ಉಚ್ಛಾಟಿತ ಜಯಮೃತ್ಯುಂಜಯ ಶ್ರೀಗಳು ನಮ್ಮ ಸಂಘದ ಅಡಿಯಲ್ಲಿಲ್ಲಾ’ಜಾತಿ ಗಣತಿಯಲ್ಲಿ ಹಿಂದು ಲಿಂಗಾಯತ ಪಂಚಮಸಾಲಿ ಎಂದು ಬರೆಸಿ: ರಾಜ್ಯಾಧ್ಯಕ್ಷ ಪಾಟೀಲ್..

ಉಚ್ಛಾಟಿತ ಜಯಮೃತ್ಯುಂಜಯ ಶ್ರೀಗಳು ನಮ್ಮ ಸಂಘದ ಅಡಿಯಲ್ಲಿಲ್ಲಾ’ಜಾತಿ ಗಣತಿಯಲ್ಲಿ ಹಿಂದು ಲಿಂಗಾಯತ ಪಂಚಮಸಾಲಿ ಎಂದು ಬರೆಸಿ: ರಾಜ್ಯಾಧ್ಯಕ್ಷ ಪಾಟೀಲ್..

ಗಂಗಾವತಿ: ರಾಜ್ಯದಲ್ಲಿ ೮೦ ಲಕ್ಷದಷ್ಟಿರುವ ಪಂಚಮಸಾಲಿ ಸಮಾಜವು ವಿವಿಧ ಸೌಲಭ್ಯ ಪಡೆಯಲು ಜನಸಂಖ್ಯೆ ನಿಖರ ಮಾಹಿತಿ ರಾಜ್ಯ ಸರಕಾರಕ್ಕೆ ನೀಡಬೇಕಾದ ಅಗತ್ಯವಿದ್ದು, ಜಾತಿ ಜನಗಣತಿಯಲ್ಲಿ ಹಿಂದು ಲಿಂಗಾಯತ ಪಂಚಮಸಾಲಿ ಎಂದು ನಮೋದಿಸುವಂತೆ ಪಂಚಮಸಾಲಿ ಸಮಾಜದ ರಾಜ್ಯಧ್ಯಕ್ಷ ಸೋಮನಗೌಡ ಎಂ.ಪಾಟೀಲ್ ಹೇಳಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಕ್ರಮ ಸಂಖ್ಯೆ ೦೮೬೮ ಮಾರ್ಕೌಟ್ ಮಾಡಬೇಕಿದ್ದು, ರಾಜ್ಯದ ಸುಮಾರು ೮೦ ಸ್ವಾಮಿಜಿಗಳು ಒಮ್ಮತದಿಂದ ಹಿಂದು ಲಿಂತಾಯತ ಪಂಚಮಸಾಲಿ ಎಂದು ನಮೋದಿಸಲು ನಿರ್ಧಾರ ಕೈಗೊಂಡಿದ್ದು, ಬೇರೆಯವರ ಮಾತಿಗೆ ಕಿವಿಗೊಡಬೇಡಿ, ಅಧಿಕೃತ ಘೋಷಣೆಯಾಗದ ಧರ್ಮಗಳನ್ನು ಉಲ್ಲೇಖಿಸುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಳ್ಳದೆ ಭವಿಷ್ಯದ ದೃಷ್ಟಿಯಿಂದ ಧರ್ಮದ ಕಾಲಂನಲ್ಲಿ ಹಿಂದು ಎಂದು ಬರೆಸಬೇಕೆಂದರು.ಬಬಲಾದಿ ಹಾಗು ಹರಿಹರ ಎರಡೇ ಪೀಠಗಳು ಪಂಚಮಸಾಲಿಗಳ ಅಧಿಕೃತ ಪೀಠಗಳಾಗಿದ್ದು ಬಬಲೇಶ್ವರ ಹಾಗು ಹರಿಹರ ಪೀಠ, ಕೂಡಲ ಸಂಗಮ ಪೀಠ ನಮ್ಮ ಅಡಿಯಲ್ಲಿ ಬರದೆ ಇರುವ ಕಾರಣ ಸ್ವಾಮಿಜಿಗಳ ಕುರಿತು ಚರ್ಚೆ ಮಾಡುವುದಿಲ್ಲ, ಶಾಸಕ ಕಾಶೆಪ್ಪನರ್ ಅವರ ಟ್ರಸ್ಟ್ ಗೆ ಸಂಬಧಿಸಿದ್ದಾಗಿದ್ದು, ಪ್ರಕ್ರಿಯಿಸುವುದಿಲ್ಲ. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಒಂದೊAದು ಪೀಠ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ, ಪೀಠಕ್ಕೆ ಗುರುವಾಗಲು ಇಚ್ಛಿಸುವವರು ಮೊದಲು ರಾಜ್ಯ ಸಮಿತಿಗೆ ಅರ್ಜಿ ಹಾಕುವ ಮೂಲಕ ಇಂಟರ್ ವ್ಯೂ ಎದರಿಸಿ ರಾಜ್ಯ ಘಟಕದ ಒಪ್ಪಿದ ನಂತರ ಅದರ ನಿಯಮಾವಳಿಗಳಿಗೆ ಅನುಗುಣವಾಗಿ ಪೀಠ ನಡೆಸತಕ್ಕದ್ದು, ಸ್ವಂತAತ್ರö್ಯವಾಗಿ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ, ಸುಮಾರು ೩೨ ವರ್ಷದಿಂದಲೂ ರಾಜ್ಯ ಘಟಕ ಸಕ್ರೀಯವಾಗಿದೆ ತನ್ನ ಧ್ಯೇಯೋದ್ದೇಶಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಘದ ತತ್ವ ಸಿದ್ಧಾಂತಗಳಿಗೆ ಬದ್ದವಾಗಿ ನಡೆದುಕೊಳ್ಳುವವರಿಗೆ ಅವಕಾಶ ನೀಡುತ್ತೇವೆ ಎಂದರು. ಅ.೨೬ ಕ್ಕೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಪ್ರತಿಭಾ ಪುರಸ್ಕಾರ: ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕು ಅಧ್ಯಕ್ಷ ಶಿವಪ್ಪ ಯಲಬುರ್ಗಿ ಮಾತನಾಡಿ, ಅಕ್ಟೊಬರ್ ೨೬ ರಂದು ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯೋತ್ಸವ ಆಚರಿಸಲಾಗುತ್ತಿದ್ದು, ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ೨೦೨೩-೨೪, ೨೦೨೪-೨೫ ನೇ ಸಾಲಿನ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಎಸ್‌ಎಸ್‌ಎಸ್‌ಎಲ್ ಸಿಯಲ್ಲಿ ಶೇ.೮೫, ಪಿಯುಸಿಯಲ್ಲಿ ಶೇ.೯೦ ಅಂಕ ಪಡೆದಿರಬೇಕು ಅರ್ಹರು ಹೆಚ್ಚಿನ ಮಾಹಿತಿಗಾಗಿ ೯೮೮೦೮೭೯೨೬೮, ೯೬೨೦೪೪೩೫೪೩ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದರು.ಗೋಷ್ಟಿಯಲ್ಲಿ ಪದಾಧಿಕಾರಿಗಳಾದ ದೇವರಾಜ್ ಹಾಲಸಮುದ್ರ, ಸುಭಾ಼ಶ್ಚಂದ್ರ ತಿಪ್ಪಶೆಟ್ಟಿ, ನಾಗರಾಜ್ ಬರಗೂರು, ಚೆನ್ನವೀರನಗೌಡ, ಸುರೇಶ್ ಗೌರಪ್ಪ, ಸೋಮನಗೌಡ ಮಿಲ್ಟಿç, ಬಸವರಾಜ್ ಪಾಟೀಲ್, ವೀರೇಶಪ್ಪ ಹಣವಾಳ, ಮಹೇಶ್ ಉಜ್ಜೆಯನಿ ಇತರರಿದ್ದರು.

Leave a Reply

Your email address will not be published. Required fields are marked *