ಬಾಲ್ಡೋಟಾ ಎಂಎಸ್‌ಪಿಎಲ್ ಗೂಂಡಾಗಳಿಂದ ಕುರಿ ಧನಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ…

ಬಾಲ್ಡೋಟಾ ಎಂಎಸ್‌ಪಿಎಲ್ ಗೂಂಡಾಗಳಿಂದ ಕುರಿ ಧನಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ… ಕಂಪನಿಯ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ದನ, ಕುರಿಗಾಹಿದೇವಪ್ಪ ಹಾಲಳ್ಳಿ ಬಸಾಪುರ ಇವರಿಗೆ ನ್ಯಾಯ ಒದಗಿಸಬೇಕೆಂದು ಹಾಗೂ BSPL ಕಾರ್ಖಾನೆ ವಿಸ್ತರಣೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ. ಉಚ್ಚ ನ್ಯಾಯಾಲಯ ಬೆಂಗಳೂರು WP:No. 5713/2009 ರಂತೆ, ಗ್ರಾಮದ ಸಾರ್ವಜನಿಕರಿಗೆ ಕೆರೆ ನೀರು ಬಳಕೆಗೆ ಅನುಮತಿ ನೀಡಿದ ಆದೇಶ, ದಿನಾಂಕ:05/01/20222] ಜಾನುವಾರು ಸಹಿತ ದಿನಾಂಕ: 23/07/2025ರಂದು ಪ್ರತಿಭಟನೆ,ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2006ರಲ್ಲಿ ಧರಂಸಿಂಗ್ ಸರ್ಕಾರ ಕೊಪ್ಪಳ, ಹಾಲವರ್ತಿ, ಬಸಾಪುರ ಗ್ರಾಮದ 1034 ಎಕರೆ ಫಲವತ್ತಾದ ಭೂಮಿ 360 ರೈತರಿಂದ ಬಲವಂತದಿಂದ ಕೆಐಎಡಿಬಿ ಮೂಲಕ BOLDOTA, MSPL ಮೂಲದ M/s AARESS IRON & STEEL ಕಂಪನಿಗೆ ವಶಪಡಿಸಿಕೊಳ್ಳಲಾಯಿತು. ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡು ಕೇವಲ 50 ಮೀಟರ್ ಅಂತರದಲ್ಲಿರುವ ಬಸಾಪುರ ಗ್ರಾಮ ಸ.ನಂ. 143 ರ ವಿಸ್ತೀರ್ಣ 44.35 ಎಕರೆ ಗ್ರಾಮದ ಸಾರ್ವಜನಿಕರ ಕೆರೆಯನ್ನು ಕಂಪನಿಗೆ ಮಂಜೂರಿ ಮಾಡಿದ ಆದೇಶ ಪ್ರಶ್ನಿಸಿ ಉಲ್ಲೇಖ: (1)ರಂತೆ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ: WP: 5713/2009ಅನ್ನು ದಿವಂಗತ ಶ್ರೀ ವಿಠಪ್ಪ ಗೋರಂಟ್ಲಿ ಅಧ್ಯಕ್ಷರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಇತರರು ಸಲ್ಲಿಸಿ, ಕೆರೆಯನ್ನು ಸರ್ಕಾರ ನಿರ್ವವಣೆ ಮಾಡಿ, ಗ್ರಾಮಸ್ಥರು ನೀರು ಬಳಕೆಗೆ ಮುಕ್ತವಾಗಿಡಬೇಕೆಂದು ಪ್ರಾರ್ಥನೆ ಮಾಡಲಾಗಿತ್ತು. ನಮ್ಮ ಎರಡನೆಯ ಪ್ರಾರ್ಥನೆಯನ್ನು ಮನ್ನಿಸಿದ ಮಾನ್ಯ ಉಚ್ಚ 5 0 “The petitioners and other villagers are permitted to use the water in the tank. The respondents shall not prevent such usage. 2 건 レ ಗ್ರಾಮದವರು ಮತ್ತು ಅರ್ಜಿದಾರರು ನೀರು ಬಳಸಲು ಅನುಮತಿ ನೀಡಿದೆ. ಅಲ್ಲದೇ ಈ ಬಳಕೆಯನ್ನು ಕಂಪನಿಯವರು ಯಾವುದೇ ಕಾರಣಕ್ಕೂ ತಡೆಯಬಾರದೆಂದು ಆದೇಶದಲ್ಲಿ ಹೇಳಲಾಗಿದೆ.ಉಲ್ಲೇಖ: (2)ರಂತೆ ತಮಗೆ ಜಾನುವಾರು ಸಹಿತ ಪ್ರತಿಭಟನೆ ಮಾಡಿ ಮನವಿಪತ್ರವನ್ನು ದಿನಾಂಕ: 23/07/2025ರಂದು ಕೊಟ್ಟಾಗ ತಾವು ಇದುವರೆಗೆ ಕಾಂಪೌಂಡ್ ತೆರವು ಮಾಡದ್ದರಿಂದ ದಿನ ನಿತ್ಯ ಕುರಿಗಾಹಿ ಮತ್ತು ದನಗಾಹಿಗಳ ಮೇಲೆ ಕಂಪನಿ ನೇಮಿಸಿರುವ ಸೆಕ್ಯೂರಿಟಿ ಹೆಸರಿನ ಗೂಂಡಾಗಳು ನೀರು ಕುಡಿಸಲು ಹೋದ ಅಮಾಯಕ ರೈತರ ಮೇಲೆ ಕಂಪನಿ ಮಾಲೀಕನ ಪ್ರಚೋದನೆಯೀಮದ ಮನಬಂದಂತೆ ಹಲ್ಲೆ ಮಾಡುತಿದ್ದಾರೆ.ನಿನ್ನೆ ದಿನಾಂಕ: 25/07/2025ರಂದು ಬಸಾಪುರದ ರೈತರೊಂದಿಗೆ ಕುರಿ ಮತ್ತು ದನಗಳಿಗೆ ನೀರು ಕುಡಿಸಲು ಕೆರೆ ಮೇಲೆ ಹೋದ ದೇವಪ್ಪ ಹಾಲಳ್ಳಿ ಸಾ॥ ಬಸಾಪುರ ಎಂಬ ಯುವಕನ ಮೇಲೆ ಕಂಪನಿಯ ಮ್ಯನೇಜರುಗಳು ಮತ್ತು ಸೆಕ್ಯೂರಿಟಿಗಳು ಮಾರಣಾಂತಿಕವಾಗಿ ಕಂಪನಿ ಮಾಲೀಕನ ಷಡ್ಯಂತ್ರ ಮತ್ತು ಪ್ರಚೋದನೆಯಿಂದ ಹಲ್ಲೆ ಮಾಡಿದ್ದಾರೆ. ಇನ್ನುಳಿದ ದನಗಾಹಿಗಳನ್ನು ಹೊಡೆದು ಓಡಿಸಿದ್ದಾರೆ. ತೀವ್ರ ಗಾಯಗೊಂಡ ದೇವಪ್ಪ ಹಾಲಳ್ಳಿಯನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಕಾರಿನಲ್ಲಿ ತಂದು ಮಾರ್ಗ ಮಧ್ಯದಲ್ಲಿ ಇಳಿಸಿ ಹೋಗುತ್ತಿರುವಾಗ ಸಾರ್ವಜನಿಕರು ಪ್ರತಿಭಟಿಸಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.ಈ ಗ್ರಾಮದ ರೈತರು ನೂರಾರು ಎಕರೆ ಭೂಮಿಯನ್ನು ಕಳೆದುಕೊಂಡಿದ್ದಾರೆ.

ಇವರಿಗೆ ಕಳೆದ 13 ವರ್ಷಗಳಿಂದ ಕಂಪನಿ ಉದ್ಯೋಗ ಕೊಟ್ಟಿಲ್ಲ. ಇವರ ಜೀವನೋಪಾಯಕ್ಕಾಗಿ ಆಧಾರವಾದ ಜಾನುವಾರುಗಳಿಗೆ ಏಕೈಕ ಕುಡಿಯುವ ನೀರಿನ ಮೂಲವನ್ನು ಕಿತ್ತುಕೊಂಡು ಈಗ ಗೂಂಡಾಗಿರಿ ಮಾಡುವ ಕಂಪನಿ, ಭವಿಷ್ಯದಲ್ಲಿ ಕಾರ್ಖಾನೆ ವಿಸ್ತರಣೆ ಆದರೆ ಇವರ ಅಟ್ಟಹಾಸ ಮಿತಿ ಮೀರಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಯಾವುದೇ ಕಾರಣಕ್ಕೂ ಈ ಕಾರ್ಖಾನೆ ವಿಸ್ತರಣೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ದೇವಪ್ಪ ಹಾ! 2/3 ಮೇಲೆ ದಾಳಿ ಮಾಡಿದ ಹಲ್ಲೆಕೋರರನ್ನು ಶಿಕ್ಷೆಗೊಳಪಡಿಸಬೇಕು. ಈತನ ನೂರಾರು ಕುರಿಗಳು ಚದುರಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಈ ಪ್ರತಿಭಟನೆ ನಡೆಸಿ ಮಾನ್ಯ ತಹಸಿಲ್ದಾರ್ ವಿಠಲ್ ಚೌಗಲ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಅಲ್ಲಮ್ಮ ಪ್ರಭು ಬೆಟ್ಟದೂರ್, ಕೆಬಿ ಗೋನಾಳ್, ಶರಣು ಗಡ್ಡಿ,ಮಂಜುನಾಥ್ ಗೊಂಡಬಾಳ, ಬಸವರಾಜ್ ಶೀಲವಂತರ,ಎಸ್,ಎ ಗಫಾರ್,ಕಾಶಪ್ಪ ಛಲವಾದಿ, ಶರಣು ಶೆಟ್ಟರ್, ಮಕಬುಲ್, ಮಂಗಳೇಶ ರಾಥೋಡ್,ಹನುಮಂತ ಕಟಗಿ,ಗಾಳೆಪ್ಪ ಮುಂಗೋಲಿ, ಮುದುಕಪ್ಪ ಮೇಸ್ತ್ರಿ, ಭೀಮಶೇನ್ ಕಲಿಕೇರಿ, ಕನಕಪ್ಪ ಇಂದ್ರಿಗಿ,ತಿಪ್ಪಯ್ಯ ಹಿರೇಮಠದನ ಕುರಿ ಸಖನೆದಾರರಾದ ಸಿದ್ದಪ್ಪ ಅರಸನ್ನಕೇರಿ, ಬಸವರಾಜ್ ಮುಂಡರಗಿ, ಅಯ್ಯಪ್ಪ, ಬರಮಣ್ಣ ಗುರಿಕಾರ, ಬಾಳಪ್ಪ, ಕೃಷ್ಣಪ್ಪ, ಮಹೇಶಪ್ಪ, ಹನುಮಂತಪ್ಪ ಚಿಂಚಲಿ, ಹನುಮಂತ ಕೆರೇಹಳ್ಳಿ,ಟಿ ರತ್ನಾಕರ್,ಶಿವಪ್ಪ ದೇವರಮನಿ, ಸೋಮಪ್ಪ ಇರಕಲ್ ಗಡ, ಅಮರೇಶ್ ಕರಡಿ,ಯಮನೂರಪ್ಪ,ರಾಜು ಬೋವಿ,ತಿಪ್ಪಯ್ಯ ಹಿರೇಮಠ,ಗಣೇಶ್ ಬಗನಾಳ,ಪಕೀರಪ್ಪ, ಬಸವರಾಜ್ ಹೂಗಾರ್,ಮಂಜುನಾಥ,ನಾಗರಾಜ,ಗವಿಸಿದ್ದಪ್ಪ ಪುಟಗಿ,ದ್ಯಾಮಣ್ಣ ಗುಡ್ಲಾನೂರ, ನಾಗರತ್ನ ಮುಂತಾದ ನೂರಾರು ಜನ ಭಾಗವಹಿಸಿದ್ದರು

ಹಕ್ಕೊತ್ತಾಯಗಳು :- BALDOTA MSPL, BSPL ವಿಸ್ತರಣೆಗೆ ಮುಂದಾಗಿ, ಕುರಿಗಾಹಿ-ದನಗಾಹಿ ದೇವಪ್ಪ ಹಾಲಳ್ಳಿ ಸಾ|| ಬಸಾಪುರ ಈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಂಪನಿಯ ಗೂಂಡಗಳಾದ ಮ್ಯಾನೇಜರು ಮತ್ತು ಸೆಕ್ಯೂರಿಟಿಗಳ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಇದರ ಮಾಲೀಕನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಮತ್ತು ಈತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಬಸಾಪೂರ ಸ.ನಂ. 143 ರ 44.35 ಎಕರೆ ಕೆರೆಯನ್ನು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬಳಸಲು ಮುಕ್ತಗೊಳಿಸಬೇಕು. ಬಸಾಪೂರ ಗ್ರಾಮದಿಂದ ಕೆರೆಗೆ ಇರುವ ಸಂಪರ್ಕ ರಸ್ತೆಯನ್ನು ಕಂಪನಿಯವರು ಕಾಂಪೌಂಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿ ಅಡ್ಡಗಟ್ಟಿದ ಕಾಂಪೌಂಡನ್ನು ತೆರವುಗೊಳಿಸಬೇಕು. ಕೆರೆ ಏರಿಗೆ ನೇರವಾಗಿ ಮುಖ್ಯ ದ್ವಾರ ನಿರ್ಮಿಸಿ ಗೇಟ್ ಅಳವಡಿಸಿದ್ದರಿಂದ ಭಾರಿ ವಾಹನ, ಟಿಪ್ಪರ್ ಓಡಾಟ ಮಾಡುತ್ತಿದ್ದು, ಕೆರೆಗೆ ಸುಗಮವಾಗಿ ಹೋಗಿ ಬರಲು ಆಗುತ್ತಿಲ್ಲ. ಆದ್ದರಿಂದ ಗೇಟ್ ತೆರವು ಮಾಡಬೇಕು] ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಸುಮಾರು 10-15 ಎಕರೆ ಕೆರೆ ಮುಚ್ಚಿ ರಸ್ತೆ ಮಾಡಿಕೊಂಡಿದ್ದು, ಅಕ್ರಮ ರಸ್ತೆಯನ್ನು ತೆರವು ಮಾಡಬೇಕು.] ಕಾರ್ಖಾನೆ ವಿಸ್ತರಣೆಗೆ ಶೀಘ್ರವಾಗಿ ಶಾಶ್ವತ ತಡೆ ಆದೇಶ ಮಾಡಿ, ಕೊಪ್ಪಳ ನಗರ ಭಾಗ್ಯನಗರದ..

