ಉಚಿತ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ… ಮಹಿಳೆಯರ ಸ್ವಾವಲಂಬಿ ಬದುಕಿಗೆ ಉಚಿತ ತರಬೇತಿ ಶಿಬಿರಗಳು ಸಹಕಾರಿ… ಚನ್ನಬಸಯ್ಯಸ್ವಾಮಿ…

ಉಚಿತ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ… ಮಹಿಳೆಯರ ಸ್ವಾವಲಂಬಿ ಬದುಕಿಗೆ ಉಚಿತ ತರಬೇತಿ ಶಿಬಿರಗಳು ಸಹಕಾರಿ… ಚನ್ನಬಸಯ್ಯಸ್ವಾಮಿ…

ಗಂಗಾವತಿ. ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಬಯೋಕಾನ್ ಸಂಸ್ಥೆಯ ರಿಚ್ ಹೈಯರ್ ಫೌಂಡೇಶನ್ ಕಳೆದ 15 ನಾಲ್ಕು 25 ರಿಂದ ಪ್ರಾರಂಭಗೊಳಿಸಿದ ಉಚಿತ l ಬ್ಯೂಟಿಷಿಯನ್ ತರಬೇತಿ ಶಿಬಿರದ ಮೂರು ತಿಂಗಳ ತರಬೇತಿ ಶಿಬಿರವು ಕಾಲೇಜಿನ ಆವರದಲ್ಲಿ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಉಪಾಧ್ಯಕ್ಷ ಚನ್ನಬಸಯ್ಯಸ್ವಾಮಿ ಮಾತನಾಡಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಾರಿಗೆ ಬಯೋಕಾನ್ ಸಂಸ್ಥೆಯು ರಿಚ್ ಹೈಯರ್ ಸಂಸ್ಥೆಯ ನೇತೃತ್ವದಲ್ಲಿ ಉಚಿತ ತರಬೇತಿ ಕಾರ್ಯಗಾರವನ್ನು ಆಯೋಜಿಸಿದ್ದು ಭಾಗದ ಮಹಿಳೆಯರಿಗೆ ಅತ್ಯಂತ ಸಹಕಾರಿಯಾಗಿದೆ.

ತರಬೇತಿಯ ಆರಂಭದಲ್ಲಿ 80 ಅರ್ಜಿಗಳು ಬಂದಿದ್ದು ಅವುಗಳಲ್ಲಿ 25 ಜನ ಮಹಿಳೆಯರನ್ನು ಆಯ್ಕೆಗೊಳಿಸುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ಅಂತಹ ಉತ್ತಮ ಪ್ರತಿಕ್ರಿಯೆ ಮಹಿಳೆಯರಿಂದ ದೊರೆತಿರುವುದು ಮುಂದಿನ ದಿನಗಳಲ್ಲಿ ಬಯೋಕಾನ್ ಸಂಸ್ಥೆ ಅವಕಾಶ ಕಲ್ಪಿಸಿದಲ್ಲಿ ಹೆಚ್ಚು ಹೆಚ್ಚು ಅನುಕೂಲಗಳನ್ನು ವಿದ್ಯಾವರ್ಧಕ ಸಂಸ್ಥೆ ಕಲ್ಪಿಸಲಿದೆ ಎಂಬ ಭರವಸೆಯನ್ನು ನೀಡಿದರು. ವಾಣಿಜ್ಯ ಮಹಾ ವಿದ್ಯಾಲಯದ ಪ್ರಾಚಾರ್ಯ ಈ ಬಸವರಾಜ್ ಅಯೋಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಆತ್ಮೀಯ ಮಿತ್ರರಾಗಿದ್ದೆ ಪ್ರಾಚಾರ್ಯ ಭೀಮ್ ಸೇನ್ ಆಚಾರ್ ಅವರ ಸಹಕಾರದ ಮೇರೆಗೆ ಬೃಹತ್ ಸಂಸ್ಥೆಯು ಸಮಾಜಮುಖಿ ಕಾರ್ಯದ ಅಡಿಯಲ್ಲಿ ಪ್ರಥಮವಾಗಿ ನಮಗೆ ದೊರೆತಿದ್ದು ಇಲ್ಲಿನ ಮಹಿಳೆಯರ ಬಾಳಿಗೆ ದೀಪವಾಗಿದೆ. ತರಬೇತಿ ಪಡೆದ ಫಲಾನುಭವಿಗಳಿಗೆ ಬ್ಯೂಟಿಷಿಯನ್ ಅರ್ಹತಾ ಪ್ರಮಾಣ ಪತ್ರದ ಜೊತೆಗೆ ಉಚಿತ ಕಿಟ್ಟುಗಳನ್ನು ( ಸೌಂದರ್ಯವರ್ಧಕ ) ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬೈಯೋಕಾನ್ ಸಂಸ್ಥೆಯ ಕಮಿಟಿ ಅಧಿಕಾರಿ ಗುರುರಾಜ್ ಯುಎಸ್ ಭೀಮ್ಸೇನ್ ಆಚಾರ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಫಲಾನುಭವಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ವೇದಿಕೆಯಲ್ಲಿ ನಿಂಗಪ್ಪ ಕಮತಗಿ ತರಬೇತಿದಾರರಾದ ಪವಿತ್ರ ಇತರರು ಕಾರ್ಯಕ್ರಮದ ಸಂಘಟಿಕರನ್ನು ಸನ್ಮಾನಿಸಿ ಗೌರವಿಸಿದರು. ಉಪನ್ಯಾಸಕಿ ಜಯ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು.

Leave a Reply

Your email address will not be published. Required fields are marked *