ಬ್ರೈಟ್ ವೇ ಶಾಲೆಯಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ…

ಬ್ರೈಟ್ ವೇ ಶಾಲೆಯಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ…

ಕಂಪ್ಲಿ : ಪಟ್ಟಣದ ಬ್ರೈಟ್ ವೇ ಪ್ರೌಢಶಾಲೆಯಲ್ಲಿ 77ನೇ ಅದ್ದೂರಿಯಾಗಿ ಗಣರಾಜ್ಯೋತ್ಸವ ದಿನಾಚರಣೆ ವನ್ನು ಆಚರಿಸಲಾಯಿತು. ವಿಶೇಷವಾಗಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ವೃತ್ತಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಸಂಸ್ಥೆಯ ಯು. ವಿನುತಾ ರವರು ಮಾತನಾಡಿ ಪ್ರತಿ ವರ್ಷ ಜನವರಿ 26 ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕರೂ, ನಮ್ಮದೇ ಆದ ಸಂವಿಧಾನ ಜಾರಿಗೆ ಬಂದಿದ್ದು 1950ರ ಜನವರಿ 26ರಂದು. ಅಂದಿನಿಂದ ಭಾರತವು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿತು.ನಮ್ಮ ಸಂವಿಧಾನವು ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಇದನ್ನು ರೂಪಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಇಂದು ಗೌರವದಿಂದ ಸ್ಮರಿಸಬೇಕು. ಸಂವಿಧಾನವು ನಮಗೆ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ವೃತ್ತಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು. 125 ಅಡಿ ಉದ್ದದ ಧ್ವಜವನ್ನು ಉದ್ಭವ ಗಣೇಶನ ಗುಡಿಯಿಂದ ಬ್ರೈಟ್ ವೇ ಶಾಲೆಯವರೆಗೆ ಪಥ ಸಂಚಲನ ನಡೆಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಯು. ಶಿವರಾಜ, ಡಾ. ಮಂಜುನಾಥ, ಡಾ. ಆಂದ್ರಲ್ ಅಶೋಕ, ಹರಳಳ್ಳಿ ವೀರೇಶ, ನಾಗರಾಜ್ ಎಸ್, ಎಸ್. ಅಜ್ಜಪ್ಪ, ವಿಶ್ವನಾಥ, ಶ್ರೀಧರ ಶೆಟ್ಟಿ, ಅನುಪಮಾ, ಸ್ಮಿತಾ, ಮುಖ್ಯ ಗುರುಗಳಾದ ಕೆ. ಚಂದ್ರಶೇಖರ, ಸಹ ಶಿಕ್ಷಕರಾದ ಮಹಮದ್ ಷರೀಫ್ ಖಲಂದರ, ಭವ್ಯ, ರಜಿನಿ, ಪ್ರಿಯಾಂಕ, ಭಾಗ್ಯ, ಭುವನೇಶ್ವರಿ, ಶ್ರೀಲತಾ, ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳಾದ ತನು ಸಪ್ಪರದ, ಶ್ರಾವಣಿ, ಸಂಜನಾ, ಮನೋಜ್, ಪ್ರೀತಮ್ ಅಂದ್ರಲ್, ಸಾನಿಕ ಅಚ್ಚಪ್ಪ ಮತ್ತು ಬಿಡಿಎ ವಿದ್ಯಾರ್ಥಿಗಳಾದ ಜ್ಯೋತಿ ಉಗಾದಿ ವೈಶಾಕ್ ಗೊಂದಿ ಧೀರಜ್ ಸೇರಿದಂತೆ ಇತರರು ಭಾಗವಹಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *