ಪ್ರೊಫೆಸರ. ಬಿ ಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ… ಹಂಪೀಶ್ ಹರಿಗೋಳ್…

ಪ್ರೊಫೆಸರ. ಬಿ ಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ… ಹಂಪೀಶ್ ಹರಿಗೋಳ್…

ಗಂಗಾವತಿ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಬಣ ರಾಜ್ಯ ಸಮಿತಿ ಬೆಂಗಳೂರು ನೇತೃತ್ವದಲ್ಲಿ ದಿನಾಂಕ 8. ಎಂಟು 2025 ರಂದು ಶುಕ್ರವಾರ ಸ್ವಾಭಿಮಾನಿ ಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾರ್ಯಕರ್ತರ ರಾಜ್ಯಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶವನ್ನು ಬಳ್ಳಾರಿಯ ಬೂಡಾ ಕಾಂಪ್ಲೆಕ್ಸ್ ಹತ್ತಿರ ಇರುವ ಕೆಇಬಿ ಫಂಕ್ಷನ್ ಹಾಲಿನಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶ ಜರುಗಲಿದೆ ಎಂದು ವಿಭಾಗಿಯ ಸಂಚಾಲಕ ಹಂಪೀಶ್ ಹರಿಗೊಳ್ ಶ್ರೀಮತಿ ಪಾರ್ವತಮ್ಮ ಹನುಮಂತಪ್ಪ ವಡ್ಡರಹಟ್ಟಿ. ಹೆರೂರ್ ಯಮನೂರುಪ್ಪ. ರಾಘವೇಂದ್ರ ಭಂಡಾರಿ ಈರಪ್ಪ ಹನುಮೇಶ ಸೇರಿದಂತೆ ಇತರರು ಹೇಳಿದರು. ಅವರು ಪತ್ರಿಕಾ ಭವನದಲ್ಲಿ ಸಮಾವೇಶತ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶೇಖರ್ ಶತಮಾನಗಳಿಂದ ಶೋಷಣೆಗೆ ತುಳಿತಕ್ಕೆ ಒಳಗಾದ ದಲಿತರ ಒಳ ಮೀಸಲಾತಿ. ಶಿಕ್ಷಣ ಉದ್ಯೋಗ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ ಹತ್ತು ಹಲವಾರು ವಿಷಯಗಳ ಕುರಿತು ಚೈತನ್ಯ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸದರಿ ಸಮಾವೇಶಕ್ಕೆ ರಾಜ್ಯ ಸಂಚಾಲಕ ಎನ್ ಸೋಮಶೇಖರ ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ. ಸಂಘಟನಾ ಸಂಚಾಲಕರಾದ ಎಂ ದೇವದಾಸ್ ರೀ ನಾರಾಯಣಸ್ವಾಮಿ ಅಂದಾನಿ ಸೋಮನಹಳ್ಳಿ ಎಚ್ಎನ್ ಸನಂದಕುಮಾರ್. ಕೆಎಸ್ ನಾಯಕ್ ಜೊತೆಗೆ ರಾಜ್ಯ ಸಮಿತಿಯ ಸದಸ್ಯರುಗಳು ವಿಭಾಗಿಯ ಸಂಚಾಲಕರು ಜಿಲ್ಲಾ ಸಂಸಾಲಕರು ದಲಿತ ಮಹಿಳಾ ಜಿಲ್ಲಾ ಸಂಪಾಲಕರು ನೇತೃತ್ವ ವಹಿಸಿದ ಬಳ್ಳಾರಿ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕಾ ಪದಾಧಿಕಾರಿಗಳು ಭಾಗವಹಿಸಲಿದ್ದು ರಾಜ್ಯಾಧ್ಯಕ್ಷ ಸುಮಾರು ಹತ್ತು ಸಾವಿರಕ್ಕೂ ಅಧಿಕ ದಲಿತ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಒಟ್ಟಾರೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ತರವಾಯ ಎರಡನೆಯ ಅಂಬೇಡ್ಕರ್ ಸ್ವಾಭಿಮಾನಿ ಪ್ರೊಫೆಸರ್ ಬಿಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ಔಚಿತ್ಯಪೂರ್ಣವಾಗಿ ಆಚರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದೆಂದು ಹೇಳಿದರು.

Leave a Reply

Your email address will not be published. Required fields are marked *