ಛತ್ರಪತಿ ಶಿವಾಜಿ ಮಹಾರಾಜರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆ : ಜೂಗಲ್ ಮಂಜುನಾಯಕ.

ಛತ್ರಪತಿ ಶಿವಾಜಿ ಮಹಾರಾಜರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆ : ಜೂಗಲ್ ಮಂಜುನಾಯಕ.

ಬಳ್ಳಾರಿ / ಕಂಪ್ಲಿ: ದೇಶದಲ್ಲಿ ಹಿಂದೂ ಸಮಾಜದ ಉಳಿವಿಗಾಗಿ ಹೋರಾಟ ಮಾಡಿದ ,ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ ಎಂದು ತಹಸಿಲ್ದಾರ್ ಜೂಗಲಾ ಮಂಜುನಾಯಕ ತಿಳಿಸಿದರು.ಅವರು ಗುರುವಾರ ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಶಿವಾಜಿ ಮಹಾರಾಜರು ಮರಾಠ ಸಾಮ್ರಾಜ್ಯದ ಸ್ಥಾಪಕ ಹಾಗೂ ಭಾರತದ ಶ್ರೇಷ್ಠ ಯೋಧರಲ್ಲಿ ಒಬ್ಬರಾಗಿದ್ದರು. 1630ರಲ್ಲಿ ಜನಿಸಿದ ಇವರು ಜೀಜಾಬಾಯಿ ಮತ್ತು ದಾದಾಜಿ ಕೊಂಡದೇವರಿಂದ ಶಿಕ್ಷಣ ಪಡೆದ ಇವರು ಗೆರಿಲ್ಲ ಯುದ್ದತಂತ್ರ, ಬಲವಾದ ನೌಕಾಪಡೆ ಮತ್ತು ಹಿಂದವಿ ಸ್ವರಾಜ್ಯದ ಕನಸಿನೊಂದಿಗೆ ಮಿಘಲರು ಮತ್ತು ಆದಿಲ್ ಶಾಹಿಯನ್ನು ಎದುರಿಸಿ 1674ರಲ್ಲಿ ಛತ್ರಪತಿಯಾಗಿ ಪಟ್ಟಭಿಷೇಕ ಮಾಡಿಕೊಂಡರು.ಸಣ್ಣ ವಯಸ್ಸಿನಲ್ಲಿಯೇ ತೋರಣಕೋಟೆಯನ್ನು ವಶಪಡಿಸಿಕೊಂಡು ತಮ್ಮ ಶೌರ್ಯವನ್ನು ಪ್ರರ್ಶಿಸಿದರು. ಇವರು ಅಷ್ಟಪ್ರಧಾನ ಮಂಡಳಿಯ ಮೂಲಕ ಸುಸಜ್ಜಿತ ಆಡಳಿತವನ್ನು ನೀಡಿದರು.ಮಹಿಳೆಯರು,ರೈತರು ಮತ್ತು ಎಲ್ಲಾ ಧರ್ಮಗಳಿಗೆ ಗೌರವವನ್ನು ನೀಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಯೋಧರಲ್ಲ, ಬದಲಾಗಿ ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಅವರ ಧೈರ್ಯಮತ್ತು ದೇಶಭಕ್ತಿ ಇಂದಿಗೂ ಪ್ರೇರಣೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೆದಾರರಾದ ಎಸ್.ಕೆ.ರಮೇಶ್, ಮಾಲತೇಶ ದೇಶಪಾಂಡೆ, ಸುರೇಶ್, ಲಕ್ಷ್ಮಣ ನಾಯಕ, ವೈಷ್ಣವಿ ಉಪ್ಪಾರ್, ರಾಧ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *