ಫೆಬ್ರವರಿ 11, 12ರಂದು ಕಂಪ್ಲಿ ಉತ್ಸವ : ಶಾಸಕ ಜೆ.ಎನ್.ಗಣೇಶ…

ಫೆಬ್ರವರಿ 11, 12ರಂದು ಕಂಪ್ಲಿ ಉತ್ಸವ : ಶಾಸಕ ಜೆ.ಎನ್.ಗಣೇಶ…

ಕಂಪ್ಲಿ: ಫೆಬ್ರವರಿ 11 ಮತ್ತು 12ರಂದು ಎರಡು ದಿನ ಕಂಪ್ಲಿ ಉತ್ಸವ ಹಾಗೂ 15, 16ರಂದು ಕುಡುಗೋಡು ಉತ್ಸವ ನಡೆಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ಕೊಟ್ಟಾಲ್ ನಲ್ಲಿ ನಡೆದ 2024-25ನೇ ಸಾಲಿನ ಕೆಕೆಆರ್ಡಿಬಿ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈ ಬಾರಿಯ ಉತ್ಸವಕ್ಕೆ ಸರ್ಕಾರದಿಂದ 5ಕೋಟಿ ನೀಡುವಂತೆ ಪ್ರಸ್ತಾಪ ಮಾಡಿದ್ದು, ಆದರೆ, ಒಂದೆರಡು ಕೋಟಿ ನೀಡುವುದಾಗಿ ತಿಳಿಸಿದರಿಂದ ಇಷ್ಟರಲ್ಲಿ ಉತ್ಸವ ಮಾಡಲು ಸಮಸ್ಯೆಯಾಗುತ್ತದೆ. ಆದ್ದರಿಂದ ಇನ್ನಷ್ಟು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಕಂಪ್ಲಿ ತಾಲೂಕು ಸೇರಿದಂತೆ ಕ್ಷೇತ್ರದ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.ನಂತರ ಮುಖಂಡ ಎಂ.ಸುಧೀರ್ ಮಾತನಾಡಿ, ಇಲ್ಲಿನ ಸ್ಮಶಾನದ ಸುತ್ತಲು ಹದ್ದುಬಸ್ತು ಮಾಡಿ, ಅಭಿವೃದ್ಧಿಗೊಳಿಸಿ, ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲಿನ ನಾರಿಹಳ್ಳದಲ್ಲಿ ತುಂಬಿರುವ ಹೂಳು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಿಡಿಒ ಅಪರಂಜಿ, ಮುಖಂಡರಾದ ಎಂ.ಸುಧೀರ್, ಕೆ.ರವಿಚಂದ್ರ, ಸುಧಾಕರ, ಈರಣ್ಣ, ದುಬ್ಬಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *