ಸಂವಿಧಾನ ಪೂರ್ವಪೀಠಿಕೆಯು, ಭಾರತೀಯರು ನಿತ್ಯ ಪಠಿಸುವ ಮಂತ್ರವಾಗಲಿ – ಪ್ರೊ. ಕರಿಗೂಳಿ…

ದಿನಾಂಕ 26-01-2026 ರಂದು ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು.ಮೊದಲಿಗೆ ದೇಶದ ಮಹಾನ್ ನಾಯಕರಿಗೆ ಪೂಜೆಯ ಮೂಲಕ ಗೌರವ ನಮನವನ್ನು ಸಲ್ಲಿಸಿಲಾಯಿತು, ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕರಿಗೂಳಿಯವರು ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತದ ಸಂವಿಧಾನ ರಚನೆಯಾಗಿ, ಅಂಗೀಕಾರವಾಗಿ,ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಭಾರತ ಗಣರಾಜ್ಯವಾಯಿತು, ಈ ಐತಿಹಾಸಿಕ ದಿನವನ್ನು ದೇಶದ್ಯಾoತ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. ಒಬ್ಬ ಸಾಮಾನ್ಯ ಭಾರತೀಯನ ಹಿತಾಸಕ್ತಿಯನ್ನು ಕಾಪಾಡುವ ಸಂಕಲ್ಪಕ್ಕೆ ಸಾಕ್ಷಿಯಾದ ಈ ಐತಿಹಾಸಿಕ ಸುದಿನವು ಭಾರತೀಯ ಚರಿತ್ರೆಯ ಯುಗಪರಿವರ್ತನೆಯ ದಿನವೇ ಸರಿ ಎಂದರು.

ತಮ್ಮ ಇಡೀ ಜೀವನದ ಜೀವಸತ್ವವನ್ನೇ ಧಾರೆಯೆರೆದು ಬಾಬಾಸಾಹೇಬ ಅಂಬೇಡ್ಕರರು ಈ ಶ್ರೇಷ್ಠ ಸಂವಿಧಾನವನ್ನು ಭವ್ಯ ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ,ನಮಗೆ ನಾವೇ ಅರ್ಪಿಸಿಕೊಂಡ ಈ ಸಂವಿಧಾನವನ್ನು ನಮ್ಮೆಲ್ಲರಿಗಾಗಿ ನಾವು ಬಳಸಿಕೊಂಡು ಸಮಸಮಾಜ ನಿರ್ಮಾಣಕ್ಕೆ ಮುಂದಾದಾಗ ಮಾತ್ರ ಸಂವಿಧಾನ ರಚಿಸಿದ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಶೋಷಕರಿಂದ ಶೋಷಿತರಿಗೆ, ಪ್ರಬಲರಿಂದ ದುರ್ಬಲರಿಗೆ, ರಾಜರಿಂದ ನಾಗರೀಕರಿಗೆ ಸ್ವಾತಂತ್ರ್ಯವನ್ನು, ಅಧಿಕಾರವನ್ನು, ಸಾರ್ವಭೌಮತೆಯನ್ನು ಹಸ್ತಾoತರಿಸುವ ಮಹಾನ್ ಗ್ರಂಥವೇ ಭಾರತದ ಸಂವಿಧಾನ, ಎಂದು ಸಂವಿಧಾನದ ಮೂಲ ಆಶಯಗಳನ್ನು ತಿಳಿಸಿದರು, ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ವೀರೇಶ್, ಶಂಕ್ರಪ್ಪ ಎಂ, ರವಿಕುಮಾರ, ಉಪನ್ಯಾಸಕರಾದ ಅಯ್ಯಪ್ಪ, ಸಾಯಿಕುಮಾರ, ಪ್ರವೀಣ್ ಕುಮಾರ್, ಪೆನಜಾ, ಮಲ್ಲಯ್ಯ ಕಚೇರಿ ಹಾಗೂ ಆಡಳಿತ ಸಿಬ್ಬಂದಿ ಜಬೀನಬೇಗಂ, ಶಾಂತಿ,ಪ್ರಸಾದ್ ಶರಣಬಸವ ಹಾಜರಿದ್ದರು.

