ಕರೋಕೆ ಮೂಲಕ ಸ್ಥಳೀಯ ಕಲಾವಿದರಿಗೆ ಉತ್ತಮ ವೇದಿಕೆ ದೊರಕಿದೆ: ಸಿದ್ದಯ್ಯಸ್ವಾಮಿ….

ಸಿಂಧನೂರು: > ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಮೂಲಕ ಕರೋಕೆ ಟ್ರ್ಯಾಕ್ ಬಂದ ನಂತರ ಸ್ಥಳೀಯ ಕಲಾವಿದರು, ಸಿನೆಮಾ, ಭಾವಗೀತೆಗಳ ಹಾಡು, ಭಕ್ತಿ ಗೀತೆಗಳ ಬಗ್ಗೆ ಒಲವು ವ್ಯಕ್ತಪಡಿಸಿ ಹಾಡುಗಳನ್ನು ಕಲಿಯುತ್ತಿದ್ದು ಕರೋಕೆ ವೇದಿಕೆ ಕಲ್ಪಿಸಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ಎಸ್.ಪಿ.ಸಿದ್ದಯ್ಯ ಸ್ವಾಮಿ ಕವಿತಾಳ ಹೇಳಿದರು.ಅವರು ಸಿಂಧನೂರಿನ ಶ್ರೀ ಕೋಟೆ ಈರಣ್ಣ ದೇವಾಲಯದ ಸಭಾಂಗಣದಲ್ಲಿ ನಿಮ್ಮಿಂದಲೇ ನಾನು ಕರೋಕೆ ಸ್ಟುಡಿಯೋ ಹಾಗೂ ಕರೋಕೆ ಕಲಾವಿದೆ ಸ್ವಾತಿ ಶರ್ಮಾ ಅವರ ನೇತೃತ್ವದಲ್ಲಿ ಅಖಂಡ ರಾಯಚೂರು ಜಿಲ್ಲೆಯ ಕರೋಕೆ ಕಲಾವಿದರಿಗಾಗಿ ಆಯೋಜಿಸಿದ್ದ ಗಾನಸುಧೆ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒತ್ತಡದ ಜೀವನದಲ್ಲಿ ಸಂಗೀತ,ಸಾಹಿತ್ಯ ಹಾಗೂ ಹಾಡುಗಳು ಅತೀ ಮುಖ್ಯವಾಗಿದ್ದು ಇತ್ತೀಚೆಗೆ ನಗರಗಳಲ್ಲಿ ಕರೋಕೆ ಸ್ಟುಡಿಯೋಗಳು ಆರಂಭವಾಗಿದ್ದು ಸಂಗೀತಾಸಕ್ತರಿಗೆ ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಗಂಗಾವತಿಯ ಸಂಗೀತ ಸ್ವರಾಂಜಲಿ ಕಲಾ ತಂಡದ ಕಲಾವಿದರಾದ ಹನುಮಂತಪ್ಪ ಹುಲಿಹೈದರ್, ಯಲ್ಲಪ್ಪ ಪೋಲಕಾಲ್, ಗಿರಿಜಮ್ಮ, ಗೌಸಿಯಾ ಬೇಗಂ, ವಿಜಯಲಕ್ಷಿö್ಮ, ಪರಶುರಾಮ ದೇವರ ಮನೆ, ಸಮೀನಾ ಬೇಗಂ, ಖಾಜಾಹುಸೇನ ಮುಳ್ಳುರು, ಹಾಜಿ ಕರೋಕೆ ಹಾಡುಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರಾದ ಸ್ವಾತಿ ಶರ್ಮಾ, ರಾಜಶೇಖರ, ಶಿವಲೀಲಾ, ಶರಣಪ್ಪ ನಂದಾ, ಶಾಮೀದ ಪಾಷಾ, ಕಾಸೀಂ, ಸಾಧಿಕ್, ಲಾಲಸಾಬ, ಸಲೀಂ ಪಾಷಾ, ವಿಶಾಲಾಕ್ಷಿ ಹಿರೇಮಠ ಸೇರಿ ಸಿಂಧನೂರಿನ ಕರೋಕೆ ಕಲಾವಿದರಿದ್ದರು.
