ವೈದ್ಯಕೀಯ ವೃತ್ತಿ ತುಂಬಾ ಮಹತ್ವದ್ದು. ಮೆಡಿಕಾನ್ ಸಮ್ಮೇಳನದಿಂದ ನಾಡಿನ ಜನತೆಗೆ ಉನ್ನತ ಅರೋಗ್ಯ ಲಭಿಸಲಿ….

ವೈದ್ಯಕೀಯ ವೃತ್ತಿ ತುಂಬಾ ಮಹತ್ವದ್ದು. ಮೆಡಿಕಾನ್ ಸಮ್ಮೇಳನದಿಂದ ನಾಡಿನ ಜನತೆಗೆ ಉನ್ನತ ಅರೋಗ್ಯ ಲಭಿಸಲಿ….

ಗಂಗಾವತಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಸಸಿಗೆ ನೀರೆರೆಯುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿತ್ತಾ “ವೈದ್ಯಕೀಯ ವೃತ್ತಿ ತುಂಬಾ ಮಹತ್ವದ್ದು. ಇಂತಹ ಮಹತ್ವದ ವೃತ್ತಿಯ ವೈದ್ಯರು ನಮ್ಮ ಗಂಗಾವತಿಯಲ್ಲಿ ಸಮಾವೇಶಗೊಂಡಿರುವುದು ಸಂತೋಷದಾಯಕ ಎಂದರು ಅಕ್ಟೋಬರ್ 24, 2025ರಂದು ಜಿಲ್ಲೆಯ ಗಂಗಾವತಿ ತಾಲೂಕಿನ ಅಮರ್ ಗಾರ್ಡನ್ನಲ್ಲಿ 91ನೇ ಕಿಷ್ಕಿಂಧ ಮೆಡಿಕಾನ್ 2025 ಐಎಂಎ ರಾಜ್ಯ ವೈದ್ಯಕೀಯ ಸಮ್ಮೇಳನದಲ್ಲಿ ಮುಂದುವರೆದು ಮಾತನಾಡುತ್ತ.ವೈದ್ಯರ ಸೇವೆ ನಮ್ಮ ನಾಡಿಗೆ ಅವಶ್ಯ. ಜಿಲ್ಲಾಡಳಿತವು ವೈದ್ಯರೊಂದಿಗೆ ಸಹಕರಿಸಲು ಸದಾ ಸಿದ್ಧವಿದೆ. ವೈದ್ಯರುಗಳು ತಮ್ಮ ಸೇವೆಯಿಂದ ಜನತೆಗೆ ಆರೋಗ್ಯ ಒದಗಿಸಿ, ನೆಮ್ಮದಿಯ ಬಾಳನ್ನು ನಡೆಸಲು ಸಹಕರಿಸಲಿ” ಇನ್ನೂ ಎರಡೂ ದಿನದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, “ನಾನು ಸಹ ವೈದ್ಯಕೀಯ ಶಿಕ್ಷಣದಿಂದ ಬಂದವನು. ವೈದ್ಯಕೀಯ ವೃತ್ತಿ ಮತ್ತು ಪೊಲೀಸ್ ವೃತ್ತಿ ಇವೆರಡೂ ಸೇವಾ ಮನೋಭಾವದವು ಮತ್ತು ಸುಲಭವಲ್ಲ.

ವೈದ್ಯಕೀಯ ವೃತ್ತಿ ಸಾರ್ಥಕವಾದುದು” ಎಂದು ಹೇಳಿ, ರಾಜ್ಯದಿಂದ ಬಂದ ಎಲ್ಲ ವೈದ್ಯರಿಗೂ ಮೂರುದಿನಗಳ ಮಾಹಿತಿ ಪೂರ್ಣವಾಗಿ ಯಶಸ್ವಿಯಾಗಲಿ ಎಂದರುಈ ಸಮ್ಮೇಳನದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ವಿ. ಸೂರಿ ರಾಜು, ಖಜಾಂಚಿ ಶಂಕರನಾರಾಯಣ, ಐಎಂಎ ರಾಜ್ಯಾಧ್ಯಕ್ಷ ಡಾ. ವಿ.ವಿ. ಚಿನಿವಾಲರ (ಗಂಗಾವತಿ), ಮುಂದಿನ ಅವಧಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಾ. ವೀರಭದ್ರಯ್ಯ ಟಿ.ಎ. (ತುಮಕೂರು), 91ನೇ ಮೆಡಿಕಾನ್ ರಾಜ್ಯ ಸಮ್ಮೇಳನದ ಅಧ್ಯಕ್ಷ ಹೆಚ್. ಮಲ್ಲನಗೌಡ, ಕಾರ್ಯದರ್ಶಿ ಅಮರೇಶ ಪಾಟೀಲ್, ಖಜಾಂಚಿ ಬಸವರಾಜ ಸಿಂಗನಾಳ, ಗಂಗಾವತಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎ.ಎಸ್.ಎನ್. ರಾಜು, ಕಾರ್ಯದರ್ಶಿ ಹೆಚ್. ನಾಗರಾಜ್, ಖಜಾಂಚಿ ಅವಿನಾಶ ಪದ್ಮಶಾಲಿ ಮತ್ತು ವೈಜ್ಞಾನಿಕ ಸಮಿತಿಯ ಉಪಾಧ್ಯಕ್ಷ ಎಸ್.ಜಿ. ಮಟ್ಟಿ ಸೇರಿದಂತೆ ಅನೇಕ ವೈದ್ಯರು ಭಾಗವಹಿಸಿದ್ದರು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ವೈದ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಸಮ್ಮೇಳನ ಅಕ್ಟೋಬರ್ 25 ಮತ್ತು 26ರಂದು ಸಹ ನಡೆಯಲಿದ್ದು, ವೈದ್ಯರುಗಳು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಲು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *