ಪಾಲಕರಲ್ಲಿ ಕ್ರೀಡಾ ಮನೋಭಾವ ಮೂಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಪಾಲಕರು ಹೆಚ್ಚಿಸಬೇಕು : ಶ್ರೀದೇವಿ ಕೊಲ್ಲಾ…

ಪಾಲಕರಲ್ಲಿ ಕ್ರೀಡಾ ಮನೋಭಾವ ಮೂಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಪಾಲಕರು ಹೆಚ್ಚಿಸಬೇಕು : ಶ್ರೀದೇವಿ ಕೊಲ್ಲಾ…

ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಪಾಲಕರಿಗೆ ಕ್ರೀಡಾಕೂಟ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ಕಾರ್ಯಕ್ರಮ ಜರಗಿತು. ಈ ವೇಳೆ ​ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮತ್ತು ರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ ಪೂಜೆ ಮಾಡಲಾಯಿತು.ಈ ವೇಳೆ ICSE ಪ್ರಾಂಶುಪಾಲರು ಶ್ರೀದೇವಿ ಕೊಲ್ಲಾ ಮಾತನಾಡಿ ಪಾಲಕರಲ್ಲಿ ಕ್ರೀಡಾ ಮನೋಭಾವ ಮೂಡಿಸಲು, ಒತ್ತಡ ಕಡಿಮೆ ಮಾಡಲು ಮತ್ತು ಶಾಲೆ-ಪಾಲಕರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇವುಗಳಲ್ಲಿ ಓಟ, ಗ್ಲಾಸ್ ಜೋಡಣೆ, ಚಂಡು ಎಸೆತ,ರಿಂಗ್ ಸ್ಪರ್ಧೆ ಮೋಜಿನ ಆಟಗಳನ್ನು ಆಯೋಜಿಸಲಾಗಿದೆ, ಪಾಲಕರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ .

ಅವರಿಗೆ ಧನ್ಯವಾದಗಳು. ಅದೇ ರೀತಿ ಕೆಜಿ ಗ್ರಾಜುಯೇಷನ್ ಡೇ (KG Graduation Day) ಯುಕೆಜಿ (UKG) ಮುಗಿಸಿ ಪ್ರಾಥಮಿಕ ಶಾಲೆಗೆ ಕಾಲಿಡುತ್ತಿರುವ ಪುಟಾಣಿಗಳ ಕಲಿಕೆಯ ಮೊದಲ ಮೈಲಿಗಲ್ಲನ್ನು ಆಚರಿಸುವ ವಿಶೇಷ ಸಮಾರಂಭವಾಗಿದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಪದವಿ ಪ್ರಮಾಣಪತ್ರಗಳನ್ನು ನೀಡಿ ಅವರ ಸಾಧನೆಯನ್ನು ಸಂಭ್ರಮಿಸುವ ಸಂತೋಷದ ದಿನವಾಗಿದೆ ಎಂದರು. ಕೆಜಿ ವಿದ್ಯಾರ್ಥಿಗಳು ಮಾರ್ಚ್ ಫಾಸ್ಟ್, ಕ್ರೀಡಾ ಜ್ಯೋತಿ ತರುವುದು ವಿಶೇಷವಾಗಿತ್ತು ಪಾಲಕರು ಮೆಚ್ಚಿ ಪ್ರಶಂಶಿಸಿದರು. ನಂತರ ಸ್ಪರ್ಧೆಯಲ್ಲಿ ವಿಜೇತರಾದ ಪಾಲಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ,ಪ್ರಾಂಶುಪಾಲರು ಡಾ.ಮಹಮ್ಮದ್ ರಫೀಕ್, ಸಾಜಿದ ಬೇಗಂ, ಸೌಮ್ಯದೇವಿ,ಗಂಗಮ್ಮ, ಶಿಕ್ಷಕಿಯರು ಅಪರ್ಣ, ಶ್ವೇತಾ, ಪ್ರತಿಭಾ, ಹೇಮಾ, ಮೇರಿ, ರಮಾದೇವಿ, ಗೋಪಿಕೃಷ್ಣ, ಬಸವರಾಜ್, ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *