ಭಾರತದ ಸಂವಿಧಾನ ದೇಶದ ಪವಿತ್ರವಾದ ಗ್ರಂಥವಿದ್ದಂತೆ… ಡಾಕ್ಟರ ಶಿವರಾಜ್ ಗುರಿಕಾರ್.

ಗಂಗಾವತಿ. ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜು ಆವರಣದ ಬಯಲು ರಂಗ ಮಂದಿರ ದಲ್ಲಿ ಇಂದು ವಿದ್ಯಾರ್ಥಿಗಳಿಗೆ ಸಂವಿಧಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಓದುವ ಮುಖಾಂತರ ಕಾರ್ಯಕ್ರಮ ಆಯೋಜನ ಮಾಡಲಾಗಿತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಜಗತ್ತಿನ ಎಲ್ಲಾ ಸಂವಿಧಾನಗಳ ಮಾದರಿಗಳನ್ನು ಓದಿಕೊಂಡು ನಮ್ಮ ಸಂವಿಧಾನವನ್ನು ಅತ್ಯುತ್ತಮವಾಗಿ ರಚಿಸಿದ್ದಾರೆ ಭಾರತದ ಸಂವಿಧಾನ ದೇಶದ ಧರ್ಮ ಗ್ರಂಥ ವಿದ್ದಂತೆ ಸವಿಧಾನ ನಮ್ಮ ಆತ್ಮವಿದ್ದಂತೆಯೆಂದು ಈ ಸಂದರ್ಭದಲ್ಲಿ ಕಾಲೇಜನ ಪ್ರಾಚಾರ್ಯರಾದ ಡಾಕ್ಟರ್ ಶಿವರಾಜ್ ಗುರಿಕಾರ್ ಹೇಳಿದರು ಇದೇ ಸಂದರ್ಭದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರ ಮಂಜುನಾಥ್ ಬಳ್ಳಾಪುರ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಓದುವ ಮೂಲಕ ವಿದ್ಯಾರ್ಥಿಗಳು ಎಲ್ಲಾ ಸ್ವಾತಂತ್ರ್ಯವನ್ನು ಮತ್ತು ಪ್ರಸ್ತಾವನೆಯಲ್ಲಿ ಎಲ್ಲವನ್ನು ಅಡಗಿದೆ ಎಂದು ತಿಳಿಸಿದರು ಮತ್ತು ರಾಜ್ಯಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಂದ ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು ವಿದ್ಯಾರ್ಥಿಗಳಿಗೆ ದೈಹಿಕ ನಿರ್ದೇಶಕರಾದ ಶೋಭಾ ಪೂಜಾ ಕಾರ್ಯಕ್ರಮ ನೆರವೇರಿಸಿದರು ಈ ಸಂದರ್ಭದಲ್ಲಿ ಅಧ್ಯಾಪಕರಾದ ಜೆ ಕೃಷ್ಣ ಚನ್ನಬಸಪ್ಪ ಚಿಲ್ಕರಾಗಿ ಅಣ್ಣೂಜಿ ರೆಡ್ಡಿ ಮಾರುತಿ ಅಕ್ಕಿ ಮುಮ್ತಾಜ್ ಬೇಗ ಇಬ್ರಾಹಿಂ ಸಾಬ ಪಂಚಾಕ್ಷರಯ್ಯ ಶಿವಕುಮಾರ್ ಉಪಾಸಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ.

