ಬಿಜೆಪಿಯಲ್ಲಿ ಹುದ್ದೆ ಪಡೆಯಲು ನನ್ನನ್ನು ನಾನು ಅರ್ಪಿಸಿಕೊಂಡಿ ದ್ದೇನೆ: ಮಹಾಂತೇಶ ಶಾಸ್ತ್ರಿಮಠ .

ಗಂಗಾವತಿ: ಬಿಜೆಪಿ ನಗರ ಘಟಕ ಮತ್ತು ಗ್ರಾಮೀಣ ಘಟಕ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದ್ದು ಕ್ಷೇತ್ರದ ಶಾಸಕರಾದ ಜಿ ಜನಾರ್ದನ ರೆಡ್ಡಿ ಇವರ ಆದೇಶದ ಮೇರೆಗೆ ಹೊಸ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದಿರುವ ಮಹಾಂತೇಶ್ ಸ್ವಾಮಿ ಶಾಸ್ತ್ರಿಮಠ ಇವರನ್ನು ಬಿಜೆಪಿ ರೈತ ಮೋರ್ಚ ನಗರ ಮಂಡಲ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ, ಈಗಾಗಲೇ ಪಕ್ಷದಲ್ಲಿ ಮೊದಲು ಯುವ ಮೋರ್ಚಾ ಅಧ್ಯಕ್ಷರಾಗಿ ಮತ್ತು ಎರಡು ಬಾರಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದನ್ನು ಗುರುತಿಸಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ನಿರ್ದೇಶನದ ಮೇರೆಗೆ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಚಂದ್ರಶೇಖರ್ ಹೀರೂರು ನನ್ನ ಮೇಲೆ ಭರವಸೆಯನ್ನು ಇಟ್ಟು ನನ್ನನ್ನು ಪಕ್ಷದ ರೈತ ಮೋರ್ಚ ನಗರ ಘಟಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಕ್ಷೇತ್ರದ ಶಾಸಕರು ಮತ್ತು ಪಕ್ಷದ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ ಹುದ್ದೆಯನ್ನು ನೀಡಿದ್ದಾರೆ ಆ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದು ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲುವಂತೆ ಕಾರ್ಯಕರ್ತರನ್ನು ಸಕ್ರಿಯವಾಗಿ ಬಲಗೊಳಿಸುತ್ತೇನೆ ಎಂದು ಈ ಮೂಲಕ ಹೇಳಲು ಇಚ್ಛಿಸುತ್ತೇನೆ ಜೊತೆಗೆ ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕ ಅಧ್ಯಕ್ಷರು ಬಿಜೆಪಿ ಕಾರ್ಯಕರ್ತರಿಗೆ ಒಳ್ಳೆಯ ಸ್ಥಾನಮಾನಗಳನ್ನು ನೀಡಿದ್ದಾರೆ ಮುಂದಿನ ದಿನಮಾನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಪ್ರಾಮಾಣಿಕವಾಗಿ ಅಗಲಿರಲು ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ದುಡಿತೇನೆಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಂತೇಶ್ ಸ್ವಾಮಿ ಶಾಸ್ತ್ರಿ ಮಠ ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದ್ದಾರೆ.

