ಎಸ್ ಕೆ ವಿ ವಿ ಸಂಸ್ಥೆಯ. ಉಭಯ ಶಾಲೆಗಳಲ್ಲಿ ಸಂಭ್ರಮದ ಗಣಪತಿ ಉತ್ಸವ…

ಗಂಗಾವತಿ ಪ್ರತಿಷ್ಠಿತ ಸಂಸ್ಥೆ ಶ್ರೀ ಕೊಟ್ಟೂರೇಶ್ವರ ವಿದ್ಯಾ ವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಮತಿ ಗಂಗಮ್ಮ ಗುರುಪಾದಗೌಡ ಮಾಲಿಪಾಟೀಲ್ ಪ್ರೌಢಶಾಲೆ ಪಂಪಾ ನಗರ ಗಂಗಾವತಿ ಉಭಯ ಶಾಲೆಗಳಿಂದ ಇಂದು ಅದ್ದೂರಿಯಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಉಭಯ ಶಾಲೆಗಳ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಗೌಡ ಪಾಟೀಲ್ ಹಾಗೂ ನಿಯೋಜಿತ ಮುಖ್ಯೋಪಾಧ್ಯಾಯ ವಿಶ್ವನಾಥ್ ಹಿರೇಮಠ್ ಇವರುಗಳ ಸಾರಿಥ್ಯದಲ್ಲಿ ಗಣಪತಿಯ ಪ್ರತಿಷ್ಠಾಪನ ಕಾರ್ಯಕ್ರಮ ನೆರವೇರಿತು ಎಲ್ಲ ಮಕ್ಕಳು ಹಾಗೂ ಶಿಕ್ಷಕರು ಗಣೇಶನ ಆಶೀರ್ವಾದ ಪಡೆದು ಕೃತಾರ್ಥರಾದರು ಹಿರಿಯ ಶಿಕ್ಷಕ ಆಶ್ರಿತ್ ಸಹ ಶಿಕ್ಷಕರು ಬಾಲಪ್ಪ ಎಂ, ಶ್ರೀಮತಿ ವಿಜಯಲಕ್ಷ್ಮಿ ನಾಗಪ್ಪ ಸಹ ಶಿಕ್ಷಕರು ಲಕ್ಷ್ಮಿ, ಸುಧಾಮಣಿ, ಶಿವಗೀತಾ,ಜುಲೇಖ ಹಾಗೂ ಪಾಲಕರು ಉಪಸ್ಥಿತರಿದ್ದರು..

