ಪ್ರಶಂಸನಾ ಪತ್ರದೊಂದಿಗೆ ಗೌರವ ಸಮರ್ಪಣೆ….

ಪ್ರಶಂಸನಾ ಪತ್ರದೊಂದಿಗೆ ಗೌರವ ಸಮರ್ಪಣೆ.

ಗಂಗಾವತಿ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಾಣಾಪುರ ಕೆರೆಯ ಹತ್ತಿರ ವಿದೇಶಿ ಪ್ರವಾಸಿಗರ ಸಹಿತ ನಾಲ್ಕು ಜನರು ನಿಸರ್ಗ ವೀಕ್ಷಣೆಯಲ್ಲಿದ್ದಾಗ ಅಪರಾಧಿಗಳು ಪ್ರವಾಸಿಗೆ ಮೇಲೆ ದೈಹಿಕ ಹಲ್ಲೆ ಮಾಡಿ ಹರಿಯುತ್ತಿದ್ದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ತಳ್ಳಿದ್ದರಿಂದ ಒಬ್ಬ ಪ್ರವಾಸಿಗನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಹಾಗೂ ಅಪರಾದಿಗಳು ಪಿರ್ಯಾದಿ ಮತ್ತು ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಪ್ರವಾಸಿಗರ ಬಳಿ ಇದ್ದ ಹಣಮತ್ತು ಮೊಬೈಲ್ ಕಿತ್ತುಕೊಂಡು ಹೋಗಿರುವ ಘಟನೆಯ ಬಗ್ಗೆ ದಾಖಲಾದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ-ನಂ-73/2025, 0-103, 309(3),311, 64(2), (2), 70(1). 109 ಅಪರಾಧಿಗಳಿಗೆ & 3(5) 2.2.2 ಪ್ರಕರಣದಲ್ಲಿ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿತರನ್ನು ಪತ್ತೆ ಮಾಡಿ, ಪ್ರಕರಣ ಭೇದಿಸಿ ನಂತರ ಮಾನ್ಯ ನ್ಯಾಯಾಲಯದಲ್ಲಿ ಮರಣ ದಂಡನೆ ಶಿಕ್ಷೆಯಾಗಿದ್ದು ಇರುತ್ತದೆ.ನೀವು ಪ್ರಕರಣದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತ ದೇಹವನ್ನು ಚಾಣಾಕ್ಷತೆಯಿಂದ ಪತ್ತೆ ಮಾಡುವಲ್ಲ ಮತ್ತು ಮಾನ್ಯ ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ಕೊಡಿಸುವಲ್ಲಿ ಮತ್ತು ಸಂತ್ರಸ್ಥರಿಗೆಕರ್ತವ್ಯ ನಿರ್ವಹಿಸಿರುತ್ತೀರಿ. ನಿಮ್ಮ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸುತ್ತಾ ಈ ಪ್ರಶಂಸನಾ ಪತ್ರವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತೀರೆಂದು ಗೌರವಿಸಿ ಡಾ| ಪಿ.ಎಸ್. ಹರ್ಷ ಪೊಲೀಸ್ ಮಹಾ ನಿರೀಕ್ಷಕರು. ಬಳ್ಳಾರಿ ವಲಯ, ಬಳ್ಳಾರಿ ಇವರ ಆದೇಶದಂತೆ ಸಿಪಿಐ ಆರ್.ಹೆಚ್.ದೊಡ್ಡಮನಿ ಇವರು ಪ್ರಶಂಸನಾ ಪತ್ರವನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಬಸವರಾಜ ಚಿನ್ನೂರು ಇವರಿಗೆ ನೀಡಿದರು.

Leave a Reply

Your email address will not be published. Required fields are marked *