ಕುದರಿಮೋತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ರಚನೆ.

ಕುದರಿಮೋತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ರಚನೆ.

ಕುಕನೂರು.23 ಸಮೀಪದ ಕುದರಿಮೋತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಂದು ನೂತನವಾಗಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ರಚನೆಮಾಡಲಾಯಿತು.ಎಸ್ ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಉಮೇಶ ದಾಸರ್ , ಉಪಾಧ್ಯಕ್ಷರಾಗಿ ಅನ್ನಪೂರ್ಣ ಈರಪ್ಪ ಬಡಿಗೇರ್ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಂತರದಲ್ಲಿ ಉಮೇಶ್ ದಾಸರ್ ಮಾತನಾಡಿ ಎಸ್ ಡಿಎಂಸಿ ಹುದ್ದೆ ಇದು ಗುರುತರ ಜವಾಬ್ದಾರಿಯ ಕೆಲಸವಾಗಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಶಾಲೆಗೆ ಅವಶ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ಕೃ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಹನುಮಗೌಡ ದಳಪತಿ, ಸುಭಾಷ್ ಈಳಿಗೇರ, ದುರ್ಗಪ್ಪ ಕಾಳಿ, ವಿಜಯ ದಾಸರ್, ಮರಿಯಪ್ಪ ಕೆಂಗಾರ ,ಹನುಮಂತ ಚಿತ್ರಗಾರ ,ದ್ಯಾಮಣ್ಣ ಉಚ್ಚಲುಕುಂಟಿ ,ಈಶಪ್ಪ ವಣ್ಗೇರಿ, ದೇವಪ್ಪ ಕಾಳಿ, ಮಂಜುನಾಥ್ ಹಿರೇಮಠ್, ದ್ಯಾಮಣ್ಣ ಈಳಿಗೇರ್, ಪಂಪಾಪತಿ ವಣಗೇರಿ, ಈರಪ್ಪ ಕಾಳಿ, ಅರ್ಚನಪ್ಪ ನಡಲ್ಲಾರ್, ಶಿವಮೂರ್ತಿ ಕಾಳಿ, ಕನಕಪ್ಪ ದಾಸರ ಮಂಜು ಕನ್ಯಾಳ, ಮುತ್ತು ದುರ್ಗೇಶ್,ಶ್ರೀಕಾಂತ್ ಸಜ್ಜನ್, ಗ್ರಾಮದ ಗುರು ಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *