ಗಂಗಾವತಿಯ ಲಿಟಲ್ ಹಾರ್ಟ್ ಶಾಲೆಯಲ್ಲಿ ನಡೆದ ವೃತ್ತಿಪರರ ವೇಷಭೂಷಣದಲ್ಲಿ ಭಾಗಿಯಾಗಿದ್ದ ಮಕ್ಕಳು.

ಗಂಗಾವತಿ ಜ.18:ನಗರದ ಹೊಸಳ್ಳಿ ರಸ್ತೆಯಲ್ಲಿರುವ ಲಿಟಲ್ ಹಾರ್ಟ್ ಶಾಲೆಯಲ್ಲಿ ಶನಿವಾರ ವಿನೂತನ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಿಂಡರ್ ಗಾರ್ಡನ್ (ಪೂರ್ವ ಪ್ರಾಥ ಮಿಕ) ಹಂತದ ಮಕ್ಕಳಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ವೃತ್ತಿಪರರ ಪಥ ಸಂಚಲನ (ಪ್ರೊಫೈಷನಲ್ಸ್ ಪರೇಡ್) ಹಮ್ಮಿಕೊಳ್ಳಲಾಗಿತ್ತು. ಸಮುದಾಯದಲ್ಲಿ ಸಹಾಯ ಏಕರಾಗಿ ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್, ಆಕ್ಟರ್, ಡಾಕ್ಟರ್, ಇಂಜಿನಿ ಯರ್, ರೈತರು, ಪೈಲೆಟ್, ಟೀಚರ್, ಲಾಯರ್, ಜರ್ನಾ ಲಿಸ್ಟ್ ಮೊದಲಾದವರ ವೇಷಭೂಷಣಗಳಲ್ಲಿ ಪ್ಲೇ ಹೋಮ್, ನರ್ಸರಿ, ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳು ಮಿಮಚಿ ದರು.ಮಕ್ಕಳು, ತಾವು ತೊಟ್ಟಿದ್ದ ವೇಷಭೂಷಣಕ್ಕೆ ತಕ್ಕಂತೆ ನಟನೆ ಮಾಡುವುದು, ವೃತ್ತಿಪರರನ್ನು ಅನುಕರಣೆ ಮಾಡಿದರು. ಇನ್ನು ಕೆಲ ಮಕ್ಕಳು ನೃತ್ಯ ಮಾಡುವ ಮೂಲಕ ಪಾಲಕರು, ಶಿಕ್ಷಕರನ್ನು ರಂಜಿಸಿದರು.ಶಾಲೆಯ ಹಳೇಯ ವಿದ್ಯಾರ್ಥಿ ಗಳನ್ನೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾ ನಿ ಸಲಾಗಿತ್ತು.ಮಕ್ಕಳು ಪಾಲಕರಿಗೂ ಟಾಸ್ಕ್ ನೀಡಿದ್ದ ಶಾಲೆಯ ಆಡಳಿತ ಮಂಡಳಿಯು, ಅವರಿಗಿಷ್ಟವಾ ಗುವ ವೃತ್ತಿಯ ವೇಷಭೂಷಣ ಗಳಲ್ಲಿ ಬರುವಂತೆ ಕೋರಲಾ ಗಿತ್ತು. ಅತ್ಯುತ್ತಮ ವೇಷಭೂಷಣದಲ್ಲಿ ಭಾಗವಹಿಸಿದ ಪಾಲಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ವೇದಿಕೆಯಲ್ಲಿ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯಶಿಕ್ಷಕಿ ಪ್ರಿಯಾಕುಮಾರಿ ಶಾಲೆಯ ಹಳೇಯ ವಿದ್ಯಾಥಿಗಳಾದ ನಟ ಅಭಿಷೇಕ್ ರಾಥೋಡ್, ಇಂಜಿ ನಿಯರ್ ಸುಪ್ರೀತ್, ಡೆಂಟಿಸ್ಟ್ ಝಾಬೀಯಾ, ಶಿಕ್ಷಕಿ ಐಶ್ವರ್ಯ, ಉದ್ಯಮಿಗಳಾದರಿಷಬ್ ಬಾಂಟಿಯ, ಸೂರ್ಯ, ಜಮೀ ರ್ ಬಾಬಾ, ವಕೀಲ ಪ್ರದೀಪ್, ನೃತ್ಯ ನಿರ್ದೇಶಕ ಹೇಮಂತ್, ಮೆನ್ಸ್ ಸಲೂನ್ ಸಚಿನ್, ಬ್ಯೂಟಿಷಿಯನ್ ಶಾಲಿನಿ, ರೈತ ಶಿವಪ್ರಸಾದ್, ಲೆಕ್ಕಿಗ ಅಕ್ಷಯ ಕುಮಾರ್, ಪೊಲೀಸ್ ಪೇದೆ ಮಂಜುನಾಥ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸದಸ್ಯ ಕೆ.ಎಂ.ಶರಣಯ್ಯಸ್ವಾಮಿ ಇದ್ದರು.

