ಆರ್.ವಿ.ಎಸ್.ಆರ್. ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಚಾಂಪಿಯನ್ಸ್…

ಕಾರಟಗಿ ನವನಗರ್ : ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್ ಬಾಲಕಿಯರ ಪ್ರೌಢಶಾಲೆ ಬೆಂಗಳೂರಿನಲ್ಲಿ 20 ಮತ್ತು 21 ಎರಡು ದಿನಗಳು ಅಂಡರ್ -14 ಥ್ರೋ ಬಾಲ್ ಪಂದ್ಯಾವಳಿಗಳು ಜರುಗಿದವು.ಈ ಸ್ಪರ್ಧೆಯಲ್ಲಿ ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ,ತಂಡವು ಗಮನಾರ್ಹ ಪ್ರತಿಭೆಯನ್ನು ಪ್ರದರ್ಶಿಸಿತು ಮತ್ತು ಪ್ರಾದೇಶಿಕ ಮಟ್ಟದ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ಸ್ ತಲುಪಿತು.

ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು 8ನೇ ತರಗತಿ ವಿದ್ಯಾರ್ಥಿನಿ ಉಷಾ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಕೊಲ್ಲಾ ಶೇಷಗಿರಿ ರಾವ್, ಕಾರ್ಯದರ್ಶಿ ಎಲ್ ವೀರಭದ್ರರಾವ್, ಆಡಳಿತ ಮಂಡಳಿ ಶ್ರೀಮನ್ನಾರಾಯಣ, ಪ್ರಾಂಶುಪಾಲರು ಡಾ.ಮಹಮ್ಮದ್ ರಫೀಕ್, ಶ್ರೀದೇವಿ ಕೊಲ್ಲಾ ಮತ್ತು ದೈಹಿಕ ಶಿಕ್ಷಕರು ಗೋಪಿಕೃಷ್ಣ, ತಿಪ್ಪಣ್ಣ, ವೆಂಕಟೇಶ್, ಇಂದ್ರಜಾ, ಹಾಗೂ ಶಿಕ್ಷಕ ವೃಂದ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.

