ದಿವಂಗತ ಭೀಮಣ್ಣ ಖಂಡ್ರೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ..

ಕಂಪ್ಲಿ: ಸ್ವಾತಂತ್ರ‍್ಯ ಹೋರಾಟಗಾರರು,ಕರ್ನಾಟಕ ಏಕೀಕರಣದ ಹೋರಾಟಗಾರರು, ಅಖಿಲ ಭಾರತ ವಿರಶೈವ ಮಹಾಸಭೆಯ ಮಾಜಿ ರಾಷ್ಟ್ರೀಯ ಅಧ್ಯಕ್ಷರು,ಮಾಜಿ ಸಚಿವರಾದ ದಿವಂಗತ ಭೀಮಣ್ಣ ಖಂಡ್ರೆಯವರ ನಿಧನಕ್ಕೆ ಕಂಪ್ಲಿ ಪಟ್ಟಣದ ವೀರಶೈವ ಸಂಘದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ವೀರಶೈವ ಸಂಘದ ಶಾರದಾ ಶಾಲೆಯ ಆವರಣದಲ್ಲಿ ದಿವಂಗತ ಭೀಮಣ್ಣ ಖಂಡ್ರೆಯವರ ಭಾವಚಿತ್ರಕ್ಕೆವಿಶೇಷ ಪೂಜೆಯನ್ನು ಸಲ್ಲಿಸಿ ಸಂಘದ ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಸಮಾಜದ ಪದಾಧಿಕಾರಿಗಳು, ಸಮಾಜದ ಮುಖಂಡರು, ಶಿಕ್ಷಕರು ವಿದ್ಯಾರ್ಥಿಗಳು ಪುಷ್ಪಾರ್ಪಣೆ ಸಲ್ಲಿಸಿದರು.ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿ, ಸ್ವಾತಂತ್ರ‍್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ಧುರೀಣರಾಗಿ, ರಾಜ್ಯ ಸರ್ಕಾದ ಸಚಿವರಾಗಿ ಹೈದರಾಬಾದ ಕರ್ನಾಟಕ ವಿಮೋಚನಾ ಚಳುವಳಿಯ ನೇತಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಅದ್ಬುತವಾದ ಸೇವೆಯನ್ನು ಮಾಡಿದ್ದರೆಂದು ಸ್ಮರಿಸಿದ ಅವರು ವೀರಶೈವ ಸಮಾಜದ ಹಿರಿಯ ಚೇತನ, ನಾಡಿನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡು ನಮ್ಮ ಸಮಾಜ ಹಾಗೂ ರಾಜ್ಯ ಬಡವಾಗಿದೆ ಎಂದು ಅನೇಕ ಗಣ್ಯರು ಕಂಬನಿ ಮಿಡಿದರು.ನಂತರ ಮೃತರ ಸ್ಮರಣಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಪದಾಧಿಕಾರಿಗಳು, ವೀರಶೈವ ಸಮಾಜದ ಮುಖಂಡರು, ಅಖಿಲ ಭಾರತ ವಿರಶೈವ ಮಹಾಸಭಾ ತಾಲ್ಲೂಕು ಘಟಕದ ಪದಾದಿಕಾರಿಗಳು, ವೀರಶೈವ ಸಂಘದ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
