸಿಂಗ್ ತನ್ನ 16ನೇ ವಯಸ್ಸಿನಲ್ಲಿಯೇ ಲೇಖನವನ್ನು ಬರೆದಿದ್ದರು ಇವರ ಜಯಂತಿಯನ್ನು ಸರಕಾರ ಆಚರಿಸಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗ್ಯಾನೇಶ್ ಕಡಗದ ಉಪಾಧ್ಯಕ್ಷ ಶರೀಪ್.ಸದಸ್ಯರಾದ ಲಕ್ಷ್ಮಣ. ಗ್ಯಾನಪ್ಪ. ರಾಜಶೇಖರ್. ರಾಜಾಸಾಬ್. ಸಚಿನ್. ರುದ್ರಗೌಡ. ಬೀರಪ್ಪ. ಮೌನೇಶ್. ಅಹ್ಮದ್.ನಾಗರಾಜ್. ಹುಸೇನ್ ಸಾಬ್.

Leave a Reply

Your email address will not be published. Required fields are marked *