ದರ್ಪ ದುರಾಹಂಕಾರಿ ತಂಗಡಗಿಯವರನ್ನು ಸಚಿವ ಸ್ಥಾನದಿಂದ ಕೈಬಿಡಿಅಪ್ಪಣ್ಣ ಸಮಾಜಕ್ಕೆ ತಂಗಡಗಿ ಕ್ಷೆಮೆ ಕೇಳಲಿ: ಹನುಮಂತಪ್ಪ ಅಕ್ರೋಶ ….

ಗಂಗಾವತಿ: ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ಕಟ್ಟಡಕ್ಕೆ ಅನುದಾನ ಕೇಳಲು ನಗರಸಭೆಯಲ್ಲಿ ನಡೆಯುತ್ತಿದ್ದ ಹನುಮಮಾಲಾ ಸಭೆಗೆ ತೆರಳಿದ್ದ ಸಮಾಜದ ಪ್ರಮುಖರನ್ನು ಏಕ ವಚನದಲ್ಲಿ ನಿಂದಿಸಿ ಉದ್ದಟತನ ಮೆರೆದಿರುವ ಸಚಿವ ಶಿವರಾಜ್ ತಂಗಡಗಿಯವರು ಕೂಡಲೆ ಕ್ಷೆಮೆ ಕೇಳಬೇಕು ಇಲ್ಲದಿದ್ದಲ್ಲಿ ಬರುವ ಚುನಾವಣೆಯಲ್ಲಿ ಸಮಾಜದ ಜನತೆ ತಕ್ಕ ಪಾಠ ಕಲಿಸಲಿದೆ ಎಂದು ಹಡಪದ ಅಪ್ಪಣ್ಣ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಸರಿಗಮ ಹನುಮಂತಪ್ಪ ಅಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು ಅವರು, ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಸಮಾಜಕ್ಕೆ ಸಮುದಾಯ ಭವನ ಹಾಗು ಹಾಸ್ಟೇಲ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಾಜಿ ಸಚಿವ ಅನ್ಸಾರಿ ಹಾಗು ಮಾಜಿ ಶಾಸಕ ಪರಣ್ಣ ನೆರವಿನಿಂದಾಗಿ ಉಳ್ಳಿ ಡಗ್ಗಿಯಲ್ಲಿ ಸಿಎ ಸೈಟ್ ಖರೀದಿಸಿದ್ದು, ಹಿಂದು ವರ್ಗಗಳ ನಿಗಮಕ್ಕೆ ಅನುದಾನಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು ಆದರೆ ದಾಖಲಾತಿ ಸರಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಸೂಕ್ತ ದಾಖಲಾತಿಗಳು ಸೇರಿದಂತೆ ಕಟ್ಟಡ ಪರವಾನೆಗೆ ಒಂದು ಲಕ್ಷರು ಹಣ ಕಟ್ಟಿ ನಗರಸಭೆಯಿಂದ ಪಡೆದು ಬೆಂಗಳೂರಿಗೆ ಕಳುಹಿಸಲಾಯಿತು. ಕಟ್ಟಡ ಪರವಾನೆಗೆಯ ಅವಧಿ ಕೇವಲ ಒಂದೇ ವರ್ಷ ಇದ್ದು ಒಂದು ವರ್ಷದಿಂದಲೂ ಸಚಿವ ಶಿವರಾಜ್ ತಂಗಡಗಿಯವರ ಮನೆ ಬಾಗಿಲಿಗೆ ಮತ್ತು ಬೆಂಗಳೂರಿಗೆ ಎಡತಾಕಿದರೂ ಬೇಡಿಕೆ ಈಡೇರಿಸದ ಕಾರಣ ಪರವಾನೆಗೆ ಲ್ಯಾಪ್ಸ್ ಆಯ್ತು ಬಳಿಕ ಮತ್ತೆ ಒಂದು ವರ್ಷಕ್ಕೆ ಹಣ ಕಟ್ಟಿ ಪರವಾನೆಗೆ ಪಡೆಯಲಾಗಿದ್ದು, ಸಿಎಂ ಅವರು ಸೂಚನೆ ನೀಡಿದ್ದು ಅದಕ್ಕಾದರೂ ಹತ್ತು ಲಕ್ಷ ರು ಗಳನ್ನಾಗದರೂ ನೀಡಿ ಎಂದು ಹಲವು ಬಾರಿ ಕೇಳಿದರೂ ತುಚ್ಛವಾಗಿ ಕಾಣುತ್ತಾ ಅಹಾಂಕಾರದ ಮಾತುಗಳನ್ನಾಡುತ್ತಿದ್ದಾರೆ ಕೂಡಲೆ ಸಚಿವರು ಕ್ಷೆ ಕೇಳಬೇಕು ಮತ್ತು ಹಡಪದ ಸಮಾಜಕ್ಕೆ ಹಣ ಮುಂಜೂರು ಮಾಡಬೇಕು ಎಂದು ಅವರು ಅಗ್ರಹಿಸಿದರು.ತಾಲೂಕು ಅಧ್ಯಕ್ಷ ನಿರುಪಾದಿ ಕೆಸರಟ್ಟಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಇಂಥ ದೌಲತ್ತಿನ ಸಚಿವ ಶಿವರಾಜ್ ತಂಗಡಗಿಯವರನ್ನು ಕೂಡಲೆ ಕೈ ಬಿಡಬೇಕು, ಹಲವು ಸಮಾಜಗಳನ್ನೊಳಗೊಂಡ ಹಿಂದುಳಿದ ವರ್ಗಗಳ ನಿಗಮಕ್ಕೆ ಸಮಾಜ ಮುಖಿ ಸಚಿವರನ್ನು ನೇಮಿಸಬೇಕು, ಬರುವ ದಿನಗಳಲ್ಲಿ ಸಚಿವರಿಗೆ ಕರ್ಮ ಕಟ್ಟಿಕಾಡಲಿದೆ. ಮಾಡಿದುಣ್ಣೋ ಮಹಾರಾಯ ಎನ್ನುವಂತೆ ಅವರಿಗೆ ಎಲ್ಲಾ ಸಮಾಜಗಳು ಜಾಗೃತಗೊಂಡು ತಕ್ಕ ಶಾಸ್ತಿ ಮಾಡಲಿವೆ, ಧ್ವನಿ ಇಲ್ಲದ ಸಮಾಜಗಳಿಗೆ ಧ್ವನಿಯಾಗಬೇಕಾದವರು ಸಣ್ಣ ಮಾತುಗಳನ್ನಾಡುವ ಮೂಲಕ ಆತ್ಮ ಸ್ಥೆöÊರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕ್ಷೇತ್ರದ ಹಲವು ಕೆಲಸ ಮಾಡಿದ್ದು ಗಂಗಾವತಿಗೆ ಸಂಬAಧಿಸಿದAತೆ ತಾತ್ಸಾರ ಭಾವನೆಯಿಂದ ನೋಡುತ್ತಿದ್ದಾರೆ ಸಚಿವರು ಸಮಾಜದ ಶಾಪಕ್ಕೆ ಗುರಿಯಾಗಲಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ. ಮಂಜುನಾಥ ಕನಕಗಿರಿ, ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ನಿರುಪಾದಿ ಕೇಸರಹಟ್ಟಿ,ಉಪಾಧ್ಯಕ್ಷ ಭೀಮನಗೌಡ ಹೆಚ್,ಕಾರ್ಯದರ್ಶಿ ಶಿವಣ್ಣ ನೀಲಕಮ್, ಖಜಾಂಚಿ ಶರಣಪ್ಪ ಹೆಚ್,ಸಂಘಟನಾ ಕಾರ್ಯದರ್ಶಿ ಶರಣಬಸವಗೌಡ ವೀರಭದ್ರಪ್ಪ, ಸಮಾಜದ ಮುಖಂಡರಾದ ಪಂಪಾಪತಿ ಹೊಸಳ್ಳಿ,ಶರಣಪ್ಪ ಅರಿಕೇರಿ,ವಿಕ್ರಮ್ ಪಾಟೀಲ್, ಮಹಾತೇಶ ಹಣವಾಳ,ಯಮನೂರ ಹೆಚ್,ರಮೇಶ,ಮಾರುತಿ,ವಿರೂಪಣ್ಣ,ಹೆಚ್.ಸುರೇಶ,ಸೇರಿದಂತೆ ಇತರರು ಇದ್ದರು

