ಐದನೇ ದಿನದ ಸ್ಕಂದಮಾತಾ ಅವತಾರ. ದುಷ್ಟ ಶಕ್ತಿಯನ್ನು ನಾಶ ಮಾಡಿ. ಭಕ್ತರನ್ನು ಕಾಪಾಡಲಿ::ಅಧ್ಯಕ್ಷರು ದರೋಜಿ ನಾಗರಾಜ ಶ್ರೇಷ್ಠಿ…

ಗಂಗಾವತಿ: ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನ ನವರಾತ್ರಿ ಅಂಗವಾಗಿ ಐದನೇ ದಿನದ ಸ್ಕಂದಮಾತಾ ದೇವಿಯ ಕುರಿತು ಪುರಾಣ ಪ್ರವಚನ ನಡೆಸಲಾಯಿತು.ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ಶರನ್ನನವರಾತ್ರಿಯ 5ನೇ ದಿನದ ಸ್ಕಂದಮಾತಾ ಅವತಾರ ಆ ತಾಯಿ ದುಷ್ಟ ಶಕ್ತಿಯನ್ನು ನಾಶ ಮಾಡಿ ಭಕ್ತರನ್ನು ಕಾಪಾಡಲಿ ಎಂದು ಹೇಳಿದರು. ನಮ್ಮ ಸಮಾಜದ ವತಿಯಿಂದ ಕಳೆದ 20 ವರ್ಷಗಳಿಂದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು. ಈ ವರ್ಷ ವಿಶೇಷವಾಗಿ ಪ್ರಥಮ ವರ್ಷ ಶ್ರೀ ವಾಸವಿ ವೇದಿಕೆಯ ಮುಖಾಂತರ ದೇವಿ ಪುರಾಣವನ್ನು ಪ್ರಾರಂಭಿಸಿದ್ದು ಶರನ್ನವರಾತ್ರಿಯ ಸಂದರ್ಭದಲ್ಲಿ ಒಂದೊಂದು ದಿನವೂ ದೇವಿಯ ಅವತಾರ ಬಗ್ಗೆ ವಿಶೇಷವಾದ ಪುರಾಣ ಪ್ರವಚವನ್ನು ನಡೆಸುತ್ತಾ ಗಾಯತ್ರಿ ಮಂತ್ರ. ಅಷ್ಟೋತ್ತರ ಪಾರಾಯಣ.ಕುಂಕುಮರ್ಚನೆ.ಮಹಾಮಂಗಳಾರತಿ 9 ದಿನವು ಸಹ ಮಾಡುತ್ತಾ ಬಂದಿದ್ದೇವೆ. ಇಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತುಕೊಟ್ಟು ನಮ್ಮ ಸಮಾಜ ಬಾಂಧವರು ಸಲಹೆ ಸಾಕಾರದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದೇವೆ ಜೊತೆಗೆ ಇದಕ್ಕೆ ನವ ಬೃಂದಾವನ ಭಜನಾ ಮಂಡಳಿ. ಶ್ರೀ ವಾಸವಿ ಯುವಜನ ಸಂಘ.ಮತ್ತು ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರು. ಸಮಾಜದ ಹಿರಿಯರು..ಇದಕ್ಕೆಲ್ಲ ಪ್ರೇರಣೆ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲೆಂದು ಹಾರೈಸಿದರು. ಸಂದರ್ಭದಲ್ಲಿ ದೇವಸ್ಥಾನದ ಶ್ರೀ ವಾಸವಿ ವೇದಿಕೆಯಲ್ಲಿ ಶ್ರೀ ದೇವಿ ಪುರಾಣದ ದಿವ್ಯ ಸಾನಿಧ್ಯವನ್ನು ವಹಿಸಿದ ಪೂಜ್ಯ ಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಬೃಹನ್ಮಠ ಸುಳೇಕಲ್ ರವರು ಮಾತನಾಡಿ ಶರನ್ನವರಾತ್ರಿಯ ಐದನೇ ದಿನದ ದೇವತೆ ಸ್ಕಂದಮಾತಾ ಆಗಿದ್ದು, ಇವರು ದೇವತೆಗಳ ಸೇನಾಧಿಪತಿಯಾದ ದೇವ ದೇವತೆಗಳ ಕುಮಾರ ಕಾರ್ತಿಕೇಯ (ಸ್ಕಂದ) ನ ತಾಯಿಯಾಗಿದ್ದಾರೆ.

ಸ್ಕಂದಮಾತೆಯನ್ನು ಪೂಜಿಸುವುದರಿಂದ ಶಾಂತಿ, ಸಮಾಧಾನ, ಸಂತಾನ ಪ್ರಾಪ್ತಿ, ಆಂತರಿಕ ಶಕ್ತಿ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ ಎಂಬ ನಂಬಿಕೆಯಿದೆ. ಇವರು ಕಮಲದ ಮೇಲೆ ವಿರಾಜಮಾನರಾಗಿ, ತಮ್ಮ ಮಗುವಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಕಮಲ ಮತ್ತು ಅಭಯಮುದ್ರೆಯೊಂದಿಗೆ ನಾಲ್ಕು ಕೈಗಳನ್ನು ಹೊಂದಿರುತ್ತಾರೆ.ವಾಹನ ಸಿಂಹವಾಗಿದೆ. ಆದ್ದರಿಂದ ಪೌರಾಣಿಕ ಹಿನ್ನೆಲೆ ಮತ್ತು ಸ್ವರೂಪವನ್ನು ಹೇಳುವುದಾದರೆ. ಸ್ಕಂದನ ತಾಯಿ:ದೇವತೆಗಳ ಸೇನಾಧಿಪತಿಯಾದ ಕುಮಾರ ಕಾರ್ತಿಕೇಯ (ಸ್ಕಂದ) ನ ತಾಯಿಯಾಗಿರುವುದರಿಂದ ಸ್ಕಂದಮಾತೆ ಎಂಬ ಹೆಸರು ಬಂದಿದೆ. ಆದ್ದರಿಂದ ಈ ದಿನ ತುಂಬಾ ಅತ್ಯುತ್ತಮವಾದ ದಿನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ಸರೋಜ ನರಸಿಂಹ ಶ್ರೇಷ್ಠಿ ಮತ್ತು ಭಜನಾ ಮಂಡಳಿಯ ಸರ್ವ ಸದಸ್ಯರು ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಏನ್ ವಿ ಮಂಜುನಾಥ. ಗೌರವಾಧ್ಯಕ್ಷ ದರೋಜಿ ವೆಂಕಟೇಶ ಮತ್ತು ಯುವಜನ ಸಂಘ ಪರಿವಾರದವರು. ಶ್ರೀ ವಾಸವಿ ಮಹಿಳಾ ಸಂಘದ ಅಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.

