ಕಾಂಗ್ರೆಸ್ ಎಸ್ ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ ಕೆರೆಹಳ್ಳಿ ನೇಮಕ.

ಕೊಪ್ಪಳ : ಪರಶುರಾಮ ಕೆರೆಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದಲೂ ನಿರಂತರವಾಗಿ ಪಕ್ಷದ ಸಂಘಟನೆ ಬಲವರ್ಧನೆಗಾಗಿ ಶ್ರಮಿಸಿದ್ದು, ಒಬ್ಬ ನಿಷ್ಠಾವಂತ ಪ್ರಾಮಾಣಿಕ, ಕಾಂಗ್ರೆಸ್ ಕಾರ್ಯಕರ್ತನಾಗಿ, ಸಕ್ರಿಯವಾಗಿ ಪಕ್ಷದಲ್ಲಿ ತೊಡಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ಭಾಗವಹಿಸಿ ಪಕ್ಷ ಕಟ್ಟಲು ಶ್ರಮಿಸಿದ್ದು, ಕೊಪ್ಪಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ವ ಜನಾಂಗದ ವಿಶ್ವಾಸದೊಂದಿಗೆ, ಪ್ರತಿ ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಶ್ರಮಿಸಿದ್ದರಿಂದ ಇಂದು ಇವರಿಗೆ ಒಂದು ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಹೆಚ್. ಪೂಜಾರ್ ಹೇಳಿದರು.ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎಸ್ಸಿ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ ಕೆರೆಹಳ್ಳಿ ಅವರನ್ನು ಎಲ್ಲಾ ವರಿಷ್ಠರ ಮೇರೆಗೆ ನೇಮಕ ಮಾಡಿ ಮಾತನಾಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಹಾಗೂ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್ ಅವರ ಆದೇಶದ ಮೇರೆಗೆ ಹಾಗೂ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಹೆಚ್. ಪೂಜಾರ್ ಅವರ ಆದೇಶದ ಮೇರೆಗೆ, ಮತ್ತು ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರ ಸಹಕಾರದೊಂದಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ವರಿಷ್ಠರ ಸೂಚನೆ ಮೇರೆಗೆ ಪರಶುರಾಮ ಕೆರೆಹಳ್ಳಿಯವರನ್ನು ಎಸ್ಸಿ ಘಟಕದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗೌರವಾನ್ವಿತ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ, ರಾಜ್ಯ ಕಮಿಟಿ ಪದಾಧಿಕಾರಿಗಳ, ಜಿಲ್ಲಾ ಪದಾಧಿಕಾರಿಗಳ ಹಾಗೂ ಕೊಪ್ಪಳ ಜಿಲ್ಲೆಯ ಎಸ್ಸಿ ಘಟಕದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ, ನಗರ ಪದಾಧಿಕಾರಿಗಳ ಸಮ್ಮುಖದಲ್ಲಿ ಕುಕುನೂರು, ಯಲಬುರ್ಗಾ, ಹನುಮಸಾಗರ, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ ಕೊಪ್ಪಳ, ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರ ಸಭೆಯಲ್ಲಿ ಪರಶುರಾಮ ಕೆರೆಹಳ್ಳಿ ಅವರಿಗೆ ಆದೇಶ ಪ್ರತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಎಸ್ ಸಿ ಘಟಕದ ರಾಜ್ಯ ಉಪಾಧ್ಯಕ್ಷ ಕನ್ನಿರಾಮ್ ರಾಥೋಡ್ ಗುಲ್ಬರ್ಗಾ, ಕೆಪಿಸಿಸಿ ರಾಜ್ಯ ಸಂಚಾಲಕ ನಾಗರಾಜ ನಾಯಕ ಚೆನ್ನಗಿರಿ , ಕೆಪಿಸಿಸಿ ಸಂಚಾಲಕ ಕಾಳಯ್ಯ ಮೈಸೂರ, ಎಸ್ ಸಿ ರಾಜ್ಯ ಕಮಿಟಿ ಸದಸ್ಯರುಗಳಾದ ಶುಕ್ರರಾಜ್ ತಾಳಕೇರಿ, ದೇವೇಂದ್ರಪ್ಪ ಪೂಜಾರ್ ದದೆಗಲ್, ಶರಣಮ್ಮ ಯಲಬುರ್ಗಾ, ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಮ್ಯಾಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಸಿಂದೋಗಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಮೂಲಿಮನಿ, ಬಸವರಾಜ ಬೇವಿನಕಟ್ಟಿ, ರಮೇಶ ಚಲವಾದಿ ಯಲಬುರ್ಗಾ, ಕುಷ್ಟಗಿ, ಎಲ್ಲಾ ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ, ಈಶಪ್ಪ ಕೂಕುನೂರು, ಚಂದ್ರು ಕುಷ್ಟಗಿ, ಶಿವಾನಂದ ಬಣಕಾರ ಯಲಬುರ್ಗಾ, ಶಾಂತಪ್ಪ ಬಸರಿಗಿಡ ಕನಕಗಿರಿ, ಶಿವಕುಮಾರ್ ಇಳಿಗಿನೂರು ಕಾರಟಗಿ, ಯಮನೂರಪ್ಪ ದನಕನದೊಡ್ಡಿ ಗಂಗಾವತಿ, ಎಲ್ಲಾ ಎಸ್ ಸಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಲಲಿತ ಕುಮಾರ ಮ್ಯಾಗೇರಿ ಛಲವಾದಿ, ಕಳಕೇಶ ಸೂಡಿ ಯಲಬುರ್ಗಾ, ಪಾಮಣ್ಣ ಕನಕಗಿರಿ, ಮಲ್ಲೇಶ್ ದೇವರಮನಿ ಗಂಗಾವತಿ. ಹಾಗೂ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
