ಕರ್ನಾಟಕ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ : ಮುದ್ದಾಬಳ್ಳಿ ಜಿಲ್ಲಾಧ್ಯಕ್ಷ ನದಾಫ್/ಪಿಂಜಾರ ಸಮಾಜದವರಿಗೆ ಸೂಚನೆ..

ಗಂಗಾವತಿ:- ಕರ್ನಾಟಕ ಸರ್ಕಾರ ಇದೇ ತಿಂಗಳು 22ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ನದಾಫ್/ಪಿಂಜಾರ ಸಮಾಜದ ಬಾಂಧವರು ನಿಖರ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾಧ್ಯಕ್ಷ ಖಾಸಿಂ ಅಲಿ ಮುದ್ದಾಬಳ್ಳಿ ಮನವಿ ಮಾಡಿದ್ದಾರೆ.ಮಾಧ್ಯಮದೊಂದಿಗೆ ಮಾತನಾಡಿದ ಅವರು –8ನೇ ಕಾಲಮ್: ಧರ್ಮ – ಇಸ್ಲಾಂ (ಕೋಡ್ ನಂ. 2), 9ನೇ ಕಾಲಮ್: ಜಾತಿ – ನದಾಫ್ (ಕೋಡ್ A1022) ಅಥವಾ ಪಿಂಜಾರ್ (ಕೋಡ್ A1174), 10 ಮತ್ತು 11ನೇ ಕಾಲಮ್: ಖಾಲಿ ಬಿಟ್ಟು, 12ನೇ ಕಾಲಮ್: ಜಾತಿ ಪ್ರಮಾಣ ಪತ್ರ – ಹೌದು/ಇಲ್ಲ, 28ನೇ ಕಾಲಮ್: ಉದ್ಯೋಗ – ಸಂಬಂಧಿಸಿದ ಉದ್ಯೋಗದ ಹೆಸರು ಬರೆಯಬೇಕು, 30ನೇ ಕಾಲಮ್: ಕುಟುಂಬದ ಕುಲಕಸುಬು, 31ನೇ ಕಾಲಮ್: ಕುಲಕಸುಬು ಮುಂದುವರಿದಿದೆಯೇ? – ಹೌದು/ಇಲ್ಲ, ಇವುಗಳನ್ನು ಸರಿಯಾಗಿ ನಮೂದಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಟಿಪ್ಪುಸುಲ್ತಾನ್,ಪ್ರ ಕಾರ್ಯದರ್ಶಿ ಬಾಬುಸಾಬ್, ಮುಖಂಡಗಳಾದ ಹುಸೇನ್ ಪೀರಾ (ಜವಳಗೇರಾ), ಮಾಬುಸಾಬ್ (ಬಸಾಪಟ್ಟಣ), ಮಹಮ್ಮದ್ ಸಾಬ್ (ಕಾಯಿಪಲ್ಯ) ಹಾಗೂ ಇತರರು ಹಾಜರಿದ್ದರು.

