ಸಾಹಿತಿ ಸ.ರಾ .ಸುಳಕೂಡೆಯರ ಕೃತಿ ಲೋಕಾರ್ಪಣೆ- ವಚನಗಳ ಉಕ್ತಿಗಳು ಜೀವನದ ದಾರಿದೀಪ ಇದ್ದಂತೆ. ಯು. ಎನ್. ಸಂಗನಾಳಮಠ…

ಬೆಳಗಾವಿ.18. ಚಿಂತನ ಚಾವಡಿ ಬಳಗದ ವತಿಯಿಂದ ಲಕ್ಷ್ಮಿ ಪ್ರಿಂಟರ್ಸ್ ಆಟೋ ನಗರ ಬೆಳಗಾವಿಯಲ್ಲಿ ದಿ 18ರಂದು ಸ.ರಾ.ಸುಳಕೂಡೆಯವರ ಸಂಪ್ರತಿ ವಚನಗಳು ಸಂಭೃತ ವಚನಗಳು ಪುಸ್ತಕ ಲೋಕಾಪ೯ಣೆ ಸಮಾರಂಭ ಜರುಗಿತು. ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಯು .ಎನ್ .ಸಂಗನಾಳಮಠ ಮಾತನಾಡಿ ಶರಣರ ವಚನಗಳು ಅವರು ನುಡಿದಂತೆ ನಡೆದರು. ಹಡೆ೯ಕರ ಮಂಜಪ್ಪ ಅವರು ಪ್ರಭುದೇವ ಅಂಕಿತ ಇಟ್ಟು 33 ಆಧುನಿಕ ವಚನ ಬರೆದ ಮೊದಲಿಗರು. 1963 ರಲ್ಲಿ ಎಸ್. ವಿ .ರಂಗಣ್ಣ 1012 ಆಧುನಿಕ ವಚನ ಬರೆದು ದ್ವಿತೀಯರಾದರು ಎಂದು ತಿಳಿಸಿದರು. ಆಧುನಿಕ ವಚನಗಳು ಎಲ್ಲರಿಗೂ ತಿಳಿಯುವಂತೆ ಇರುತ್ತವೆ. ವಿಶೇಷವಾಗಿ ವಚನಗಳು ಜನಸಾಮಾನ್ಯರ ಜೀವನದ ದಾರಿದೀಪವಿದ್ದಂತೆ .ಅವುಗಳನ್ನು ಆಚರಣೆಯಲ್ಲಿ ತರುವಂತಾಗಬೇಕು ಎಂದರು. ಯು. ಎನ್. ಸಂಗನಾಳಮಠ ಹಿರಿಯ ಸಾಹಿತಿ ಮೃತ್ಯುಂಜಯಸ್ವಾಮಿಗಳು ಹಿರೇಮಠ ಪುಸ್ತಕ ಲೋಕಾರ್ಪಣೆ ಮಾಡಿ ಈ ವಚನಗಳು ತ್ರಿಪದಿ, ಚೌಪದಿಯಲ್ಲಿವೆ ,ಸಮುದಾಯಕ್ಕೆ ದಾರಿದೀಪವಾಗುತ್ತವೆ. ಕೈಮಾರ ಎಂದರೆ ದಾರಿ ತೋರಿಸುವ ಮಾರ್ಗ ,ಕತ್ತಲಲ್ಲಿ ಬೆಳಕು ಇದ್ದಂತೆ .ತನ್ನನ್ನು ತಾನು ಎಂದು ಹೊಗಳಿಕೊಳ್ಳಬಾರದು. ಬೇರೆಯವರು ತಿಳಿಸಬೇಕು. ಇಂದು ಜಗತ್ತು ವಿಕಾಸವಾಗುತ್ತಿದೆ.

ಹಾಗೆ ವಿನಾಶವಾಗುತ್ತಿದೆ. ಅದಕ್ಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತ ನಾವು ಸಾಗಬೇಕು ಎಂದರು. ಯುವ ಸಾಹಿತಿ ಸವಿತಾ ವಿರುಪಾಕ್ಷಿ ಪುಸ್ತಕ ಪರಿಚಯ ಮಾಡಿದರು. ಒಂದರಲ್ಲಿ 555 ವಚನವಿದ್ದರೆ, ಮತ್ತೊಂದರಲ್ಲಿ 495 ಆಧುನಿಕ ವಚನಗಳಿವೆ. ಚಿಕ್ಕ ಮಕ್ಕಳಿಗೂ ಅರ್ಥವಾಗುವಂತೆ ವಚನಗಳು ಇವೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸ.ರಾ.ಸುಳಕೂಡೆಯವರು ಕೃತಿ ಕುರಿತು ಮಾತನಾಡಿದರು. ವಿಜಯ ಮುಚಳಂಬಿ, ಆರ್. ಬಿ .ಬನಶಂಕರಿ. ಸುರೇಶ ಹಂಜಿ, ಎಸ್.ಜಿ.ಮಡಿವಾಳರ,ಮಲ್ಲಿಕಾಜು೯ನ ಜುಗತಿ,ವಿಜಯ ಬಡಿಗೇರ,ಕುಮಾರ ಮುಚಳಂಬಿ, ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.ಕಾಯ೯ಕ್ರಮ ಆರಂಭದಲ್ಲಿ ಅಶೋಕ ಉಳ್ಳೆಗಡ್ಡಿ,ಸವ೯ರನ್ನೂ ಸ್ವಾಗತಿಸಿದರು,ಶ್ರೀರಂಗ ಜೋಷಿ,ಪ್ರಾಥಿ೯ಸಿದರು.ಎಂ.ವೈ.ಮೆಣಸಿನಕಾಯಿ.ನಿರೂಪಿಸಿದರು.ಬಿ.ಬಿ.ಮಠಪತಿ ಕೊನೆಯಲ್ಲಿ ವಂದಿಸಿದರು. ಜಿ

